ಪುತ್ತೂರು: ವನಮಹೋತ್ಸವದ ಪ್ರಯುಕ್ತ ಸಾಮಾಜಿಕ ಜಾಗೃತಿ ಯೋಜನೆಯಡಿಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಹಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಕಾರಿಯ ಸುಳ್ಯ, ಬೆಳ್ಳಾರೆ, ದರ್ಬೆ, ಎಂ ಎಸ್ ರಸ್ತೆ, ವಿಟ್ಲ ಶಾಖೆಗಳಲ್ಲಿ ಹಲವು ಬಗೆಯ ಸುಮಾರು 300 ಗಿಡಗಳನ್ನು ಸಹಕಾರಿಯ ಸದಸ್ಯರಿಗೆ ವಿತರಿಸಲಾಯಿತು.
ಸಹಕಾರಿಯ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕರಾದ ಶಿವಪ್ರಸಾದ್ ಪೆರುವಾಜೆ ಸಸಿಗಳನ್ನು ವಿತರಿಸಿ ನಾವು ಸಸಿಗಳನ್ನು ನೆಟ್ಟು ಬೆಳೆಸಿ ಸ್ವಚ್ಛ ಮತ್ತು ಸುಂದರ ಪರಿಸರವನ್ನು ನಿರ್ಮಾಣ ಮಾಡುವುದರೊಂದಿಗೆ ಭೂತಾಯಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ಹೇಳಿದರು. ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಪಿನ್ ಚಂದ್ರ ಕಾರ್ಯಕ್ರಮವನ್ನು ನಿರ್ವಹಿಸಿದರು.