ಗ್ರಾಮೀಣ ಕೂಟ ಸಂಸ್ಥೆಯಿಂದ ಪುತ್ತೂರು ಪ್ರೆಸ್ ಕ್ಲಬ್‌ಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸದಸ್ಯರಿಗೆ ಸಾಲ ಸೌಲಭ್ಯದ ಜೊತೆಗೆ ಸಾಮಾಜಿಕ ಕಾರ್ಯಕ್ರಮ – ಮಂಜುನಾಥ

ಪುತ್ತೂರು: ಪುತ್ತೂರಿನ ಬನ್ನೂರಿನಲ್ಲಿ ಶಾಖಾ ಸಂಸ್ಥೆ ಹೊಂದಿರುವ ಗ್ರಾಮೀಣ ಕೂಟ ಸಂಸ್ಥೆಯಿಂದ ಜೂ. 11ರಂದು ಪುತ್ತೂರು ಪ್ರೆಸ್ ಕ್ಲಬ್‌ಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿದರು.

ಮಂಗಳೂರು, ಉಡುಪಿ ವ್ಯಾಪ್ತಿ ಬ್ಯಾಂಕ್‌ನ ಡಿವಿಜಿನಲ್ ಮೆನೇಜರ್ ಮಂಜುನಾಥ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್‌ನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದಿನ್ ಸಂಪ್ಯ ಅವರಿಗೆ ಹಸ್ತಾಂತರಿಸಿದರು. ಬಳಿಕ ಅವರು ಮಾತನಾಡಿ ಆರ್.ಬಿ.ಐ ಮಾರ್ಗದರ್ಶನಂತೆ ನಡೆಯುತ್ತಿರುವ ನಮ್ಮ ಸಂಸ್ಥೆ ಸುಮಾರು 21 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರವಲ್ಲದೆ 13 ರಾಜ್ಯಗಳಲ್ಲಿ ನಮ್ಮ ಸಂಸ್ಥೆ ಕಾರ್ಯವ್ಯಾಪ್ತಿ ಹೊಂದಿದೆ.

ನಮ್ಮ ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲೂ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಾರಿ ಕೊರೋನಾ ವೈರಸ್‌ನಲ್ಲಿ ತಮ್ಮ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯಕ್ಕಾಗಿ ಕಾರ್ಯ ನಡೆಸುತ್ತಿರುವ ಪೊಲೀಸ್, ವೈದ್ಯರು, ಪೌರ ಕಾರ್ಮಿಕರು ಸೇರಿದಂತೆ ಪತ್ರಿಕಾ ಮಾಧ್ಯಮದವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡುತ್ತಿದ್ದು, ಇದೀಗ ಪುತ್ತೂರಿನಲ್ಲೂ ವಿತರಣಾ ಕಾರ್ಯ ಮಾಡಲಾಗುತ್ತಿದೆ.

ಮುಂದೆ ಗ್ರಾಮೀಣ ಭಾಗದಲ್ಲಿ ಪ್ರತಿ ಗ್ರಾ.ಪಂ ಗೂ ತೆರಳಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ಕೂಟ ಸಂಸ್ಥೆಯ ಶಾಖಾ ಮನೇಜರ್ ಪುನಿತ್, ಏರಿಯ ಮೆನೆಜರ್ ನಟರಾಜ್, ಪ್ರಸಾದ್, ಜಯಪ್ರಸಾದ್ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮೇಘಪಾಲೆತ್ತಾಡಿ, ಅಜಿತ್ ಕುಮಾರ್, ಕೃಷ್ಣಪ್ರಸಾದ್, ಅನೀಶ್ ಮರೀಲ್, ಸುಧಾಕರ್ ಪಡೀಲ್, ಕುಮಾರ್ ಕಲ್ಲಾರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.