ಕಡಬ ಕೊರೋನಾ ಸೊಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 12 ಜನರ ವರದಿ ‘ನೆಗೆಟಿವ್’

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಕೊರೋನಾ ಸೋಂಕಿತ ವ್ಯಕ್ತಿ ಸಂಪರ್ಕಿಸಿದರೆನ್ನಲಾದ ಒಟ್ಟು 23 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ ಈಗಾಗಲೇ 12 ಜನರ ವರದಿ ನೆಗೆಟಿವ್ ಬಂದಿದೆ, ಇನ್ನುಳಿದ 11 ಜನರ ವರದಿ ಇನ್ನಷ್ಟೆ ಬರಬೇಕಿದೆ.

ಕಡಬ ಮೂಲದ ವ್ಯಕ್ತಿ ಸೋಂಕು ಪೀಡಿತರಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ಅವರು ಜೂ.19ರವರೆಗೆ ಹೋಂ ಕ್ವಾರಂಟೈನ್ನಲ್ಲಿರಲಿದ್ದಾರೆ. ಅಲ್ಲದೆ ಅವರು ಸಂಪರ್ಕಿಸಿದರೆನ್ನಲಾದ ಅವರ ಮನೆಯವರು ಸೇರಿದಂತೆ ಒಟ್ಟು 23 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಇದರಲ್ಲಿ 12 ಜನರ ವರದಿ ಬಂದಿದ್ದು ಎಲ್ಲ 12 ವರದಿಗಳು ನೆಗೆಟಿವ್ ಬಂದಿದೆ. ಇನ್ನುಳಿದ 11 ಜನರ ವರದಿ ಬರಬೇಕಷ್ಟೆ ಎಂದು ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.