HomePage_Banner
HomePage_Banner
HomePage_Banner

ಕೊರೋನಾ ಎಫೆಕ್ಟ್: ಒಂದೇ ದಿನಕ್ಕೆ ಸೀಮಿತಗೊಳಿಸಿದ 38ನೇ ವರುಷದ ಫಿಲೋಮಿನಾ ಕಾಲೇಜಿನ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ಬಿಟ್ಟು ಬಿಡದೆ ಕಾಡುತ್ತಿರುವ ನಡುವೆಯೂ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಜನರಲ್ಲಿ ಆತಂಕ ಮುಂದುವರೆದಿದೆ. ವಿಜ್ರಂಭಣೆಯಿಂದ ಕಾರ್ಯಕ್ರಮ ನಡೆಸಲು ಹಾಗೂ ಸಾರ್ವಜನಿಕರು ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಇರುವ ಈ ಕಾಲಘಟ್ಟದಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾದ ಸಂತ ಫಿಲೋಮಿನಾ ಕಾಲೇಜು ಶ್ರೀ ಗಣೇಶೋತ್ಸವ ಉತ್ಸವ ಸಮಿತಿಯ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ನಡೆಯುತ್ತಿರುವ ೩೮ನೇ ವರುಷದ ಗಣೇಶೋತ್ಸವವನ್ನು ಎರಡು ದಿನದ ಬದಲಿಗೆ ಒಂದೇ ದಿನ ಆಚರಿಸುವುದಾಗಿ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಈ ಬಾರಿ ಪುಟ್ಟ ಗಣಪನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ ಸಂಜೆ 3.30ಕ್ಕೆ ಗಣಪನ ವಿಗ್ರಹವನ್ನು ಹಾರಾಡಿ ಬಾವಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಭಕ್ತರಿಗೆ ಸೇವೆ ಸೌಲಭ್ಯವಿರುವುದಿಲ್ಲ ಎಂದು ಸಮಿತಿಯ ಸದಸ್ಯರು ತಿಳಿಸಿರುತ್ತಾರೆ. ಧಾರ್ಮಿಕ ಉತ್ಸವದಂತಹ ಕಾರ್ಯಕ್ರಮ ಮಾಡುವುದು ಕಷ್ಟ. ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳನ್ನು ಕೇವಲ ಕಟ್ಟಾಕಟ್ಟಲೆಗೆ ಮಾತ್ರ ಸೀಮಿತಿಗೊಳಿಸಿ ಒಂದೇ ದಿನ ಕಾರ್ಯಕ್ರಮ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿನಾಯಕ ನಗರದಲ್ಲಿ ನಡೆದ ಸಭೆಯಲ್ಲಿ ಸಂತ ಫಿಲೋಮಿನಾ ಕಾಲೇಜು ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿ, ಸದಸ್ಯರಾದ ನಾಗೇಶ್ ಪೈ, ದುರ್ಗಾಪ್ರಸಾದ್, ಫಿಲೋಮಿನಾ ಕಾಲೇಜು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಕುಮಾರ ಪರ್ಲಡ್ಕ, ವಿದ್ಯಾರ್ಥಿಗಳಾದ ಆಶ್ಲೇಷ್, ಕಿರ್ತೇಶ್, ಪ್ರತೀಕ್ ಶೆಣೈ, ಪ್ರಜ್ವಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.