HomePage_Banner
HomePage_Banner
HomePage_Banner

ಶಾಂತಿಗೋಡು: ಮಕ್ಕಳ ಮೇಲೆ ದೂರು ನೀಡಿ ಮನನೊಂದ ತಂದೆ ಕೆರೆಗೆ ಹಾರಿ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತನ್ನ ಮಕ್ಕಳ ಮೇಲೆ ತಾನೆ ದೂರು ನೀಡಿದ ವಿಚಾರದಲ್ಲಿ ಮನನೊಂದ ತಂದೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಾಂತಿಗೋಡು ಗ್ರಾಮದ ನೆಕ್ಕರೆ ಎಂಬಲ್ಲಿ ಜೂ.11ರಂದು ಬೆಳಕಿಗೆ ಬಂದಿದೆ.
ಶಾಂತಿಗೋಡು ಗ್ರಾಮದ ನೆಕ್ಕರೆ ಸೇಸಪ್ಪ ಕುಲಾಲ್(74ವ)ರವರು ಕೆರೆಗೆ ಹಾರಿ ಮೃತಪಟ್ಟವರು. ಸುಮಾರು 20 ದಿನಗಳ ಹಿಂದೆ ಸೇಸಪ್ಪ ಕುಲಾಲ್ ಅವರು ತನ್ನ ಇಬ್ಬರು ಮಕ್ಕಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ವಿಚಾರಣೆ ಬಳಿಕ ಮನೆಯಲ್ಲಿ ಯಾರೊಂದಿಗೆ ಮಾತುಕತೆ ಇರಲಿಲ್ಲ. ಈ ನಡುವೆ ಸೇಸಪ್ಪ ಕುಲಾಲ್ ಅವರು ಕೆಲಸಕ್ಕೂ ಹೋಗದೆ ಮನೆಯಲ್ಲೇ ಕುಳಿತ್ತಿದ್ದರು. ಜೂ. 10ರಂದು ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಿಗ್ಗೆ ನಾಪತ್ತೆಯಾಗಿದ್ದರು. ಈ ಕುರಿತು ಮನೆ ಮಂದಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ತೋಟದ ಕೆರೆಯ ಬಳಿ ಮೊಬೈಲ್ ರಿಂಗ್ ಆಗಿದ್ದು ಅನುಮಾನಗೊಂಡ ಅವರು ಕೆರೆಯಲ್ಲಿ ನೋಡಿದಾಗ ಸೇಸಪ್ಪ ಕುಲಾಲ್ ಅವರ ಮೃತ ದೇಹ ನೀರಿನಲ್ಲಿ ಮುಳಗಿರುವುದು ಕಂಡು ಬಂದಿತ್ತು. ಸೇಸಪ್ಪ ಕುಲಾಲ್ ಅವರು ಮಕ್ಕಳ ಮೇಲೆ ದೂರು ನೀಡಿದ ವಿಚಾರದಲ್ಲಿ ಮನನೊಂದು ಅದೇಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತೋಟದ ಕೆರೆಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಮೃತರ ಪತ್ನಿ ಕಮಲ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.