HomePage_Banner
HomePage_Banner
HomePage_Banner

ಕಡಬ ಪಟ್ಟಣ ಪಂಚಾಯತ್ ಪ್ರಭಾರ ಮುಖ್ಯಾಧಿಕಾರಿಯಾಗಿ ಅರುಣ್.ಕೆ ನೇಮಕ | ಜೂ.15ರಂದು ಅಧಿಕಾರ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಗ್ರಾಮ ಪಂಚಾಯತನ್ನೊಳಗೊಂಡ ಕಡಬ ಕೋಡಿಂಬಾಳ ಗ್ರಾಮಗಳನ್ನು “ಕಡಬ ಪಟ್ಟಣ” ಪಂಚಾಯತ್ ಆಗಿ ಮೇಲ್ದರ್ಜೇಗೇರಿಸಿ ಸರಕಾರ ಮೇ.27ರಂದು ಆದೇಶ ಹೊರಡಿಸಿದ್ದು, ಇದೀಗ ಪ್ರಭಾರ ಮುಖ್ಯಾಧಿಕಾರಿಯಾಗಿ ಜಿಲ್ಲಾ ನಗರ ಅಭಿವೃದ್ದಿ ಕೋಶ ಮಂಗಳೂರು ಇದರ ಸಹಾಯಕ ಕಾರ‍್ಯಪಾಲಕ ಅಭಿಯಂತರ ಅರುಣ್ ಕೆ. ಯವರನ್ನು ಕಡಬ ಪಟ್ಟಣ ಪಂಚಾಯತ್ ಪ್ರಭಾರ ಮುಖ್ಯಾಧಿಕಾರಿಯಾಗಿ ನೇಮಕಗೊಳಿಸಿ ದ.ಕ. ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮುಖ್ಯಾಧಿಕಾರಿಯವರು ಜೂ.15ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಸ್ತುತ ಅರುಣ್.ಕೆಯವರು ಸುಳ್ಯ ಮೂಲದವರಾಗಿದ್ದಾರೆ.


ಪಟ್ಟಣ ಪಂಚಾಯತ್‌ನಲ್ಲಿ ಗ್ರಾಮ ಪಂಚಾಯತ್‌ನ ಸಿಬ್ಬಂದಿಗಳಾದ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಗ್ರಾಮ ಪಂಚಾಯತ್ ಕಾರ‍್ಯದರ್ಶಿ ಗ್ರೇಡ್-೧ ಮತ್ತು ಗ್ರೇಡ್-೨ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಇವರನ್ನು ಹೊರತುಪಡಿಸಿ, ಗ್ರಾಮ ಪಂಚಾಯಿತಿಯ ಖಾಯಂ/ತಾತ್ಕಾಲಿಕ ಸಿಬ್ಬಂದಿಗಳು ಯಥಾ ಸ್ಥಿತಿಯಲ್ಲಿ ಪರಿವರ್ತನೆಗೊಂಡಿರುವ ಪಟ್ಟಣ ಪಂಚಾಯತ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ೧೯೯೩ರ ಅಡಿಯಲ್ಲಿ ಪಟ್ಟಣ ಪಂಚಾಯತ್ ಆಗಿ ಅಧಿಸೂಚಿಸಿದ ದಿನಾಂಕದ ಹಿಂದಿನ ದಿನಾಂಕದವರೆಗೂ ಅಂಗೀಕರಿಸಲ್ಪಟ್ಟ ಎಲ್ಲ ಬಜೆಟ್ ಅಂದಾಜುಗಳು ಮೌಲ್ಯ ಮಾಪನಗಳು, ಮೌಲ್ಯ ಮಾಪನ ಪಟ್ಟಿಗಳು, ಒಪ್ಪಂದಗಳು ಅಂತಹ ಸ್ಥಳೀಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೌರ ಸಭೆಗಳ ಕಾಯ್ದೆ ೧೯೬೪ರ ಅಡಿಯಲ್ಲಿ ಅಂಗೀಕರಿಸಕಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಮುಖ್ಯಾಧಿಕಾರಿಯವರು ಅಧಿಕಾರಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಕಡಬ ಗ್ರಾಮ ಪಂಚಾಯತ್‌ನ ಎಲ್ಲ ಕಾರ‍್ಯಚಟುವಟಿಕೆಗಳು ಸ್ಥಗಿತಗೊಂಡು ಮುಂದೆ ಪಟ್ಟಣ ಪಂಚಾಯತ್‌ನ ನಿಯಮದಡಿಯಲ್ಲಿ ಚಟುವಟಿಕೆಗಳು ಪ್ರಾರಂಭವಾಗುತ್ತದೆ, ಮುಖ್ಯಧಿಕಾರಿಯವರು ಅಧಿಕಾರ ಸ್ವೀಕರಿಸುವ ಸಂದರ್ಭ ಕಡಬ ಕೋಡಿಂಬಾಳ ಗ್ರಾಮಗಳ ಸಮಗ್ರ ಮಾಹಿತಿ ಹಾಗೂ ಪಂಚಾಯತ್‌ನ ಎಲ್ಲ ಲೆಕ್ಕ ಪತ್ರಗಳು ಮುಖ್ಯಾಧಿಕಾರಿಯವರ ಕೈ ಸೇರಲಿದೆ. ಮುಂದೆ ಅವರ ಆದೇಶದ ಪ್ರಕಾರ ಆಡಳಿತ ನಡೆಯಲಿದೆ.

ಕಡಬ ಕೋಡಿಂಬಾಳ ಗ್ರಾಮದಲ್ಲಿ ಒಟ್ಟು ೯೫೪೬ ಜನಸಂಖ್ಯೆ ಇದ್ದು ೧೮.೭೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.