Home_Page_Advt
Home_Page_Advt
Home_Page_Advt

ಆಲಂಕಾರು ಸಿ.ಎ ಬ್ಯಾಂಕ್, ಸಹಕಾರ ಭಾರತಿ, ಗ್ರಾಮವಿಕಾಸ ವತಿಯಿಂದ ರೈತರಿಗೆ ತರಕಾರಿ ಬೀಜ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ಭಾರತೀಯ ಸಂಸೃತಿ ನಿಂತಿರುವುದು ಋಷಿ ಹಾಗೂ ಕೃಷಿ ಸಂಸೃತಿಯಿಂದ – ಸುಬ್ರಾಯ ಪುಣಚ
  • ಕೇಂದ್ರಿಯ ಬೀಜ ಸಂಸ್ಕರಣ ಕೇಂದ್ರ ಬೆಂಗಳೂರಿನಿಂದ ಬೀಜ ತರಿಸಿ ವಿತರಣೆ – ಧರ್ಮಪಾಲ ರಾವ್

ಆಲಂಕಾರು : ಭಾರತೀಯ ಸಂಸೃತಿ ನಿಂತಿರುವುದು ಋಷಿ ಹಾಗೂ ಕೃಷಿ ಸಂಸೃತಿಯಿಂದ ಋಷಿ ಒಬ್ಬ ಜ್ಞಾನಿಯಾಗಿ ಉಪದೇಶ ಕೊಡುತ್ತಾ ನಿರಂತರ ಚಿಂತನೆ, ಸಂಶೋದನೆ ಮಾಡುತ್ತಾ ವಿಜ್ಞಾನ ರೂಪದಲ್ಲಿ ಸಮಾಜಕ್ಕೆ ನೀಡುತ್ತಾ ಬಂದ ಅದನ್ನು ಪ್ರಾಯೋಗಿಕವಾಗಿ ಅಳವಡಿಸಿದವರು ಕೃಷಿಕರು. ಸ್ವಾತಂತ್ರ ಪೂರ್ವದಲ್ಲಿ ಗಾಂಧಿಜಿಯವರ ರಾಮರಾಜ್ಯದ ಕನಸು ಸಾಕಾರವಾಗ ಬೇಕಾದರೆ ನಾವು ಸ್ವದೇಶಿ ಚಿಂತಕರಾಗಬೇಕು ಹಾಗೂ ಸಾವಯವ ಕೃಷಿಯ ಮೂಲಕ ಕೃಷಿಯಲ್ಲಿ ಸ್ವಾವಲಂಬಿಗಳಾಗಿ ವಿಷಮುಕ್ತ ಭಾರತ ನಿರ್ಮಾಣ ಮಾಡಬೇಕೆಂದು ಮುಖ್ಯ ಅತಿಥಿಯಾಗಿ ಅಗಮಿಸಿದ ಚಿಂತಕ ಸುಬ್ರಾಯ ಪುಣಚ ತಿಳಿಸಿದರು.


ಆಲಂಕಾರು ಸಿ.ಎ ಬ್ಯಾಂಕಿನ ಅಧ್ಯಕ್ಷ ಧರ್ಮಪಾಲ ರಾವ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ನಾವು ತರಕಾರಿ ಬೀಜವನ್ನು ಕೇಂದ್ರಿಯ ಬೀಜ ಸಂಸ್ಕರಣಾ ಕೇಂದ್ರ ಬೆಂಗಳೂರಿನಿಂದ ನಾವು ಬೀಜವನ್ನು ತರಿಸಿಕೊಡುತ್ತಿದ್ದು ರೈತರು ಬಹಳ ಎಚ್ಚರಿಕೆ ವಹಿಸಿ ತರಕಾರಿ ಬೀಜವನ್ನು ಹಾಕಿ ಸಾವಯವ ಕೃಷಿಯ ಮೂಲಕ ತರಕಾರಿಯನ್ನು ಮಾಡಿ ನಮಗೆ ಹಾಗೂ ನಮ್ಮ ಪಕ್ಕದ ಮನೆಯವರಿಗೆ ನೀಡುವುದರ ಮೂಲಕ ನಾವು ಸಹಕಾರಿ ಮನೋಭಾವವನ್ನು ರೂಡಿಸಿಕೊಂಡು ನಾವು ಸ್ವಾವಲಂಬಿ ರೈತರಾಗಬೇಕೆಂದು ತಿಳಿಸಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಜು.1 ರಿಂದ ಒಂದು ವಾರ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಂತ ಉದ್ಯೋಗ ನಡಸಿ ಅರ್ಥಿಕ ಸ್ವಾವಲಂಬಿಗಳಾಗುವಂತೆ ತಿಳಿಸಿದರು.
ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ, ಸಂಘದ ನಿರ್ದೇಶಕರಾದ ಮೋನಪ್ಪ ಕುಲಾಲ್ ಬೊಳ್ಳರೊಡಿ, ಸಂತೋಷ್ ಕುಂಞಕ್ಕು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.