HomePage_Banner
HomePage_Banner
HomePage_Banner

ಮಿನಿವಿಧಾನಸೌಧಕ್ಕೆ ಸರಿಸಾಟಿಯಾಗಿ ನಿಂತಿದೆ ಈ ಶ್ವೇತವರ್ಣದ ಕಟ್ಟಡ | ನಗರ ಅಭಿವೃದ್ದಿಗೆ ಸಾಥ್ ಕೊಡುತ್ತಿರುವ ಪುತ್ತೂರು ನಗರಸಭೆ

Puttur_Advt_NewsUnder_1
Puttur_Advt_NewsUnder_1
  • ಕೊರೊನಾ ವಿರುದ್ದ ಜಾಗೃತಿ-ಮನೆ ಮನೆಗೆ ಭೇಟಿ
  • ನವ ವೈಜ್ಞಾನಿಕ ಕಸವಿಲೇವಾರಿ ಸಂಗ್ರಹಕ್ಕೆ ತಯಾರಿ
  • ಒಂದೇ ಕಡೆ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಕ್ಕೆ ಚಿಂತನೆ
  • ಮೂಲಭೂತ ಸೌಕರ್ಯದ ಅಭಿವೃದ್ದಿಗೆ ಮುನ್ನಡಿ
  • ಸದ್ಯದಲ್ಲೇ ಗಾಂಧಿಕಟ್ಟೆ ಲೋಕಾರ್ಪಣೆ

@ ಶರತ್ ಆಳ್ವ ಚನಿಲ

ಮುಂದೆ ನಾವು ಬಯಸುವ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಹೇಗಿರಬೇಕೆಂದನ್ನು ನಿರ್ಧರಿಸಲು ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಆದರೆ ಅದರ ರೂಪುರೇಷೆಗಳು ಒಂದು ಆಡಳಿತಾತ್ಮಕ ವ್ಯವಸ್ಥೆಯಿಂದಲೇ ಜಾರಿಗೆ ಬರುತ್ತದೆ. ಅದಕ್ಕೊಂದು ಸಮರ್ಥವಾದ ಚಿಂತಕ, ಪ್ರತಿನಿಧಿ, ಅಭಿವೃದ್ದಿಯ ರುವಾರಿ ಜೊತೆ ಸೇರಿದಾಗ ಮಾತ್ರ ನಮ್ಮ ಬಯಕೆ ಈಡೇರಬಹುದು. ಇದು ಸರಿಯಾದ ಕ್ರಮಬದ್ದತೆಯಿಂದ ಕೂಡಿದ ಸಾರ್ವಜನಿಕ ಚಿಂತನೆ. ಆದರೆ ಈ ಬದ್ದತೆಗಳನ್ನು ಪಾಲಿಸದಿದ್ದರೆ ಮಾತ್ರ ಸಾರ್ವಜನಿಕರ ಹಿತಾಸಕ್ತಿಗಳನ್ನು ಮುರಿದಂತಾಗುತ್ತದೆ. ಅಭಿವೃದ್ದಿಯ ಹೆಸರಿನಲ್ಲಿ ತಮ್ಮ ಸ್ವಂತಿಕೆಯ ಬೇಳೆ ಬೇಯಿಸಿಕೊಳ್ಳುವ ಅನೇಕ ಮಂದಿ ಇರುವಾಗ ಸಮಾಜ ಕೆಟ್ಟು ಹೋಗುತ್ತದೆ.


ಇದರ ಹೊರತಾಗಿರುವ, ಅಭಿವೃದ್ದಿ ಚಿಂತನೆಗಳಿಗೆ ಪೂರಕವಾಗಿರುವ ನಮ್ಮ ಪುತ್ತೂರು ತಾಲೂಕು ಅಭಿವೃದ್ದಿ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳಿದ್ದಾಗ ತಾಲೂಕು ಸಂಕಷ್ಟಕ್ಕೆ ಸಿಲುಕುವುದಿಲ್ಲ. ಯೋಜನೆಗಳ ಸೌಲಭ್ಯ ಜನಸಾಮಾನ್ಯನ ಹತ್ತಿರ ತಲುಪುವ ಕೆಲಸವಾದರೆ ಸಮಸ್ಯೆ ಸೃಷ್ಟಿಯಾಗಲು ಸಾಧ್ಯವಿಲ್ಲ. ತಾಲೂಕಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದ ಮುಂಭಾಗದಲ್ಲಿರುವ ನಗರಸಭೆಯು ಅನೇಕ ಅಭಿವೃದ್ದಿ ವಿಚಾರಗಳಲ್ಲಿ ಮುಂದಿದೆ.
ವಿವಿಧ ಆಡಳಿತಾತ್ಮಕ, ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜದ ಸಾಸ್ಥ್ಯದ ಕಡೆಗೆ ಮುಖ ಮಾಡಿರುವ ಅನೇಕ ಅಭಿವೃದ್ದಿ ಪರ ಯೋಜನೆಗಳ ಮೂಲಕ ಜನರ ಸೇವೆಗೆ ಸದಾ ಸಿದ್ದವಿರುವ ನಗರಸಭೆಯು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ಅಭಿವೃದ್ದಿ ಚಿಂತನೆಗಳನ್ನು ತರುವಲ್ಲಿ ಮುಂದಡಿಯಿಡುವುದರೊಂದಿಗೆ ನಗರ ಸ್ವಚ್ಛತಾ ಅಭಿಯಾನಗಳನ್ನು ಕೈಗೊಂಡಿರುವ ಜೊತೆಗೆ ಆಡಳಿತಾತ್ಮಕ ವ್ಯವಸ್ಥೆಯಲ್ಲಿಯು ಮುಂದಿದೆ. ಇದೀಗ ಬಣ್ಣದಲ್ಲಿಯೂ ಹೊಸ ರೂಪವನ್ನು ಪಡೆದ ನಗರಸಭೆಯು ಇನ್ನಷ್ಟು ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ.

ಶ್ವೇತ ವರ್ಣದಿಂದ ಕಂಗೊಳಿಸುತ್ತಿದೆ ನಗರಸಭೆ
ಶ್ವೇತ ವರ್ಣದಿಂದ ಕಂಗೊಳಿಸುವ, ಪುತ್ತೂರಿನ ಮುಕುಟಕ್ಕೆ ಗರಿಯಂತಿದೆ ಮಿನಿವಿಧಾನ ಸೌಧ. ಇದೀಗ ಇದಕ್ಕೆ ಸರಿಸಾಠಿಯಂತೆ ಕಾಣುತ್ತದೆ ನಗರಸಭೆ. ಈ ಕಟ್ಟಡಕ್ಕೆ ಬಿಳಿ ಬಣ್ಣವನ್ನು ಬಲಿಯುತ್ತಿದ್ದು ಕಟ್ಟಡದ ಹೊರಗೂ, ಒಳಗೂ ಬಿಳಿಬಣ್ಣವನ್ನೇ ಕೊಡಲಾಗುತ್ತದೆ. ಈಗ ಈ ಕಟ್ಟಡವನ್ನು ನೋಡುವಾಗ ಹೊಸ ಹುರುಪನ್ನು ತಂದು ಕೊಡುತ್ತದೆ. ಆಡಳಿತ ಕಛೇರಿಗಳೆಲ್ಲವೂ ಬಿಳಿ ಬಣ್ಣದಿಂದ ಕೂಡಿರಲಿ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಅಂತ್ಯಕ್ಕೆ ಜಾಗೃತಿ ಅಭಿಯಾನ-ಮನೆಮನೆಗೆ ಭೇಟಿ
ಜಿಲ್ಲಾಧಿಕಾರಿ ಆದೇಶದಂತೆ ನಗರಸಭೆಯ ಆರೋಗ್ಯ ತನಿಖಾಧಿಕಾರಿ, ಬಿಲ್ ಕಲೆಕ್ಟರ್‌ಗಳು, ಸಿಬ್ಬಂದಿಗಳು ಸೇರಿ ೩ ಟೀಮ್ ಮಾಡಿಕೊಂಡು ಯಾರೆಲ್ಲ ಮಾಸ್ಕ್ ಹಾಕುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಅಂತವರಿಗೆ ಕೊರೊನಾ ವಿರುದ್ದ ಜಾಗೃತಿಯನ್ನು ಮೂಡಿಸುವ ಪಾಠ ಮಾಡುತ್ತಿದ್ದೇವೆ.
ಪುರಭವನಕ್ಕೂ ಶ್ವೇತ ವರ್ಣದ ಭಾಗ್ಯ…
ಮುಂದಿನ ದಿನಗಳಲ್ಲಿ ನಗರಸಭೆಯ ಮುಂಭಾಗದಲ್ಲಿರುವ ಪುರಭವನವು ಶ್ವೇತ ವರ್ಣದಿಂದ ಕಾಣಲಿದೆ. ಮದುವೆ, ಶಾಲಾ-ಕಾಲೇಜಿನ ಕಾರ್ಯಕ್ರಮಗಳು, ಸರಕಾರದ ಕಾರ್ಯಕ್ರಮಗಳು ಯಥೇಚ್ಚವಾಗಿ ನಡೆಯುವ ಈ ಪುರಭವನದಲ್ಲಿ ಸುಮಾರು ೪೦೦ ಮಂದಿಯ ಆಸನದ ವ್ಯವಸ್ಥೆ ಹೊಂದಿದ್ದು ಇದರ ಅಭಿವೃದ್ದಿ ಕಾರ್ಯಗಳಿಗೂ ಯೋಜನೆ ರೂಪಿಸಲಾಗಿದೆ.
ವಾಣಿಜ್ಯ ಸಂಕೀರ್ಣ ಮತ್ತು ಮಾರುಕಟ್ಟೆಗೆ ಪ್ಲಾನಿಂಗ್
ಈಗಿನ ನಗರಸಭೆಯ ಕಟ್ಟಡವು ಹೊಸ ರೂಪವನ್ನು ಪಡೆಯಲಿದೆ. ಜನರ ಸೌಕರ್ಯಕ್ಕಾಗಿ ನೆಲಮಾಲಿಗೆಯಲ್ಲಿ ತೆರೆದ ಮಾರುಕಟ್ಟೆ ವ್ಯವಸ್ಥೆ ಮತ್ತು ಪ್ರಥಮ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣವನ್ನು ಮಾಡುವ ಯೋಜನೆಯನ್ನು ಹಾಕಲಾಗಿದೆ. ಜನರಿಗೆ ಒಂದೇ ಸೂರಿನಡಿ ಎಲ್ಲಾ ಅಗತ್ಯ ವಸ್ತುಗಳು ಸಿಗುವ ಈ ಪ್ಲಾನಿಂಗ್ ಉತ್ತಮವಾಗಿದೆ ಎಂದು ಹಿರಿಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ನಗರಸಭೆಗೆ ಹೊಸ ಕಟ್ಟಡ ರಚನೆಗೆ ಅನುದಾನ
ಈಗಿರುವ ನಗರಸಭೆಯ ಕಟ್ಟಡವು ಸ್ಥಳಾಂತರಗೊಳ್ಳಲಿದ್ದು ಹಳೆಯ ನಗರಸಭೆಯ ಕಟ್ಟಡವು ಸಂಪೂರ್ಣ ನವೀಕರಣಗೊಳ್ಳಲಿದೆ. ಹೊಸ ಕಟ್ಟಡ ರಚನೆಗೆ ಶಾಸಕರ ಅನುದಾನದಿಂದ ೨ ಕೋಟಿ ಅನುದಾನ ಬಿಡುಗಡೆಯಾಗಿದ್ದು ಮತ್ತು ನಗರೊತ್ಥಾನ ವತಿಯಿಂದ ೧ ಕೋಟಿಯನ್ನು ವಿನಿಯೋಗ ಮಾಡಲಿದ್ದೇವೆ
ನವ ವೈಜ್ಞಾನಿಕ ಕಸವಿಲೇವಾರಿ
ಜನರ ಆರೋಗ್ಯ, ಸ್ವಚ್ಛತೆಯ ದೃಷ್ಟಿಕೋನವನ್ನು ಮೂಲವಾಗಿರಿಸಿಕೊಂಡು ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲೋಸುಗ ಪ್ಲಾನಿಂಗ್ ಮಾಡಲಾಗಿದೆ. ಸುಮಾರು ೧೦ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಲಾಗಿದೆ. ಡಂಪಿಗ್ ಯಾರ್ಡನ್ನು ಸಂಪೂರ್ಣ ವೈಜ್ಞಾನಿಕ ತ್ಯಾಜ್ಯ ಸಂಗ್ರಾಹಕ ಘಟಕ ಮಾಡುವ ಯೋಜನೆಯನ್ನು ಮಾಡಲಾಗುತ್ತದೆ. ಇವೆಲ್ಲದಕ್ಕೂ ಜನರ ಸ್ಪಂದನೆ, ಸಹಕಾರಬೇಕು ಎಂದು ಪೌರಾಯುಕ್ತರು ತಿಳಿಸುತ್ತಾರೆ.
ಮೂಲಭೂತ ಸೌಕರ್ಯ ಅಭಿವೃದ್ದಿಗೆ ಯೋಜನೆ
ಶಾಸಕರ ಅನುದಾನದಿಂದ ೨ ಕೋಟಿ ಬಿಡುಗಡೆಯಾಗಿದ್ದು ನಗರಸಭಾ ವ್ಯಾಪ್ತಿಯಲ್ಲಿನ ರಸ್ತೆ ಕಾಮಾಗಾರಿಯಂತಹ ಅನೇಕ ಮೂಲಭೂತ ಸೌಕರ್ಯಕ್ಕೆ ಹಂಚಿಕೆಯಾಗಲಿದೆ. ನಗರದ ಎಲ್ಲೆಲ್ಲಿ ಮೂಲಭೂತ ಸಮಸ್ಯೆಗಳಿದೆಯೋ ಅಲ್ಲಿ ಅನುದಾನ ವಿನಿಯೋಗವಾಗಲಿದೆ.
ಸದ್ಯದಲ್ಲೇ ಗಾಂಧಿಕಟ್ಟೆ ಲೋಕಾರ್ಪಣೆ
ಬಸ್‌ನಿಲ್ದಾಣದ ಬಳಿಯಲ್ಲಿರುವ ಗಾಂಧಿ ಕಟ್ಟೆಯ ಲೋಕಾರ್ಪಣೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಶುಚಿತ್ವದ ದೃಷ್ಟಿಕೊನವನ್ನಿರಿಸಿ ಕಟ್ಟೆಯ ಮೇಲೆ ಶೀಟು ಹಾಕಲಾಗುತ್ತದೆ. ಕೆಲಸ ಪೂರ್ಣವಾದ ನಂತರ ಲೋಕಾರ್ಪಣೆಗೊಳ್ಳಲಿದೆ.

 

ಬದಲಾವಣೆಯೆಂಬುದು ನಮ್ಮನ್ನು ಸದಾ ಎಚ್ಚರಿಸುವ ಕಾರ್ಯ ಮಾಡುತ್ತದೆ. ಸರಕಾರಿ ಆಡಳಿತ ಕಟ್ಟಡಗಳು ಒಂದೇ ರೀತಿಯ ಬಣ್ಣವನ್ನು ಹೊಂದಿರಬೇಕು ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ಬಿಳಿ ಬಣ್ಣವನ್ನು ಕೊಡಲಾಗಿದೆ. ಬಿಳಿ ಬಣ್ಣವು ಗೌರವದ ಸಂಕೇತವೂ ಆಗಿದೆ. ಬಿಳಿ ಬಣ್ಣದಿಂದ ಕೂಡಿದ ಕಟ್ಟಡಗಳು ಮೆರುಗನ್ನು ಪಡೆಯುತ್ತದೆ. ಶಾಸಕ ಅನುದಾನದಿಂದ ಒಟ್ಟು ೬ ಕೋಟಿ ಬಿಡುಗಡೆಯಾಗಿದೆ. ನಗರಸಭೆಯ ಹಳೆ ಕಛೇರಿಯ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಮುಂದಕ್ಕೆ ಈಗಿನ ನಗರಸಭಾ ಕಟ್ಟಡವಿರುವಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ಮಾಡಬೇಕೆಂಬ ಹಂಬಲವೂ ಇದೆ.
-ಸಂಜೀವ ಮಠಂದೂರು, ಶಾಸಕರು, ವಿಧಾನಸಭಾಕ್ಷೇತ್ರ, ಪುತ್ತೂರು

……………………………………………………………………..

ಬಿಳಿ ಬಣ್ಣವು ಶುಭ್ರದ ಸಂಕೇತ. ನೋಡುಗರ ಮನಸೆಳೆಯುವ ಬಣ್ಣವೆಂದರೆ ಅದು ಬಿಳಿಬಣ್ಣವೇ ಆಗಿದೆ. ನಗರಸಭೆಯ ಕಟ್ಟಡದ ಹೊರಗೂ, ಒಳಗೂ ಬಿಳಿಬಣ್ಣವನ್ನು ಕೊಡಲಾಗುತ್ತದೆ. ಶಾಸಕರ ತುಂಬು ಹೃದಯದ ಸಹಕಾರ ನಗರಸಭೆಗೆ ಇರುವುದರಿಂದ ಅವರ ಸಲಹೆ ಸೂಚನೆಯಂತೆ ನಗರಸಭೆಯ ಕಾರ್ಯಗಳು ನಡೆಯುತ್ತಿದೆ. ಪುತ್ತೂರಿನ ಅಭಿವೃದ್ದಿ ದೃಷ್ಟಿಕೋನದಲ್ಲಿ ಪ್ರಮುಖ ಪಾತ್ರವಹಿಸಿರುವ ನಗರಸಭೆಗೆ ಮುಂದೆಯೂ ಅಭಿವೃದ್ದಿ ಕೆಲಸಗಳನ್ನು ಮಾಡಲು ರೂಪುರೇಷೆ ಮಾಡುತ್ತಿದ್ದೇವೆ.
-ರೂಪಾ ಶೆಟ್ಟಿ, ಪೌರಾಯುಕ್ತರು, ಪುತ್ತೂರು ನಗರಸಭೆ

……………………………………………………………………..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.