Home_Page_Advt
Home_Page_Advt
Home_Page_Advt

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1
  • ಸಾಲ ಮನ್ನಾದ ಹಣ ಬಾರದೆ ರೈತರು ಕಂಗಾಲು
  • ಶೀಘ್ರವೇ ಹಣ ಪಾವತಿಗೆ ಸರಕಾರಕ್ಕೆ ಮನವಿ

ಪುತ್ತೂರು: ಈ ಹಿಂದೆ ಸರಕಾರ ಘೋಷಣೆ ಮಾಡಿದ ರೈತರ ಸಾಲ ಮನ್ನಾದ ಹಣವು ಇನ್ನೂ ಹಲವಾರು ಮಂದಿಗೆ ಬಾರದೆ ರೈತರು ಕಂಗಾಲು ಆಗಿದ್ದು, ರೈತರ ಇಂತಹ ಸಂಧಿಗ್ದ ಸ್ಥಿತಿಯಲ್ಲಿ ಸರಕಾರವು ತಕ್ಷಣ ಸಾಲ ಮನ್ನಾದ ಹಣ ಬಿಡುಗಡೆ ಮಾಡುವಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆಯಲ್ಲಿ ಒತ್ತಾಯಿಸಲಾಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ಸಾಲ ಮನ್ನಾ ಹಣ ಬಾರದ ರೈತರ ಪಟ್ಟಿಯನ್ನು ಈಗಾಗಲೇ ಪುತ್ತೂರು ಶಾಸಕರ ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗಿದ್ದು ಶೀಘ್ರವೇ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂಧಿಸುವ ದೃಷ್ಟಿಯಿಂದ ಸರಕಾರಕ್ಕೆ ಒತ್ತಾಯ ಮಾಡಲಾಯಿತು.

ರೈತರ ಸಾಲದ ಮೊಬಲಗು ಸಹಕಾರಿ ಸಂಘದಲ್ಲೇ ವಿತರಿಸಲು ಮನವಿ: ರೈತರ ರೂಪೆ ಸಾಲದ ಮೊಬಲಗಿನ ಬಗ್ಗೆ ಗೊಂದಲ ಉಂಟಾಗಿದ್ದು, ಈ ಕುರಿತು ಹಲವಾರು ರೈತರು ಸಮಸ್ಯೆಗೆ ಒಳಗಾಗಿದ್ದಾರೆ. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖೆಯಲ್ಲಿ ಅವಮಾನ ಮಾಡಲಾಗಿದೆ. ಆದ್ದರಿಂದ ರೈತರ ರೂಪೆ ಸಾಲದ ಮೊಬಲಗನ್ನು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖೆ ಬದಲು ಆಯಾಯ ಸಹಕಾರಿ ಸಂಘದಲ್ಲೇ ನೀಡುವಂತೆ ಕೃಷಿಕರಾದ ಅಂಡೆಪುಣಿ ಗೋವಿಂದ ರಾಜು ಅವರು ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ಮನವಿ ನೀಡಿದ್ದು, ಮನವಿಯ ಕುರಿತು ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ಗೆ ಮನವಿ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಬಾಡಿಗೆದಾರರ ಒಂದು ತಿಂಗಳ ಬಾಡಿಗೆ ಮನ್ನಾ : ಬೊಳುವಾರಿನಲ್ಲಿರುವ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಕಟ್ಟಡದಲ್ಲಿರುವ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು.

ನಿರಾಶ್ರೀತರಿಗೆ ನೀಡಿದ ಅಕ್ಕಿಯನ್ನು ಮರಳಿಸಲು ಮನವಿ : ಲಾಕ್‌ಡೌನ್ ಹಿನ್ನಲೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದಿಂದ ನಿರಾಶ್ರಿತರಿಗೆ ಕೂಲಿ ಕಾರ್ಮಿಕರಿಗೆ ಕಾರ್ಡ್‌ಗಳಿಲ್ಲದೆ ಅಕ್ಕಿಯನ್ನು ವಿತರಿಸಲಾಗಿದ್ದು, ಇವರಿಗೆ ವಿತರಿಸಿದ ಈ ಅಕ್ಕಿಯನ್ನು ಭರ್ತಿ ಮಾಡಲು ಆಹಾರ ಇಲಾಖೆಗೆ ಮನವಿ ಮಾಡಲಾಗುವುದು ಎಂದು ನಿರ್ಣಯಿಸಲಾಯಿತು. ಅಲ್ಲದೆ ಹಲವಾರು ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್, ನಿರ್ದೇಶಕರಾದ ಸುಭಾಶ್ ನಾಕ್, ಮೋಹನ್ ಪಕ್ಕಳ, ಅಶ್ರಫ್ ಕಲ್ಲೇಗ, ಜಯಲಕ್ಷ್ಮೀ ಸುರೇಶ್, ದೇವಾನಂದ ಕೆ, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ್ ನಾಯಕ್ ಮಠಂತಬೆಟ್ಟು, ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವ್ಯವಸ್ಥಾಪಕಿ ರಾಧಾ ಬಿ. ರೈ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.