HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮಳೆಗಾಲ, ಕೊರೋನಾದ ಹೆಚ್ಚುವರಿ ಸವಾಲಿನ ಮಧ್ಯೆ ನೂರಕ್ಕೆ ನೂರು ಉತ್ತೀರ್ಣ | ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಮಠಂದೂರು

Puttur_Advt_NewsUnder_1
Puttur_Advt_NewsUnder_1

 

  • ಪರೀಕ್ಷಾ ಕೇಂದ್ರಗಳಲ್ಲಿ ಜನರೇಟರ್, ಸಿಸಿ.ಕ್ಯಾಮರ
  • ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ
  • ಬಡತನದ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ
  • ಹೊರ ಜಿಲ್ಲೆಯ 37 ವಿದ್ಯಾರ್ಥಿಗಳು ಪುತ್ತೂರಿಗೆ
  • 252 ವಿದ್ಯಾರ್ಥಿಗಳಿಗೆ ಹೊರ ಜಿಲ್ಲೆಯಲ್ಲಿ ಪರೀಕ್ಷೆ
  • ಗಡಿ ಭಾಗದಿಂದ 70 ವಿದ್ಯಾರ್ಥಿಗಳು

ಪುತ್ತೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ವಿದ್ಯಾರ್ಥಿಗಳು ಉತ್ತೀರ್ಣ ಆಗಬೇಕೆಂಬ ಗುರಿ ಈ ಹಿಂದೆಯೇ ನಮ್ಮ ನಿರ್ಧಾರ ಆಗಿತ್ತು. ಈ ನೂರಕ್ಕೆ ನೂರು ಮಕ್ಕಳು ಕೋವಿಡ್ -೧೯ ನಿಂದಾಗಿ ಮನೆಯಲ್ಲೇ ಇದ್ದು ಹೋಮ್‌ವರ್ಕ್ ಮಾಡಿದ್ದಾರೆ. ಹಾಗಾಗಿ ಮಳೆಗಾಲ ಮತ್ತು ಕೊರೋನಾದ ಹೆಚ್ಚುವರಿ ಸವಾಲಿನ ಮಧ್ಯೆಯೂ ವಿದ್ಯಾರ್ಥಿಗಳು ನೂರಕ್ಕೆ ನೂರು ಉತ್ತೀರ್ಣ ಆಗಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಜೂ.25ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಅವಿಭಜಿತ ಪುತ್ತೂರು ಕಡಬ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ೫೦೦೭ ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿಗಳ ವ್ಯವಸ್ಥೆ, ಕೊರೋನಾ, ಡೆಂಗ್ಯೂ, ಸಾಂಕ್ರಾಮಿಕ ರೋಗಳ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪರೀಕ್ಷಾ ಕೇಂದ್ರದ ವಲಯದಲ್ಲಿ ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ಮಾಡುವ ಕುರಿತು ಜೂ. ೧೫ರಂದು ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಮನೆಯಲ್ಲೇ ಇರುವ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕೋಚಿಂಗ್ ಕೊಡುವ ಕೆಲಸ ಕೆಲವು ಕಡೆಯಲ್ಲಿ ನಡೆದಿದೆ. ಅದಕ್ಕಾಗಿ ೧೦ ದಿನದ ಹಿಂದೆ ಎಲ್ಲಾ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಭೆ ಕರೆದು ಚರ್ಚಿಸಿದ್ದೆವು. ತರಗತಿ ಮಾಡಲು, ವಿಶೇಷ ತರಗತಿ ಮಾಡಲು ಅವಕಾಶವಿಲ್ಲದಿದ್ದರೂ ಎಲ್ಲಾ ಮಕ್ಕಳು ಮನೆಯಲ್ಲೇ ಕೂತು ಪರೀಕ್ಷಾ ತಯಾರಿ ಅಭ್ಯಾಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನೂರಕ್ಕೆ ನೂರು ಫಲಿತಾಂಶ ಬರುವ ನಂಬಿಕೆ ಇದೆ ಎಂದ ಅವರು ಪರೀಕ್ಷೆಗಳು ಹೆಚ್ಚಾಗಿ ಬೇಸಿಗೆಯಲ್ಲೇ ನಡೆಯುತ್ತದೆ. ಆದರೆ ಈ ಭಾರಿ ಕೋವಿಡ್‌ನಿಂದಾಗಿ ಮಳೆಗಾಲದಲ್ಲಿ ಪರೀಕ್ಷೆ ನಡೆಯುತ್ತದೆ. ಮಳೆಗಾಲದಲ್ಲಿ ಏನೆನು ಸುರಕ್ಷತೆ ಮಾಡಬೇಕು. ಅದಕ್ಕೆ ಗಮನ ಕೊಡಬೇಕು. ಆಗಾಗ ವಿದ್ಯುತ್ ಹೋಗುವ ಸಾಧ್ಯತೆ ಇದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದರೂ ಮಿಂಚು, ಗುಡುಗುಗಳು ಬಂದಾಗ ಮೆಸ್ಕಾಂ ಅವರ ಕೈಯಲ್ಲೂ ವಿದ್ಯುತ್ ಇರುವುದಿಲ್ಲ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಜನರೇಟರ್ ವ್ಯವಸ್ಥೆ ಮಾಡಬೇಕು. ಒಂದಷ್ಟು ಮಾಸ್ಕ್ ಪರೀಕ್ಷಾ ಕೇಂದ್ರದಲ್ಲಿ ಇಡಬೇಕು. ಮಾಸ್ಕ್ ಧರಿಸದೇ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ಕುರಿತು ಸೂಚಿಸಲಾಗಿದೆ. ತಾಲೂಕಿನ ಗಡಿ ಭಾಗದ ಮಕ್ಕಳು ಸಮಯಕ್ಕೆ ಸರಿಯಾಗಿ ಬರುವಂತೆ ಆಯಾ ಶಾಲೆಯ ಶಿಕ್ಷಕರು ಜವಾಬ್ದಾರಿ ವಹಿಸಬೇಕು. ಎಲ್ಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕು. ಕೋವಿಡ್ -೧೯ ನಡುವೆ ಪರೀಕ್ಷೆ ಮಕ್ಕಳಿಗಿಂತ ಪೋಷಕರಿಗೆ ಆತಂಕವಿದೆ. ಹಾಗಾಗಿ ಪೋಷಕರು ಮಕ್ಕಳ ಜೊತೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬರುವ ಸಾಧ್ಯತೆ ಇದೆ. ಈ ಸಂದರ್ಭ ಪರೀಕ್ಷಾ ಕೇಂದ್ರದ ಸುತ್ತಮುತ್ತ ಜನಜಂಗುಳಿ ಆದರೆ ಕಷ್ಟ. ಹಾಗಾಗಿ ಪೊಲೀಸ್ ಇಲಾಖೆ ಗಮನಿಸಬೇಕು. ಪರೀಕ್ಷಾ ಕೊಠಡಿಯ ಕಟ್ಟಡದ ಸುರಕ್ಷತೆ ಕುರಿತು ಗಮನಿಸಿ, ಪರಿಸರದಲ್ಲಿ ಸಾಂಕ್ರಾಮಿಕದ ರೋಗದ ಲಕ್ಷಣ ಇದ್ದರೆ ಪರಿಶೀಲಿಸಬೇಕು. ಡೆಂಗ್ಯೂ ಮಲೇರಿಯ ಸಾಂಕ್ರಾಮಿಕ ರೋಗಗಳಿದ್ದರೆ ಆರೋಗ್ಯ ಇಲಾಖೆಯ ಮೂಲಕ ಪಾಗಿಂಗ್ ವ್ಯವಸ್ಥೆ ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರದಲ್ಲಿ ಜನಜಂಗುಳಿ ಬೇಡ:
ಕೋವಿಡ್-೧೯ನಿಂದಾಗಿ ಮಕ್ಕಳಿಗೆ ಮತ್ತು ಮಕ್ಕಳಿಗಿಂತ ಹೆತ್ತವರಿಗೆ ಭಯದ ವಾತಾವರಣ ಇದೆ. ಈ ದೃಷ್ಟಿಯಿಂದ ಹೆತ್ತವರೇ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದು ಕೊಂಡು ಬರುತ್ತಾರೆ. ಈ ಸಂದರ್ಭದಲ್ಲೂ ನಾವು ಎಚ್ಚರಿಕೆಯಿಂದ ಇರಬೇಕು. ಪರೀಕ್ಷಾ ಕೇಂದ್ರದಲ್ಲಿ ಜನಜಂಗುಳಿ ಆಗದಂತೆ ನೋಡಬೇಕು. ಪೊಷಕರು ವಾಹನ ಮಾಡಿ ಬಂದಿದ್ದರೆ ಅವರ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಈ ಭಾರಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಮೂಲಭೂತ ಸೌಲಭ್ಯ ಗಮನಿಸಿ:
ಕೋವಿಡ್ -೧೯ಗೆ ಸರಕಾರ ಏನು ಸುರಕ್ಷತೆ ದೃಷ್ಟಿಯಿಂದ ಮಾರ್ಗದರ್ಶನ ಮಾಡಿದೆಯೋ ಅದೇ ರೀತಿ ಯಾವೆಲ್ಲಾ ಸುರಕ್ಷಾತ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದೆ ಏನೆಲ್ಲಾ ಆಗಬೇಕೆಂಬ ಕುರಿತು ಪಟ್ಟಿ ಮಾಡಿ ಕೊಡಿ ಎಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಮುನ್ನೆಚ್ಚರಿಕೆ ಕ್ರಮ:
ಕೋವಿಡ್ -೧೯ ಹಿನ್ನೆಲೆಯಲ್ಲಿ ಆರಂಭದಲ್ಲೇ ಪರೀಕ್ಷಾ ಕೊಠಡಿಯನ್ನು ಸ್ಯಾನಿಟೈಸನ್ ಮಾಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ತರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕೆಲಸ ಕಾರ್ಯಗಳಿಗೆ ಬೇಕಾಗುವಂತೆ ಪರೀಕ್ಷಾ ಕೇಂದ್ರದ ಪಕ್ಕದ ಶಾಲೆಯಲ್ಲಿ ೧೦ ಶಿಕ್ಷಕರು ರಿಸರ್ವ್ ಆಗಿ ಇರುತ್ತಾರೆ. ಈಗಾಗಲೇ ಮಕ್ಕಳಿಗೆ ಮಾಸ್ಕ್ ಕೊಡುವ ಕುರಿತು ಸುಮಾರು ೪ ಸಾವಿರ ಮಾಸ್ಕ್‌ಗಳನ್ನು ಸೇವಾ ಸಂಸ್ಥೆಯವರು ಪ್ರಾಯೋಜಿಸಿದ್ದಾರೆ. ಜೊತೆಗೆ ಎಲ್ಲಾ ಕೊಠಡಿಗಳಿಗೂ ಜನರೇಟರ್, ಸಿ.ಸಿ.ಕ್ಯಾಮರ ಅವಳವಡಿ ಮಾಡಲಾಗಿದೆ. ಕುಂಬ್ರದ ಶಾಲೆಯಲ್ಲಿ ಶೌಚಲಾಯದ ಕೊರತೆ ಇದ್ದು, ಈ ಕುರಿತು ದುರಸ್ಥಿ ಆಗಬೇಕಾಗಿದೆ ಎಂದು ಬಿ.ಇ.ಒ ಸಿ.ಲೋಕೇಶ್ ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಹೊರ ಜಿಲ್ಲೆಯ ೩೭ ವಿದ್ಯಾರ್ಥಿಗಳು ಪುತ್ತೂರಿಗೆ:
ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊರ ಜಿಲ್ಲೆಯ ತಾಲೂಕಿನ ವಿದ್ಯಾರ್ಥಿಗಳೂ ಇದ್ದಾರೆ. ಈ ಪೈಕಿ ಹೊರ ಜಿಲ್ಲೆಯ ತಾಲೂಕಿನಲ್ಲಿದ್ದ ೩೭ ಮಂದಿ ಪುತ್ತೂರಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪುತ್ತೂರಿನಲ್ಲಿ ಕಲಿಯುತ್ತಿದ್ದ ೨೫೨ ಮಂದಿ ವಿದ್ಯಾರ್ಥಿಗಳು ಹೊರ ಜಿಲ್ಲೆಯ ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಆ ವಿದ್ಯಾರ್ಥಿಗಳಿಗೆ ಈಗಾಗಲೇ ನಮ್ಮ ಮತ್ತು ಅಲ್ಲಿನ ಕ್ಷೇತ್ರ ಶಿಕ್ಷಣಧಿಕಾರಿಗಳ ಜೊತೆ ಕಮ್ಯುನಿಕೇಶನ್ ಮಾಡಲಾಗಿದ್ದು, ಅವರಿಗೆ ಹಾಲ್‌ಟಿಕೇಟ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿ.ಇ.ಒ ಸಿ.ಲೋಕೇಶ್ ಹೇಳಿದರು.

೨ ಹೆಚ್ಚುವರಿ ಸೆಂಟರ್:
ಕಂಟೈನ್ಮೆಂಟ್ ಝೋನ್‌ನಿಂದ ಬಂದವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಸೆಂಟರ್‌ನಲ್ಲೂ ವಿಶ್ರಾಂತಿ ಕೊಠಡಿ ಮಾಡಲಾಗಿದೆ. ಸೋಂಕಿತ ಪ್ರದೇಶದಿಂದ ಬಂದವರನ್ನು ವಿಶೇಷ ಕೊಠಡಿಯಲ್ಲಿ ಒಂದು ಬೆಂಚ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಎರಡು ಹೆಚ್ಚುವರಿ ಸೆಂಟರ್ ಆಗಿ ನೆಹರುನಗರ ಸುದಾನ ವಸತಿಯುತ ಶಾಲೆ ಮತ್ತು ತೆಂಕಿಲ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಕೊಠಡಿಯನ್ನು ಪಟ್ಟಿ ಮಾಡಿದ್ದೇವೆ ಬಿ.ಇ.ಒ ಲೋಕೇಶ್ ಹೇಳಿದರಲ್ಲದೆ ಜುಲೈನಲ್ಲಿ ಸಪ್ಲಿಮೆಂಟರಿ ಪರೀಕ್ಷೆಯಲ್ಲೂ ಕಂಟೈನ್ಮೆಂಟ್ ಝೋನ್‌ನಲ್ಲಿ ಬರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದರು.

ಗಡಿ ಭಾಗದಿಂದ ೭೦ ವಿದ್ಯಾರ್ಥಿಗಳು:
ಕೇರಳ ಗಡಿ ಭಾಗದ ೪ ಕಡೆಗಳಿಂದ ೭೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅವರಿಗೆ ಪ್ರತ್ಯೇಕ ಬಸ್, ವಾಹನದ ವ್ಯವಸ್ಥೆಯನ್ನು ಆಯಾ ಶಾಲೆಯ ಕಡೆಯಿಂದ ಮಾಡಲಾಗಿದೆ. ಗಡಿ ಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ನಮ್ಮ ಕಡೆಯಿಂದ ಒರ್ವ ಶಿಕ್ಷಕರನ್ನು ಅಲ್ಲಿ ನಿಯೋಜಿಸಲಾಗಿದೆ. ಒಟ್ಟು ಅಲ್ಲಿ ೧೧ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿರುವುದರಿಂದ ೧೧ ಶಿಕ್ಷಕರನ್ನು ಅಲ್ಲಿ ನಿಯೋಜಿಸಲಾಗಿದೆ. ವೇದಿಕೆಯಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ತಾಲೂಕು ನೊಡೇಲ್ ಅಧಿಕಾರಿ ಜಯರಾಮ ಶೆಟ್ಡಿ, ಪ್ರೌಢ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕರಾದ ಸುರೇಖ, ಸೌಮ್ಯ, ತಾಲೂಕು ಆರೋಗ್ಯ ಕೇಂದ್ರದ ಲೀಲಾವತಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಉಪಸ್ಥಿತರಿದ್ದರು.

೫೦೦೭ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿ ಶೈಕ್ಷಣಿಕ ವರ್ಷದಲ್ಲಿ ನಾಲ್ಕೈದು ಬಾರಿ ಮುಖ್ಯ ಶಿಕ್ಷಕರ ಸಭೆ, ಪೋಷಕರ ಜೊತೆ ಚರ್ಚೆ, ಪರೀಕ್ಷಾ ಸಿದ್ಧತೆ ಬಗ್ಗೆಯೂ ಸಭೆ ನಡೆದಿದೆ. ಪುತ್ತೂರು ಕಡಬ ಸೇರಿದಂತೆ ಒಟ್ಟು ೫೦೦೭ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಕೊಠಡಿಯಲ್ಲಿ ೨೦ ಮಕ್ಕಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಮಾಡಿ ಕೊಡುವುದರಿಂದ ೧೨ ಪರೀಕ್ಷಾ ಕೇಂದ್ರ ಮತ್ತು ಒಂದು ಉಪಕೇಂದ್ರವಿದೆ. ೨೫೩ ಕೊಠಡಿಗಳನ್ನು ಸಿದ್ದಪಡಿಸಲಾಗಿದೆ. ಸೆಂಟ್ರಲ್ ಚೀಫ್ ೧೨+೧, ಪ್ರಶ್ನೆ ಪತ್ರಿಕೆ ಮೊಬೈಲ್ ಸ್ಕ್ವಾಡ್‌ಗೆ ೧೩ ಮಂದಿ, ರೂಟ್ ಆಫಿಸರ್ ಆಗಿ ೫ ಮಂದಿ, ನೊಡೆಲ್ ಅಧಿಕಾರಿ ಒಬ್ಬರು ಕರ್ತವ್ಯ ನಿರ್ವಹಿಸಲಿದ್ದು, ವಿದ್ಯಾರ್ಥಿಗಳಿಗೆ ಸಹಾಯವಾಣಿಯಾಗಿ ಕಚೇರಿ ದೂರವಾಣಿ ಮತ್ತು ಮೊಬೈಲ್ ನಂಬರ್ ಕೊಡಲಾಗಿದೆ ಮತ್ತು ಯಾವುದೇ ಮಗು ಪರೀಕ್ಷೆ ವಂಚಿತನಾಗಬಾರದು. ಹಾಗಾಗಿ ಪ್ರತಿ ಮಗುವಿನ ಪೋಷಕರಿಗೆ ಪೋನ್ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.