HomePage_Banner
HomePage_Banner
HomePage_Banner
HomePage_Banner

ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಕುಂಡಡ್ಕ ಶಾಖೆ ಉದ್ಘಾಟಣೆ | ಕೃಷಿಯನ್ನು ನಂಬಿದವರಿಗೆ ಸೋಲಿಲ್ಲ: ಮಠಂದೂರು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ. ಕೃಷಿಕರ ಹಿತಕ್ಕಾಗಿ ಸಂಘಗಳು ಕಾರ್ಯನಿರ್ವಹಿಸಿದಲ್ಲಿ ಅದರರಲ್ಲಿ ಯಶಸ್ಸು ಖಂಡಿತಾ. ಕೃಷಿಯನ್ನು ನಂಬಿದವರಿಗೆ ಸೋಲಿಲ್ಲ. ಕೊರೊನಾ ದುಸ್ಥಿತಿಯಲ್ಲಿಯ ಸನ್ನಿವೇಶದಲ್ಲಿಯೂ ಕೃಷಿಕರು ಹಿಂಜರಿದಿಲ್ಲ. ಸಹಕಾರ ಸಂಘಗಳು ಗ್ರಾಮ ಸ್ವರಾಜ್ಯ ಕನಸು ನನಸಾಗಲು ಕೃಷಿಕರ ಪಾತ್ರ ಮಹತ್ವದ್ದಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಜೂ.೧೪ರಂದು ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಕುಂಡಡ್ಕ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜಾರಾಮ್ ಭಟ್ ಮಾತನಾಡಿ ಯಾಂತ್ರಿಕ ಕೃಷಿ ಪದ್ಧತಿಗೆ ಸಂಘಗಳು ಪ್ರೋತ್ಸಾಹ ನೀಡಬೇಕು. ಕೊರೊನಾ ದುಸ್ಥಿತಿಯನ್ನು ಸಹಕಾರ ಸಂಘಗಳು ಸಮರ್ಥವಾಗಿ ಎದುರಿಸಿದೆ. ಕೃಷಿ ಸಾಲಗಾರನ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸುವ ಮಾರ್ಗದರ್ಶನ ಸಂಘಗಳಿಂದ ನಡೆಯಬೇಕು ಎಂದರು.

 

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್ ದಾಸ್ತಾನು ಕೊಠಡಿ ಉದ್ಘಾಟಿಸಿದರು. ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್ ಯಚ್, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ, ವಿಟ್ಲ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಯಂ. ಕೆ. ಪುರುಷೋತ್ತಮ, ವಿಟ್ಲ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾದ, ಉದಯಕುಮಾರ್, ಸದಾನಂದ ಗೌಡ, ರಾಘವೇಂದ್ರ ಪೈ, ದಿನೇಶ, ವಾಸು ಸಿಎಚ್, ಶಿವಪ್ಪ ನಾಯ್ಕ, ಗೌರಿ ಎಸ್.ಎನ್. ಭಟ್, ಸಂಗೀತ, ಕವಿತಾ ಕೆ.ಎಚ್. ಉಪಸ್ಥಿತರಿದ್ದರು.

ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕಲಾ ಕೆ.ಪಿ. ಪ್ರಾಸ್ತಾವಿಕ ಮಾತುಗಳನ್ನಡಿದರು. ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.