5 ದಿನಗಳ ಹಿಂದೆಯಷ್ಟೆ ಕರ್ತವ್ಯಕ್ಕೆ ಹಿಂತಿರುಗಿದ್ದ ಯೋಧ ಸಂದೇಶ್ ಶೆಟ್ಟಿ ಹೃದಯಾಘಾತಕ್ಕೆ ಬಲಿ | ಉತ್ತರಪ್ರದೇಶದಲ್ಲಿ ನಡೆದ ಘಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಭಾರತೀಯ ಭೂ ಸೇನಾ ಸಿಗ್ನಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಸಂದೇಶ್ ಶೆಟ್ಟಿ (೩೪ ವ.) ಎಂಬವರು ಉತ್ತರಪ್ರದೇಶದ ಮಥುರಾ ಎಂಬಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಬಾರ್ಯ ಅಲಿಂಗಿರ ಮನೆ ನಿವಾಸಿ ನಾರಾಯಣ ಶೆಟ್ಟಿ – ಗುಲಾಬಿ ದಂಪತಿಯ ನಾಲ್ವರು ಮಕ್ಕಳ ಪೈಕಿ ಎರಡನೇಯವರಾದ ಸಂದೇಶ್ ಶೆಟ್ಟಿ ಈ ಬಾರಿ ರಜೆಯಲ್ಲಿ ಲಾಕ್ ಡೌನ್ ಕಾರಣದಿಂದ ಪ್ರಯಾಣ ಬೆಳೆಸಲಾಗದೆ ಮೂರು ತಿಂಗಳ ಕಾಲ ಮನೆಯಲ್ಲಿಯೇ ಇದ್ದರು. ಜೂನ್ ೮ ರಂದು ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನ ಮೂಲಕ ಪ್ರಯಾಣಿಸಿ ಕರ್ತವ್ಯಕ್ಕೆ ಹಿಂತಿರುಗಿದ್ದರು.

ಪ್ರಸಕ್ತ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ವಿಮಾನಯಾನ ಬೆಳೆಸಿದ ಕಾರಣಕ್ಕೆ ಮಥುರಾದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಅವರನ್ನಿರಿಸಲಾಗಿತ್ತು. ಈ ಮಧ್ಯೆ ಶುಕ್ರವಾರ ಮಧ್ಯರಾತ್ರಿ ೧೨.೩೦ ರ ವೇಳೆಗೆ ಹೃದಯಾಘಾತಕ್ಕೀಡಾದ ಅವರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿಧನರಾದರೆಂದು ತಿಳಿದು ಬಂದಿದೆ.

ಕಳೆದ ಹದಿನಾಲ್ಕು ವರ್ಷಗಳಿಂದ ಭಾರತೀಯ ಭೂ ಸೇನಾ ಪಡೆಯಲ್ಲಿ ಸಿಗ್ನಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, ಗೋವಾ, ದೆಹಲಿ, ಜಮ್ಮು, ಹಾಗೂ ಉತ್ತರ ಪ್ರದೇಶದಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದರು. ಮೃತದೇಹ ಮರಣೋತ್ತರ ಪರೀಕ್ಷೆಯ ಬಳಿಕ ಆದಿತ್ಯವಾರದಂದು ಹುಟ್ಟೂರಿಗೆ ತಲುಪುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಕ್ರೀಡಾ ಪಟುವಾಗಿದ್ದ ಸಂದೇಶ್ ..
ಬಾರ್ಯ ಗ್ರಾಮದ ಪೆರಿಯೊಟ್ಟು ಸ ಹಿ ಪ್ರಾ ಶಾಲೆಯಲ್ಲಿ ೭ನೇತರಗತಿಯವರೆಗೆ ಕಲಿತು, ಬಳಿಕ ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿ ,ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು. ಶಾಲಾ ಜೀವನದಲ್ಲಿ ಉತ್ತಮ ಓಟಗಾರನಾಗಿದ್ದ ಇವರು, ಕಾಲೇಜು ದಿನಗಳಲ್ಲಿ ವೇಯಿಟ್ ಲಿಫ್ಟರ್ ಆಗಿಯೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.

ಅತ್ತೆ ಮಗಳ ಮದುವೆಗೆ ಸಿದ್ದತೆಗಳನ್ನು ಮಾಡಿ ಜಗತ್ತಿನಿಂದಲೇ ನಿರ್ಗಮಿಸಿದರು…
ಸಂದೇಶ್ ಶೆಟ್ಟಿಯವರ ಸೋದರತ್ತೆಯ ಮಗಳ ವಿವಾಹವು ಜೂನ್ ೧೪ರಂದು ನಿಗದಿಯಾಗಿದ್ದು, ಹೆತ್ತವರನ್ನು ಕಳೆದುಕೊಂಡಿದ್ದ ಆಕೆಯ ವಿವಾಹಕ್ಕೆ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲಾ ಸಿದ್ದತೆಗಳನ್ನು ನಡೆಸಿ , ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆಯಿಂದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಾರದೆ ಕರ್ತವ್ಯಕ್ಕೆ ಹಿಂತಿರುಗಿದ್ದರು. ಆದರೆ ವಿವಾಹಕ್ಕೂ ಮೊದಲೇ ಮೃತ್ಯುವಶವಾಗುವ ಮೂಲಕ ವಿಧಿಲೀಲೆಯ ವಿಸ್ಮಯಕ್ಕೆ ಕಾರಣರಾದರು. ಮದುವೆ ಸಂಭ್ರಮದಲ್ಲಿದ್ದ ಮನೆ ಯೋಧನ ಅಕಾಲಿಕ ಅಗಲುವಿಕೆಯಿಂದ ಸ್ಮಶಾನ ಮೌನಕ್ಕೆ ಜಾರಿದೆ. ದಿಬ್ಬಣವನ್ನು ಎದುರುಗೊಳ್ಳಬೇಕಾದ ದಿನ ಮನೆ ಮಗನ ಮೃತದೇಹವನ್ನು ಎದುರುಗೊಳ್ಳುವಂತಾಗಿರುವುದು ವಿಧಿಯ ಕ್ರೂರತೆಗೆ ಸಾಕ್ಷಿಯಾಗಿದೆ. ಮೃತರು ತಂದೆ,ತಾಯಿ,ಅಣ್ಣ ,ಅಕ್ಕ,ತಮ್ಮನನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.