ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಘದ ವ್ಯಾಪ್ತಿಯ 7 ಮಂದಿ ಕೋರೊನಾ ವಾರಿಯರ್ಸ್ ಆಶಾಕಾರ್ಯಕರ್ತೆಯರಿಗೆ ತಲಾ ರೂ.2000ದಂತೆ ಪ್ರೋತ್ಸಾಹಧನದ ಚೆಕ್ ಅನ್ನು ಸಂಘದ ಪ್ರಧಾನ ಕಛೇರಿ ಕಾಣಿಯೂರಿನಲ್ಲಿ ಜೂ.11ರಂದು ವಿತರಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯ ಚಾರ್ವಾಕ, ಕಾಣಿಯೂರು, ದೋಳ್ಪಾಡಿ ಗ್ರಾಮದಲ್ಲಿ ಆಶಾಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುತ್ತಿರುವ ಕುಸುಮಾ ಕಟ್ಟತ್ತಾರು, ವಾರಿಜ ಪುಣ್ಚತ್ತಾರು, ಜಲಜಾಕ್ಷಿ ದೋಳ್ಪಾಡಿ, ಭಾರತಿ ಕೆ, ಗೀತಾ ಚಾರ್ವಾಕ, ಭಾರತಿ ಚಾರ್ವಾಕ, ಯಮುನಾ ಕೋಡಂದೂರುರವರು ಚೆಕ್ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಕರಾದ ಧರ್ಮೇಂದ್ರ ಕಟ್ಟತ್ತಾರು, ವಿಶ್ವನಾಥ ಕೂಡಿಗೆ, ವಿಶ್ವನಾಥ ಗೌಡ ಮರಕ್ಕಡ, ರಮೇಶ ಉಪ್ಪಡ್ಕ, ಜಯರಾಮ ಕೊಪ್ಪ, ಹರೀಶ ಅಂಬುಲ, ರತ್ನಾವತಿ ಮುದುವ, ಕಮಲ ಮುದುವ, ಅನಂತಕುಮಾರ್ ಬೈಲಂಗಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವೀಚಾರಕ ವಸಂತ ಎಸ್ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಸ್ವಾಗತಿಸಿ, ವಂದಿಸಿದರು.