HomePage_Banner
HomePage_Banner
HomePage_Banner
HomePage_Banner

ನಸೀಬ್ ಇಂಜಿನಿಯರಿಂಗ್ ಉದ್ಯೋಗ ತರಬೇತಿ ಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ೨೫ ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಬೋರ್‌ವೆಲ್ ಉದ್ಯಮದಲ್ಲಿ ಅತೀಹೆಚ್ಚು ಗ್ರಾಹಕರನ್ನು ಹೊಂದಿರುವ ನಸೀಬ್ ಬೋರ್‌ವೆಲ್ ಸಂಸ್ಥೆಯ ಮಾಲಕ ಅಬೂಬಕ್ಕರ್ ಮುಳಾರ್ ರವರ ನೇತೃತ್ವದಲ್ಲಿ ನಿರುದ್ಯೋಗಿಗಳಿಗೆ ಉಚಿತ ತಾಂತ್ರಿಕ ಉದ್ಯೊಗದ ಬಗ್ಗೆ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ನಸೀಬ್ ಇಂಜಿನಿಯರಿಂಗ್ ವರ್ಕ್ಸ್ ಮತ್ತು ವೆಲ್ಡಿಂಗ್ ಸೆಂಟರ್ ಮತ್ತು ಶಂಶುಲ್ ಉಲಮಾ ತಾಂತ್ರಿಕ ಉದ್ಯೋಗ ತರಬೇತಿ ಕೇಂದ್ರ ಪುತ್ತೂರು ಬೊಳುವಾರ್‌ನಲ್ಲಿರುವ ಪ್ರಸಾದ್ ಬಿಲ್ಡಿಂಗ್‌ನಲ್ಲಿ ಜೂ.೧೪ರಂದು ಶುಭಾರಂಭಗೊಂಡಿತು.

ಮುಕ್ವೆ ಅಬೀಬ್ ರಹ್ಮಾನ್ ತಂಙಳ್ ಅಲ್ ಬುಖಾರಿಯ ರವರು ದುವಾ ಆಶೀರ್ವಚನ ನೀಡುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಯುವಕರಿಗೆ ಪೂರಕವಾದ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮ ಪ್ರಾರಂಭಿಸುವ ಮೂಲಕ ಯುವ ಜನಾಂಗಕ್ಕೆ ಹಾಗೂ ಇಡೀ ಸಮಾಜಕ್ಕೆ ಆಸರೆಯಾಗಲಿದೆ ಎಂದು ಅವರು ಹೇಳಿದರು. ನಸೀಬ್ ಬೋರ್‌ವೆಲ್ ಮಾಲಕ ಅಬೂಬಕ್ಕರ್ ಮುಳಾರ್ ರವರು ಇಂತಹ ಉದ್ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅವರ ಕಲ್ಪನೆ ಚಿಂತನೆಗಳಿಗೆ ಬೆಳಕು ಚೆಲ್ಲುವಂತಾಗಲಿದೆ. ಈ ಉದ್ಯೋಗ ತರಬೇತಿ ಕೇಂದ್ರದ ಮೂಲಕ ಎಲ್ಲರ ಬಾಳು ಬೆಳಕಾಗಲಿ ಎಂದು ಶುಭಹಾರೈಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ಲಾನ್ಸಿ ಮಸ್ಕರೇನಸ್ ರವರು ಮಾತನಾಡಿ ಇಂತಹ ಟ್ರೈನಿಂಗ್ ಸೆಂಟರ್ ಆರಂಭಿಸುವ ಮೂಲಕ ಇಲ್ಲಿಗೆ ತರಬೇತಿಗೆ ಬರುವವರು ಉತ್ತಮ ತರಬೇತಿ ಪಡೆದುಕೊಂಡು ಮುಂದೆ ಉದ್ಯೋಗಿಗಳಾಗಿ ಇತರರಿಗೆ ಆಸರೆಯಾಗುವಂತಾಗಬೇಕು ಎಂದು ಅವರು ಹೇಳಿದರು. ಅಜ್ಜಿಕಟ್ಟೆ ಮಸೀದಿಯ ಖತೀಬ್ ರಶೀದ್ ದಾರಿಮಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಹಾಜಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಬ್ರಾಹಿಂ ಮುಳಾರ್, ಮುಂಡೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಯಾಕುಬು ಮುಳಾರ್, ಉಮ್ಮರ್ ಪಟ್ಟೆ, ಸುಲೈಮಾನ್ ಮುಳಾರ್, ಅದ್ಲಕುಂಞಿ ಮುಳಾರ್, ಝಕಾರಿಯಾ ಮುಳಾರ್, ಆದಂ ಮುಳಾರ್, ರಝಾಕ್ ಮುಳಾರ್, ಜಬ್ಬಾರ್ ಮುಕ್ವೆ, ಜಬ್ಬಾರ್ ಆರ್ಷದ್ ಮುಕ್ವೆ, ಇಸ್ಮಾಯಿಲ್ ಸವಣೂರು, ಮೊದಿನ್ ಪೋಳ್ಯ, ಉಮ್ಮರ್ ಪಡ್ಪಿನಂಗಡಿ, ಬಾಲಾಮ ಅಬ್ದುಲ್ ರಹೀಮಾನ್ ಹಾಜಿ, ಮುಸ್ತಫ ಮುಳಾರ್, ಇಬ್ರಾಹಿಂ ಸರ್ವೆ, ಅದ್ರಾಮ ಸರ್ವೆ, ಹಂಝ ಸರ್ವೆ, ಬಾತೀಶ್ ಸರ್ವೆ, ನಝೀರ್ ಆರ್ಷದಿ ಅಜ್ಜಿಕಟ್ಟೆ ಉಪಸ್ಥಿತರಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

೧೮ವರ್ಷ ಮೇಲ್ಪಟ್ಟ ಎಲ್ಲಾ ವರ್ಗದ ಯುವಕರಿಗೆ ಉಚಿತ ತಾಂತ್ರಿಕ ತರಬೇತಿ
೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವರ್ಗದ ಯುವಕರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ನಸೀಬ್ ಬೋರ್‌ವೆಲ್ ಮತ್ತು ಟ್ರಾವೆಲ್ಸ್ ಮಾಲಕ ಅಬೂಬಕ್ಕರ್ ಮುಲಾರ್ ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಕಬ್ಬಿಣ ಸ್ಟೀಲ್ ಸಿಲ್ವರ್ ಹಾಗು ಕೆಲವೊಂದು ಮರದ ಉಪಪಕರಣಗಳ ತಯಾರಿಕೆ ಹಾಗೂ ಪಿಕಪ್ ಹಾಗೂ ಇತರ ವಾಹನಗಳ ಬಾಡಿ ಪೇಂಟಿಂಗ್ ಪಾಲಿಶ್ ಹಾಗೂ ಕೃಷಿ ಸಾಮಾಗ್ರಿಗಳ ತಯಾರಿಕೆ ತಯಾರಿಕೆಯ ಬಗ್ಗೆ ಉಚಿತವಾಗಿ ತಾಂತ್ರಿಕ ವಿದ್ಯಾಭ್ಯಾಸ ಕಲಿಸಿಕೊಡಲಾಗುವುದು. ಅತ್ಯುತ್ತಮ ಶೈಲಿಯ ಸೀಟ್ ಮಾಡು, ರೋಲಿಂಗ್ ಶೆಟ್ಟರ್ ಸ್ಟೀಲ್ ರೈಲಿಂಗ್ಸ್ ಗೇಟ್ ಗ್ರಿಲ್ಸ್ ಆರೆ ಪಿಕ್ಕಾಸ್ ಸುತ್ತಿಗೆಗಳಿಗೆ ಮರದ ಹಿಡಿ ಹಾಗೂ ಇತರ ಕೃಷಿ ಉಪಕರಣಗಳ ಹಾಗೂ ಎಲ್ಲಾ ತರದ ವೆಲ್ಡಿಂಗ್ ಕೆಲಸಗಳನ್ನು ಗ್ರಾಹಕರ ಮನೆಗಳಿಗೆ ಕ್ಲಪ್ತ ಸಮಯದಲ್ಲಿ ಬಂದು ಮಾಡಿಕೊಡುವ ವ್ಯವಸ್ಥೆಯಿದ್ದು ಸಹಕರಿಸುವಂತೆ ಅವರು ಕೋರಿದ್ದಾರೆ. ಯಾರಾದರೂ ಉದ್ಯೋಗ ಕಲಿಯಲು ಇಚ್ಚಿಸುವ, ೧೮ ವರ್ಷದ ಮೇಲ್ಪಟ್ಟ ಯುವಕರು. ಇದ್ದಲ್ಲಿ ಮೇಲಿನ ವಿಳಾಸಕ್ಕೆ ಭೇಟಿಯಾಗಿ ಅಥವಾ ೯೮೮೦೨೦೬೧೧೭ ೮೨೯೬೦೯೩೧೩೪ ೭೦೨೨೦೩೭೦೨೮ ಕರೆ ಮಾಡಬಹುದು ಎಂದು ನಸೀಬ್ ಬೋರ್‌ವೆಲ್ ಮತ್ತು ಟ್ರಾವೆಲ್ಸ್ ಮಾಲಕ ಅಬೂಬಕ್ಕರ್ ಮುಲಾರ್ ಮತ್ತು ಸಂಸ್ಥೆಯ ಪಾಲುದಾರ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.