Home_Page_Advt
Home_Page_Advt
Home_Page_Advt

ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಇಲೆಕ್ಟ್ರೋನಿಕ್ ಸ್ಕೇಲ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ರಾಗಿಕುಮೇರಿ ಅಂಗನವಾಡಿ ಕೇಂದ್ರಕ್ಕೆ ಇಲೆಕ್ಟ್ರೋನಿಕ್ ತೂಕದ ಯಂತ್ರವನ್ನು ಬಿಜಿಎಫ್ ಇದರ ಗೌರವ ಸಲಹೆಗಾರರೂ ಬಪ್ಪಳಿಗೆ ಖತೀಬರೂ ಆದ ಅಹ್ಮದ್ ನಈಂ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.

ನಂತರ ಮಾತನಾಡಿದ ಖತೀಬರು ಕೊಡುಗೆ ಸ್ವೀಕರಿಸಿದ ಬಳಿಕ ಅದರ ಪೂರ್ಣ ಸದುಪಯೋಗವನ್ನು ಪಡೆಯಬೇಕೆಂದು, ಮಾನವೀಯ ಹಾಗೂ ಸಾಮಾಜಿಕ ಸೇವೆಗಳ ಕುರಿತು ತಿಳಿಸಿ ಸಾರ್ವಜನಿಕರ ಸಹಕಾರ ಬೆಂಬಲ ಮತ್ತು ಪ್ರಾರ್ಥನೆ ಸದಾ ಅನಿವಾರ್ಯ ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಿತ್ರ ಹರೀಶ್ ಸಂಧರ್ಬೋಚಿತವಾಗಿ ಮಾತನಾಡಿ ಸಮಿತಿಗೆ ಅಂಗನವಾಡಿ ಕೇಂದ್ರದ ಪರವಾಗಿ ಧನ್ಯವಾದ ಸಲ್ಲಿಸಿದರು.
ಅತಿಥಿಯಾಗಿ ಮಾಜಿ ಕೌನ್ಸಿಲರ್ ಸ್ವರ್ಣಲತಾ ಹೆಗ್ಡೆ ಉಪಸ್ಥಿತರಿದ್ದರು.

ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಉಪಾಧ್ಯಕ್ಷ ಇಬ್ರಾಹಿಂ ಬಪ್ಪಳಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಇಕ್ಬಾಲ್ ಯುಕೆ, ಸಂಘಟನಾ ಕಾರ್ಯದರ್ಶಿ ಸಮೀರ್ ಎಸ್ ಎಸ್ ಸ್ಕೇಲ್, ಕಾರ್ಯದರ್ಶಿ ಸಂಶುದ್ದೀನ್ ಯುಎಂ, ಸದಸ್ಯರಾದ ಇಂತಿಯಾಝ್ ಪಿಬಿ, ಶೈಖ್ ರಿಯಾಝ್ ಮುನ್ನ, ನಾಸಿರುದ್ದೀನ್ ಕರ್ಕುಂಜ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಯಂತಿ, ಅಂಗನವಾಡಿ ಸಹಾಯಕಿ ಪ್ರೇಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.