Breaking News

ರೆಡ್ ಕ್ರಾಸ್ ಸೊಸೈಟಿ, ರೋಟರಿ ಕ್ಲಬ್‌ನ ಆರು ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ರಕ್ತದಾನ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ರಕ್ತದಾನದಿಂದ ದೇಹದ ಶಕ್ತಿ ಕುಂದುತ್ತದೆಂಬ ಮೂಢನಂಬಿಕೆ ಬೇಡ – ತಹಶೀಲ್ದಾರ್ ರಮೇಶ್ ಬಾಬು

ರಕ್ತದಾನ ಮಾಡುವುದರಿಂದ ದೇಹದ ಶಕ್ತಿ ಕುಂದುತ್ತದೆ ಎಂಬ ಮೂಢನಂಬಿಕೆ ಬಹಳಷ್ಟು ಜನರಲ್ಲಿದ್ದು, ಮೂಢನಂಬಿಕೆ ತೊಲಗಿಸುವ ಪ್ರಯತ್ನ ಎಲ್ಲರಿಂದ ಆಗಬೇಕು ಎಂದು ಭರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ತಹಶೀಲ್ದಾರ್ ರಮೇಶ್ ಬಾಬು ಟಿ ಅವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಪೂರ್ವ, ರೋಟರಿ ಯುವ, ರೋಟರಿ ಸೆಂಟ್ರಲ್, ರೋಟರಿ ಸ್ವರ್ಣ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಇಲೈಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜೂ.೧೪ರಂದು ನೆಹರುನಗರ ಸುದಾನದಲ್ಲಿರುವ ಎಡ್ವರ್ಡ್ ಹಾಲ್‌ನಲ್ಲಿ ನಡೆದ ವಿಶ್ವ ರಕ್ತದಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ನಿರಂತರ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡಬೇಕಾದರೆ ಆತ ೧೮ ವರ್ಷ ಮೀರಿರಬೇಕು. ೬೦ ವರ್ಷದ ಒಳಗಿರಬೇಕೆಂಬ ವ್ಯವಸ್ಥೆಯ ಅಡಿಯಲ್ಲಿ ರಕ್ತದಾನ ಮಾಡಬೇಕಾಗುತ್ತದೆ. ಹಾಗಾಗಿ ರಕ್ತದಾನ ಮಾಡಿದರೆ ದೇಹದ ಶಕ್ತಿ ಕುಂದುತ್ತದೆ ಎಂಬ ಮೂಢನಂಬಿಕೆ ಬೇಡ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರು ರಕ್ತದಾನ ಮಾಡುವಂತೆ ಪ್ರೇರೆಪಿಸುವ ಕೆಲಸ ರೋಟರಿ ಸಂಸ್ಥೆಯಂತಹ ಹಲವಾರು ಸಂಘ ಸಂಸ್ಥೆಗಳು ಅರಿವು ಮೂಡಿಸುವ ಕೆಲಸ ಆಗಬೇಕೆಂದರು.

ಪ್ರಸ್ತುತ ದಿನದಲ್ಲಿ ರಕ್ತದಾನಿಗಳ ಹೆಚ್ಚಳವಾಗಿದೆ:
ರೋಟರಿ ಪೂರ್ವ ಪುತ್ತೂರು ಇದರ ನಿಯೋಜಿತ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಹಿಂದಿನ ದಿನಗಳನ್ನು ಹೋಲಿಸಿದರೆ ಪ್ರಸ್ತುತ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಿದೆ. ಬಹಳ ಕಡಿಮೆ ಇರುವ ಕೆಲವೊಂದು ರಕ್ತ ಗುಂಪುಗಳನ್ನು ಬೇಕಾದ ಸಂದರ್ಭಕ್ಕೆ ತಕ್ಕಂತೆ ಮಾತ್ರ ಬಳಸಬೇಕಾಗುತ್ತದೆ. ಅಂತಹ ವ್ಯಕ್ತಿಗಳ ರಕ್ತ ಅಗತ್ಯ ಬಿದ್ದಲ್ಲಿ ಮಾತ್ರ ಪಡೆಯಲಾಗುತ್ತದೆ. ಉಳಿದಂತೆ ಸಾಮಾನ್ಯ ಗುಂಪಿನ ಕಣಗಳಿರುವವರು ನಿರಂತರ ರಕ್ತದಾನ ಮಾಡುವಂತೆ ಹೇಳಿದರು.

ರಕ್ತದಾನ ಮಾಡಿ ಆತ್ಮತೃಪ್ತಿ ಪಡೆದುಕೊಳ್ಳೋಣ:
ರೋಟರಿಕ್ಲಬ್ ಪುತ್ತೂರು ಇಲೈಟ್‌ನ ಅಧ್ಯಕ್ಷ ರೇ ವಿಜಯ ಹಾರ್ವೀನ್ ಅವರು ಮಾತನಾಡಿ ರಕ್ತದ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ರೋಟರಿ ಕ್ಲಬ್ ಚಿಂತನೆ ಮಾಡಿ ಪುತ್ತೂರಿನಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಆರಂಭಿಸಿತ್ತು. ಇವತ್ತು ಅದರ ಪ್ರಯೋಜನ ಎಲ್ಲರಿಗೂ ಲಭಿಸಿದೆ. ಬ್ಲಡ್ ಬ್ಯಾಂಕ್‌ನಲ್ಲಿ ರಕ್ತ ಶೇಖರಣೆ ಆಗಬೇಕಾದರೆ ಎಲ್ಲರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡಿ ಆತ್ಮತೃಪ್ತಿ ಪಡೆದುಕೊಳ್ಳೋಣ ಎಂದರು.

ರೋಟರಿ ಸೆಂಟ್ರಲ್‌ಗೆ ಸೇರ್ಪಡೆ
ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಟಿ ಅವರು ವಿಶ್ವ ರಕ್ತದಾನ ದಿನಾಚರಣೆಯಲ್ಲಿ ರೋಟರಿ ಕ್ಲಬ್ ಸೆಂಟ್ರಲ್‌ಗೆ ಸೇರ್ಪಡೆಗೊಂಡರು. ರೋಟರಿ ವಲಯ ೫೪ ನಿಯೋಜಿತ ಸಹಾಯಕ ಗವರ್ನರ್ ಸಚ್ಚಿದಾನಂದ ಅವರು ತಹಸೀಲ್ದಾರ್ ಅವರಿಗೆ ರೋಟರಿ ಚಿಹ್ನೆ ತೊಡಿಸಿದರು. ರೋಟರಿ ಸ್ವರ್ಣದ ನಿಯೋಜಿತ ಅಧ್ಯಕ್ಷೆ ಸೆನೋರಿಟ ಉಪಸ್ಥಿತರಿದ್ದರು. ಭಾರತೀಯ ರೆಡಕ್ರಾಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಆಸ್ಕರ್ ಆನಂದ್ ಸ್ವಾಗತಿಸಿ, ರೋಟರಿ ಪುತ್ತೂರು ಯುವ ಅಧ್ಯಕ್ಷ ಚೇತನ್ ಕಜೆ ವಂದಿಸಿದರು. ರೋಟರಿ ಕ್ಲಬ್ ಸೆಂಟ್ರಲ್ಲ ಇದರ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ರೋಟರಿ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.