HomePage_Banner
HomePage_Banner
HomePage_Banner

ಮೈತ್ರಿ ಇಲೆಕ್ಟ್ರಿಕ್ ಕಂಪೆನಿ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ವರ್ಷಗಳಿಂದ ಪ್ರಧಾನ ಅಂಚೆಕಚೇರಿಯ ಬಳಿಯ ಎಸ್.ಎಮ್. ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯು ಪಕ್ಕದಲ್ಲೇ ನಿರ್ಮಿಸಿರುವ ತನ್ನ ಸ್ವಂತ ನೂತನ ಕಟ್ಟಡ ಸುಶಾ ಛೇಂಬರ್‍ಸ್‌ಗೆ ಸ್ಥಳಾಂತರಗೊಂಡು ಜೂ.15ರಂದು ಶುಭಾರಂಭಗೊಂಡಿತು.
ಬೆಳಗ್ಗೆ ಗಣಪತಿ ಹೋಮ ಹಾಗೂ ಶ್ರೀ ಮಹಾಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭಗೊಂಡ ಸಂಸ್ಥೆಯನ್ನು ಸಂಸ್ಥೆಯಲ್ಲಿ ಮಾಲಕರಾದ ರವಿನಾರಾಯಣ ಯಂ. ಹಾಗೂ ಪತ್ನಿ ಶರಾವತಿ ರವಿನಾರಾಯಣ ದೀಪ ಬೆಳಗಿಸಿದರು. ಹಿರಿಯರಾದ ಗಣೇಶ್ ಭಟ್ ಹಾಗೂ ಸುಶೀಲಾ ಭಟ್, ಶಾಸಕ ಸಂಜೀವ ಮಠಂದೂರು, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ, ಸತ್ಯಶಂಕರ, ಶಿವರಾಮ್, ಶಿವರಾಮ ಭಟ್ ಭೀರ್ನಕಜೆ, ಸತ್ಯನಾರಾಯಣ ಕೋಟೆ, ಮೋಹನ್ ರೈ ಸವಣೂರು, ಸ್ಮಾರ್ಟ್ ಸೊಲ್ಯೂಷನ್‌ನ ಪ್ರಶಾಂತ್ ಭಟ್, ಅಕ್ಷಯ ಕಂಪ್ಯೂಟರ್‍ಸ್‌ನ ಕೃಷ್ಣಪ್ರಸಾದ್, ಕಟ್ಟಡ ಇಂಜಿನಿಯರ್ ವಿಜಯ ಪಾಲಾರ್, ಹೆವೆಲ್ಸ್ ಕಂಪೆನಿಯ ಬಶೀರ್, ರಫೀಕ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

1997 ರಲ್ಲಿ ಆರಂಭಗೊಂಡ ಮೈತ್ರಿ ಇಲೆಕ್ಟ್ರಿಕ್ ಕಂಪೆನಿ ಬ್ರಾಂಡೆಡ್ ಕಂಪೆನಿಗಳ ವಿದ್ಯುತ್ ಉಪಕರಣಗಳು, ಪಂಪ್‌ಸೆಟ್ ಹಾಗೂ ಬಿಡಿ ಭಾಗಗಳಾದ ಹೋಲ್‌ಸೇಲ್ ಮತ್ತು ರಿಟೈಲ್ ಮಾರಟಗಾರರಾಗಿ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಸಂಸ್ಥೆಯಲ್ಲಿ ಮೈತ್ರಿ ಇಲೆಕ್ಟ್ರಿಕ್ ಕಂಪನಿ ಲುಬಿ, ವಿ-ಗಾರ್ಡ್, ಪೋಲೆಂಡ್ ಪಂಪ್ , ಹಾವೆಲ್ಸ್, ಜಿಎಂ, ಫಿನೊಲೆಕ್ಸ್, ಮಿಲ್ ಬೊರ್ನ್, ರೆಮಿ, ಎಲ್ ಟಿ, ಗ್ರೇಟ್ ವೈಟ್, ಜಾನ್ಸನ್, ಆಶೀರ್ವಾದ್, ಕ್ರಾಂಪ್ಟನ್, ಲೆಗ್ರಾಂಡ್ ಮೊದಲಾದ ಬ್ರಾಂಡೆಡ್ ಕಂಪನಿಗಳ ಅಧಿಕೃತ ಮಾರಟಗಾರರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.