Home_Page_Advt
Home_Page_Advt
Home_Page_Advt

ಕೆಯ್ಯೂರು: ವಿದ್ಯುತ್ ಶಾಕ್ ತಗುಲಿ ರಮೇಶ್ ಗೌಡ ಉದ್ದೋಳೆ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪಂಪು ಚಾಲೂ ಮಾಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಯುವಕರೋರ್ವರು ಮೃತಪಟ್ಟ ಘಟನೆ ಕೆಯ್ಯೂರಿನಿಂದ ಜೂ.14ರಂದು ಬೆಳಿಗ್ಗೆ ವರದಿಯಾಗಿದೆ.  ಕೆಯ್ಯೂರು ಉದ್ದೋಳೆ ಕಾಂಪ್ಲೆಕ್ಸ್ ಮಾಲಕ ರಮೇಶ್ ಗೌಡ ಉದ್ದೋಳೆ ಮೃತಪಟ್ಟವರು. ಇವರು ತನ್ನ ತೋಟದಲ್ಲಿರುವ ಪಂಪು ಅನ್ನು ಚಾಲೂ ಮಾಡಲು ಸ್ವಿಚ್ ಹಾಕುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಕೃಷಿಕರಾಗಿದ್ದು ಕೆಯ್ಯೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ತಾಯಿ ದೇವಕಿ, ಪತ್ನಿ ಶರಣ್ಯ, ಪುತ್ರ ಧನ್ವಿತ್‌ , ಸಹೋದರರಾದ ಆನಂದ ಗೌಡ, ಶಶಿಧರ ಗೌಡ, ಸಹೋದರಿಯರಾದ ಲಲಿತಾ ಪಾಂಡುರಂಗ, ಪ್ರೇಮಾ ಕೇಶವ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.