HomePage_Banner
HomePage_Banner
HomePage_Banner

ಇಂದು ಜೂನ್ 14 ವಿಶ್ವ ರಕ್ತದಾನಿಗಳ ದಿನ

Puttur_Advt_NewsUnder_1
Puttur_Advt_NewsUnder_1

ಇಂದು ಜೂನ್ 14 ವಿಶ್ವ ರಕ್ತದಾನಿಗಳ ದಿನ.ಪ್ರತಿ ವರ್ಷ ಈ ದಿನ ಭಾರತವು ಸೇರಿದಂತೆ, ವಿಶ್ವದಾದ್ಯಂತ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳ ವತಿಯಿಂದ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಮಾನವನ ರಕ್ತ ಅಮೃತಕ್ಕೆ ಸಮ.ಒಂದು ರೀತಿಯಲ್ಲಿ ಸಂಜೀವಿನಿ ಎನ್ನಬಹುದು. ವಿಜ್ಞಾನ ತಂತ್ರಜ್ಞಾನ ಎಷ್ಟು ಮುಂದುವರಿದರೂ ರಕ್ತಕ್ಕೆ ಪರ್ಯಾಯವಾಗಿ ಕೃತಕರಕ್ತವನ್ನು ತಯಾರಿಸಲು ಇಂದಿಗೂ ಸಾಧ್ಯವಾಗಲಿಲ್ಲ.

ನಮ್ಮ ದೇಹದ ನಾಳಗಳಲ್ಲಿ ಹರಿಯುವ ಕೆಂಪು ರೂಪದ ದ್ರವವೇ ರಕ್ತ. ಯಾವುದೇ ಜಾತಿ, ಧರ್ಮವನ್ನು ಅಳೆಯದೆ ಎಲ್ಲರ ದೇಹದಲ್ಲಿಯು ಇರುವುದು ರಕ್ತ. ನಾವು ಕೊಡುವ ಒಂದು ಬಾಟಲ್ ರಕ್ತ ಒಬ್ಬರ ಬದುಕಿಗೆ ಅಡಿಪಾಯವಾಗುತ್ತದೆ. ಆದರೆ, ಮೂಢನಂಬಿಕೆಗೆ ನಾವು ಇಂದಿನ ಕಾಲದಲ್ಲಿಯೂ ನಮ್ಮ ಜೊತೆಗೆ ಇರಿಸಿಕೊಂಡಿದ್ದೇವೆ.ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು ಎಂಬುದನ್ನೇ ನಂಬಲಾಗಿದೆ. ನಿಜವಾಗಿ ಗಮನಿಸುವುದಾದರೆ,ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.ಆರೋಗ್ಯಕರ ವ್ಯಕ್ತಿಯ ದೇಹದಲ್ಲಿ ಸುಮಾರು ೬ಲೀಟರ್ ರಕ್ತವಿದ್ದು ಕೇವಲ ೩೫೦ಮಿ. ಲೀ.ರಕ್ತ ಸ್ವೀಕರಿಸಲಾಗುತ್ತದೆ.

೨೦೦೪ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಣೆ ಮಾಡಲಾಯಿತು. ಇದಲ್ಲದೆ, ಆಸ್ಟ್ರಿಯಾದ ವೈದ್ಯ ಹಾಗೂ ಪ್ರಖ್ಯಾತ ಜೀವಶಾಸ್ತ್ರಜ್ಞ ,ಕಾರ್ಲ್ ಲ್ಯಾಂಡ್ ಸ್ಪೇನರ್ ಅವರು ರಕ್ತದ ಮೊದಲ ೩ ಗುಂಪುಗಳನ್ನಾಗಿ ವಿಂಗಡಿಸುವ ಬಗೆಯನ್ನು ಕಂಡುಹಿಡಿದರು.ಈ ಕಾರ್ಯದ ಫಲವಾಗಿ ಇವರು ರಕ್ತದ ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಇದರ ಸಲುವಾಗಿ ಅವರ ಜನ್ಮದಿನದಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು.ವಿಶ್ವದ ಅನೇಕ ರಾಷ್ಟ್ರಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವುದೆ ಈ ಆಚರಣೆಯ ಬಹು ಮುಖ್ಯ ಉದ್ದೇಶವಾಗಿದೆ.ಭಾರತದಲ್ಲಿ ಅಕ್ಟೋಬರ್ ೧ರಂದು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನು ಆಚರಿಸಲಾಗುತ್ತದೆ.

ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ.ಜನರು ತಮಗೆ ಬೇಕಾದವರಿಗಾಗಿ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಾರೆ.ಭಾರತದಲ್ಲಿ ಪ್ರತಿ ವರ್ಷ ೫ಕೋಟಿ ಯೂನಿಟ್ ರಕ್ತದ ಅವಶ್ಯಕತೆ ಇರುತ್ತದೆ ಆದರೆ, ದೊರಕುವುದು ಕೇವಲ ೨.೫ಕೋಟಿ ಯೂನಿಟ್. ನಮ್ಮ ದೇಶದಲ್ಲಿ ೨ಸೆಕೆಂಡಿಗೆ ರಕ್ತದ ಅವಶ್ಯಕತೆ ಇದೆ. “ಒ” ಗುಂಪಿನ ರಕ್ತಕ್ಕೆ ಬೇಡಿಕೆ ಹೆಚ್ಚು.

ಭಾರತವು ಸೇರಿದಂತೆ ಅನೇಕ ದೇಶಗಳಲ್ಲಿ ಬೇಡಿಕೆಗೆ ಸರಿಯಾಗಿ ರಕ್ತದ ಪೂರೈಕೆ ಇಲ್ಲ. ಇದರಿಂದಾಗಿ ಎಷ್ಟೋ ಜೀವಗಳು ಸಾವನ್ನಪ್ಪಿದೆ. ೧೮ರಿಂದ ೬೦ ವರ್ಷದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.ಹಾಗೂ ಆತನ ದೇಹದ ತೂಕ 45 kg ಗಿಂತ ಹೆಚ್ಚು ಇರಬೇಕು. ರಕ್ತದೊತ್ತಡ ಸಾಮಾನ್ಯವಾಗಿರಬೇಕು.ಹಿಮೋಗ್ಲೋಬಿನ್ ೧೨.೫ಗ್ರಾಮ್ ಇರಬೇಕು. ಯಾವುದೇ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವವರು ರಕ್ತದಾನ ಮಾಡಬಾರದು.ಆರೋಗವಂತ ಗಂಡಸು ೩ತಿಂಗಳಿಗೊಮ್ಮೆ ಹಾಗೂ ಮಹಿಳೆ ೪ ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು. ಇನ್ನೂ ಟ್ಯಾಟು ಹಾಕಿಕೊಂಡವರು ೬ತಿಂಗಳುಗಳ ಕಾಲ ರಕ್ತದಾನ ಮಾಡುವಂತಿಲ್ಲ.

ರಕ್ತದಾನ ಮಾಡುವುದರಿಂದ ಹಲವಾರು ಉಪಯೋಗವಿದೆ. ಅದೇನೆಂದರೆ, ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿರುತ್ತದೆ. ಹೃದಯಾಘಾತವನ್ನು ತಪ್ಪಿಸಲು ಸಹಾಯಕ. ಕ್ಯಾನ್ಸರ್‌ನಿಂದ ದೂರವಿರಿಸುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಸಹಾಯಕ. ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇನ್ನೂ ಅನೇಕ ಪ್ರಯೋಜನವಿದೆ.ಎಲ್ಲಕ್ಕಿಂತಲೂ ಮುಖ್ಯವಾಗಿ ರಕ್ತದಾನದಿಂದ ಒಂದು ಜೀವ ಉಳಿಸಬಹುದು.

ಎಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಸಂಸ್ಥೆಗಳು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.ಆದರೆ ನಾವು ಜಾಗೃತರಾಗಿ ಒಂದು ಜೀವ ಉಳಿಸಲು ಮನಸ್ಸು ಮಾಡಬೇಕು. ಆದರಿಂದ, ಅನೇಕ ಮಹನೀಯರು ಈ ಕಾರ್ಯವನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ ಅಂತವರಿಗೆ ಈ ದಿನದ ಮೂಲಕ ಕೃತಜ್ಞತೆ ಸಲ್ಲಿಸಲಾಗುತ್ತದೆ.

ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿ ದಿನಕ್ಕೆ ಮೀಸಲಾಗಬೇಕೆಂಬುದು ನನ್ನ ಆಶಯ.ರಕ್ತದಾನ ಮಾಡೋಣ ಒಬ್ಬ ವ್ಯಕ್ತಿಯ ಬದುಕಿಗೆ ಕಾರಣವಾಗೋಣ.

ಭಾಗ್ಯಶ್ರೀ ಗಾಣಿಗ ವಿವೇಕಾನಂದ ಕಾಲೇಜು ಪುತ್ತೂರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.