HomePage_Banner
HomePage_Banner
HomePage_Banner
Breaking News

ರಕ್ತದಾನದಿಂದ ಒಂದು ಜೀವ ಉಳಿಸಿದ ಧನ್ಯತಾ ಭಾವ | ವಿಶ್ವ ರಕ್ತದಾನ ದಿನಾಚರಣೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜೀವನದಲ್ಲಿ ಏನೆ ಸಾಧನೆ ಮಾಡದಿದ್ದರೂ ರಕ್ತದಾನ ಮಾಡುವ ಮೂಲಕ ಒಂದು ಜೀವ ಉಳಿಸಿದ ಧನ್ಯತಾ ಭಾವ ಮೂಡುತ್ತದೆ ಎಂದು ತಹಸೀಲ್ದಾರ್ ರಮೇಶ್ ಬಾಬು ಟಿ ಅವರು ಹೇಳಿದರು.

ಇ- ಫ್ರೆಂಡ್ಸ್ ಪುತ್ತೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಸಹಯೋಗದೊಂದಿಗೆ ಜೂ.೧೪ರಂದು ಇಲ್ಲಿನ ರೋಟರಿ ಟ್ರಸ್ಟ್ ಹಾಲ್‌ನ ನಡೆದ ವಿಶ್ವ ರಕ್ತದಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ರಕ್ತ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ರಕ್ತದ ಅವಶ್ಯಕತೆ ಇದ್ದಾಗ ನಾವು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕಾಗುತ್ತದೆ. ನಾವು ಬೇರೆ ಏನು ಸಾಧನೆ ಮಾಡದಿದ್ದರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ. ಆಗ ನಮ್ಮಿಂದ ಒಂದು ಜೀವ ಉಳಿಸಿದ ಧನ್ಯತಾ ಭಾವ ಮೂಡುತ್ತದೆ ಎಂದರು.

ರಕ್ತಕ್ಕೆ ಪರ್ಯಾಯ ಇನ್ನೊಂದಿಲ್ಲ:
ಆದರ್ಶ ಆಸ್ಪತ್ರೆಯ ಡಾ. ಬಿ.ಶ್ಯಾಮ ಅವರು ಮಾತನಾಡಿ ರಕ್ತಕ್ಕೆ ಪರ್ಯಾಯ ಇನ್ನೊಂದು ಇಲ್ಲ. ರಕ್ತದ ಬದಲು ಬೇರೆ ಔಷಧಿ ಕೊಟ್ಟರೂ ಅದು ತಾತ್ಕಾಲಿಕ ಮಾತ್ರ. ಆದರೆ ರಕ್ತ ಮಾತ್ರ ಅಗತ್ಯ. ಅದು ಜೀವನ ಪರಿಯಂತ. ಕೆಲವೊಂದು ಖಾಯಿಲೆಗಳಿಗೆ ರಕ್ತದ ಕೆಲವೊಂದು ಘಟಕಗಳನ್ನು ಕೊಡಬೇಕಾಗುತ್ತದೆ. ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ರಕ್ತದಾನಿಗಳು ಅಗತ್ಯವಾಗಿ ಬೇಕು ಎಂದ ಅವರು ರಕ್ತದ ಮಹತ್ವ ಕುರಿತು ಮಾಹಿತಿ ನೀಡಿದರು.

ನಾವೆಲ್ಲ ರಕ್ತ ಸಂಬಂಧಿಗಳು :
ಇ- ಫ್ರೆಂಡ್ಸ್‌ನ ಅಧ್ಯಕ್ಷ ಡಾ.ಇಸ್ಮಾಯಿಲ್ ಸರ್ಫಾಜ್ ಅವರು ಮಾತನಾಡಿ ನಾವೆಲ್ಲ ಒಂದು ಹಂತದಲ್ಲಿ ರಕ್ತ ಸಂಬಂಧಿಗಳೇ ಆಗಿದ್ದೇವೆ. ಯಾಕೆಂದರೆ ರಕ್ತದಾನ ರಕ್ತ ಸಂಬಂಧಿಗಳನ್ನು ಹೆಚ್ಚಿಸುತ್ತಿದೆ ಎಂದ ಅವರು ನಮ್ಮ ಸಂಸ್ಥೆಯಿಂದ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತಾ ಸೇವೆ ಮಾಡಲಾಗುತ್ತಿದೆ. ಕೋವಿಡ್ ಲಾಕ್ ಡೌನ ಸಂದರ್ಭದಲ್ಲೂ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಅಭಾವ ಇದ್ದಾಗ ರಕ್ತದಾನ ಮಾಡಿದ್ದೆವು ಎಂದು ಹೇಳಿದರು. ವೇದಿಕೆಯಲ್ಲಿ ಬ್ಲಡ್ ಹೆಲ್ಪ್‌ಲೈನ್‌ನ ಅಧ್ಯಕ್ಷ ಇರ್ಫಾಜ್ ಬನ್ನೂರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಜೇವಿಯರ್ ಡಿ’ಸೋಜವಂದಿಸಿದರು. ಪ್ರೊ. ದತ್ತಾತ್ರೇಯ ರಾವ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲ್‌ಬ್‌ನ ವಾಮನ್ ಪೈ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.