Home_Page_Advt
Home_Page_Advt
Home_Page_Advt

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ – ಜನ ಜಾಗೃತಿ ರಥ ಉದ್ಘಾಟನೆ | 5ನೇ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಧೀಶ ರುಡೋಲ್ಫ್ ಪಿರೇರಾ ಅವರಿಂದ ಹಸಿರು ನಿಶಾನೆ

Puttur_Advt_NewsUnder_1
Puttur_Advt_NewsUnder_1
  • ಸರಕಾರದ ಕಾರ್ಯಕ್ರಮದಲ್ಲಿ ನಾವು, ನೀವು ಭಾಗಿಯಾಗೋಣ – ಮಂಜುನಾಥ್
  • ಈ ವರ್ಷ ಮಕ್ಕಳ ಬಗ್ಗೆ ಹೆಚ್ಚು ಒತ್ತು ಅಗತ್ಯ – ಉದಯಶಂಕರ್
  • ಸುಧಾರಣೆ ಆದರೂ ಜಾಗೃತಿ ಅಗತ್ಯ – ಮನೋಹರ್. ಕೆ.ವಿ
  • ಬಾಲ್ಯಾವಸ್ಥೆ ಜೊತೆ ಕಿಶೋರಾವಸ್ಥೆಯ ಕಾರ್ಮಿಕರನ್ನು ದುಡಿಸಿದರೂ ಅಪರಾಧ – ಗಣಪತಿ ಹೆಗಡೆ

ಪುತ್ತೂರು: ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ 2020ರ ಪ್ರಯುಕ್ತ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜೂ.12ರಂದು ಪುತ್ತೂರು ನ್ಯಾಯಾಲಯದ ಆವರಣದಿಂದ ಜನಜಾಗೃತಿ ರಥ ಉದ್ಘಾಟನೆಗೊಂಡಿತ್ತು. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರುಡೋಲ್ಫ್ ಪಿರೇರಾ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.


ಸರಕಾರದ ಕಾರ್ಯಕ್ರಮದಲ್ಲಿ ನಾವು,ನೀವು ಭಾಗಿಯಾಗೋಣ:
ಹಿರಿಯ ವ್ಯವಹಾರಿಕ ನ್ಯಾಯಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮಂಜುನಾಥ್ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ಧತಿಯನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆಗೊಳಿಸುವ ದಿಸೆಯಲ್ಲಿ ಸರಕಾರದ ಕಾರ್ಯಕ್ರಮದಲ್ಲಿ ನಾವು ನೀವು ಭಾಗಿಯಾಗಬೇಕು. ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕಿದೆ. ಸಣ್ಣ ಸಣ್ಣ ಮಕ್ಕಳನ್ನು ದುಡಿಸುವ ಪದ್ಧತಿ ದೇಶದಿಂದ ನಿರ್ಮೂಲನೆ ಆಗಬೇಕು. ಮುಂದಿನ ಜನರೇಶನ್ ಮಕ್ಕಳ ಬೆಳವಣಿಗೆಗೆ ಪೂರಕವಾಗಿರಬೇಕೆಂದರು.
ಈ ವರ್ಷ ಮಕ್ಕಳ ಬಗ್ಗೆ ಹೆಚ್ಚು ಒತ್ತು ಅಗತ್ಯ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎ ಉದಯಶಂಕರ ಶೆಟ್ಟಿ ಅವರು ಮಾತನಾಡಿ ಬಾಲ ಕಾರ್ಮಿಕರು ಶಿಕ್ಷಣ ವಂಚಿತರಾಗುತ್ತಾರೆ. ಅವರ ಕುಟುಂಬ ಸಂಕಷ್ಟಕ್ಕೆ ಹೋಗುತ್ತದೆ. ವ್ಯವಹಾರ ಜ್ಞಾನವೂ ಇರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಕೋವಿಡ್ -೧೯ಗೆ ಸಂಬಂಧಿಸಿ ಅನೇಕ ಮಂದಿ ಬಡತನದ ಸಂಕಷ್ಟದಲ್ಲಿ ಇದ್ದಾರೆ. ಹಾಗಾಗಿ ಅವರ ಮಕ್ಕಳ ಶಿಕ್ಷಣ ಮತ್ತು ರಕ್ಷಣೆ ಕುರಿತು ಚಿಂತನೆ ಅಗತ್ಯ. ಹಾಗಾಗಿ ಈ ವರ್ಷ ಮಕ್ಕಳ ಬಗ್ಗೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು.
ಸುಧಾರಣೆ ಆದರೂ ಜಾಗೃತಿ ಅಗತ್ಯ:
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ನಮ್ಮಲ್ಲಿ ಪ್ರಸ್ತುತ ಬಹಳಷ್ಟು ಸುಧಾರಣೆ ಆಗಿದೆ. ಆದರೂ ಬಡತನದ ಕೂಗು ಮಕ್ಕಳನ್ನು ದುಡಿಯುವ ಸ್ಥಿತಿಗೆ ಕೊಂಡೊಯ್ಯುತ್ತದೆ. ಅದನ್ನು ತಡೆಗಟ್ಟುವಲ್ಲಿ ಸರಕಾರದ ಪ್ರಯತ್ನಕ್ಕೆ ನಾವು ಪ್ರಯತ್ನ ಮಾಡುತ್ತಿದೆ ಎಂದರು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಬಾಲ್ಯಾವಸ್ಥೆ ಜೊತೆ ಕಿಶೋರಾವಸ್ಥೆಯ ಕಾರ್ಮಿಕರನ್ನು ದುಡಿಸಿದರೂ ಅಪರಾಧ:
ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ -೧೯೮೬ ರ ಪ್ರಕಾರ ೧೪ ವರ್ಷದ ಒಳಪಟ್ಟ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿಲ ಹಾಗೂ ೧೫ ವರ್ಷದಿಂದ ೧೮ ವರ್ಷದೊಳಗಿನ ಯಾವುದೇ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವ ಮಾಲೀಕರಿಎ ರೂ. ೨೦ಸಾವಿರ ದಿಂದ ೫೦ ಸಾವಿರದ ತನಕ ದಂಡ ಮತ್ತು ೬ ತಿಂಗಳಿಂದ ೨ ವರ್ಷದ ತನಕ ಜೈಲು ಶಿಕ್ಷೆಯೊಂದಿಗೆ ರೂ. 20 ಸಾವಿರ ಕಾರ್ಪಸ್ ನಿಧಿ ಪಾವತಿಸಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಪ್ರಕಾಶ್ ಪಿ.ಎಮ್, ೨ನೇ ಹೆಚ್ವುವರಿ ವ್ಯವಹಾರಿಕ ನ್ಯಾಯಾಧೀಶ ವೆಂಕಟೇಶ್ ಎನ್, ವಕೀಲರ ಸಂಘದ ಉಪಾಧ್ಯಕ್ಷ ಪಡ್ಡಂಬೈಲು ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎನ್.ಎಸ್, ವಕೀಲರಾದ ಕುಮಾರ್ ಎಸ್, ಜಯರಾಮ, ಪಿ.ಕೆ.ಸತೀಶನ್, ರಾಧಾಕೃಷ್ಣ, ಕಿಶೋರ್ ಕುಮಾರ್ ಕೊಳತ್ತಾಯ, ಶ್ಯಾಮ್, ಮಜೀದ್‌ಖಾನ್ ಮತ್ತಿರರು ಉಪಸ್ಥಿತರಿದ್ದರು. ನ್ಯಾಯಾಲಯದ ರಂಗಪ್ಪ ಪೂಜಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವೀಡಿಯೋಗಾಗಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.