ಈಶ್ವರಮಂಗಲ: ಆಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತ ‘ಜ‌ಯಹರಿ ಫ್ಯೂಯಲ್ ಸ್ಟೇಶನ್ʼ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಸಹಜ್ ಜೆ.ರೈ ಬಳಜ್ಜ ಮಾಲಕತ್ವದ ಸುಸಜ್ಜಿತ ಪೆಟ್ರೋಲ್ ಬಂಕ್  ನ್ನು`ಜಯಹರಿ ಫ್ಯೂಯಲ್ ಸ್ಟೇಶನ್’ ಜೂ.15 ರಂದು ಶುಭಾರಂಭಗೊಂಡಿತು. ಮಾಲಕರ ಹೆತ್ತವರಾದ ಎಸ್.ಬಿ.ಜಯರಾಮ ರೈ ಬಳಜ್ಜ ಮತ್ತು ಹರಿಣಾಕ್ಷಿ ಜೆ.ರೈಯವರು ದೇವರಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. 

ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಸೌಕರ್ಯಗಳನ್ನೊಳಗೊಂಡ ಪೆಟ್ರೋಲ್ ಬಂಕ್ ಇದಾಗಿದ್ದು ಕಾಸರಗೋಡು, ಕರ್ನಾಟಕ ಗಡಿ ಭಾಗದ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಹೊಸ ಔಟ್‌ಲೆಟ್‌ನ ವಿಶೇಷತೆಗಳು
ಜಯಹರಿ ಫ್ಯೂಯಲ್ ಸ್ಟೇಶನ್ ಸಂಪೂರ್ಣ ಸೌರಶಕ್ತಿಯಿಂದ ನಡೆಸಲ್ಪಡುತ್ತದೆ. ವಾಹನಗಳ ಚಕ್ರಗಳಿಗೆ ಉಚಿತ ನೈಟ್ರೋಜನ್ ಗಾಳಿ, ವಾಹನ ಸವಾರರಿಗೆ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, 20 ಕ್ಕೂ ಅಧಿಕ ಬಸ್ಸುಗಳನ್ನು ನಿಲ್ಲಿಸಲು ಅನುಕೂಲವಿರುವಂತಹ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ತರದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಸ್ವೀಕೃತಿ ವ್ಯವಸ್ಥೆಯನ್ನು ಮಾಡಲಾಗಿದೆ.

ಗ್ರಾಮೀಣ ಭಾಗದ ಅತ್ಯಂತ ಸುಂದರ ಪೆಟ್ರೋಲ್ ಬಂಕ್
ಈಶ್ವರಮಂಗಲದ ಮೇನಾಲದಂತಹ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಂಡ ಅತ್ಯಂತ ಸುಂದರ ಪೆಟ್ರೋಲ್ ಬಂಕ್ ಇದಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್‌ನಷ್ಟೇ ಸುಸಜ್ಜಿತ ಮತ್ತು ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಈ ಪೆಟ್ರೋಲ್ ಬಂಕ್‌ನಿಂದ ಕಾಸರಗೋಡು,ಕರ್ನಾಟಕ ಗಡಿ ಭಾಗದ ಜನರಿಗೆ ಇದರಿಂದ ಹೆಚ್ಚು ಪ್ರಯೋಜನ ಸಿಗಲಿದೆ.ಮುಖ್ಯವಾಗಿ ಈಶ್ವರಮಂಗಲದಿಂದ ಹಿಡಿದು ಆಡೂರು, ಕುಂಟಾರು, ಗಾಳಿಮುಖ, ಪಳ್ಳತ್ತೂರು, ಮುಳ್ಳೇರಿಯಾ, ಕೊಟ್ಯಾಡಿ, ದೇಲಂಪಾಡಿ ಇತ್ಯಾದಿ ಭಾಗದ ವಾಹನ ಸವಾರರಿಗೆ ಅನುಕೂಲವಾಗಲಿದೆ. ಧಾರ್ಮಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಎಸ್.ಬಿ.ಜಯರಾಮ ರೈ ಬಳಜ್ಜ ಮತ್ತು ಇವರ ಪುತ್ರ ಯುವ ಉದ್ಯಮಿ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಸಹಜ್ ಜೆ.ರೈ ಬಳಜ್ಜರವರ ಮಾಲಕತ್ವದಲ್ಲಿ ಈ ಪೆಟ್ರೋಲ್ ಬಂಕ್ ನಿರ್ಮಾಣಗೊಂಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.