HomePage_Banner
HomePage_Banner
HomePage_Banner
HomePage_Banner

ಯಲಹಂಕದ ಮೋಹನ್ ಕುಮಾರ್ ಮಾಣಿಯಲ್ಲಿ ಆತ್ಮಹತ್ಯೆ | ಮೃತದೇಹದ ಗುರುತು ಪತ್ತೆ ಮಾಡಿದ ಸಂಬಂಧಿಕರು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಳಿಕೆ ಎಂಬಲ್ಲಿನ ಮರದ ಬುಡದಲ್ಲಿ ಜೂ.೧೩ರಂದು ತಾನು ಧರಿಸಿದ್ದ ಪ್ಯಾಂಟ್ ನಿಂದ ನೇಣುಬಿಗಿದು ಆತ್ಮಹತ್ಯೆ ಗೈದಿದ್ದ ವ್ಯಕ್ತಿಯ ಗುರುತು ದಿನಗಳ ಬಳಿಕ ಪತ್ತೆಯಾಗಿದೆ. ಬೆಂಗಳೂರಿನ ಯಲಹಂಕ ನಿವಾಸಿ ಈಶ್ವರ ಅವರ ಪುತ್ರ ಮೋಹನ್ ಕುಮಾರ್ ಎಂಬವರು ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಜೂ.೧೩ರಂದು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಳಿಕೆ ಎಂಬಲ್ಲಿನ ಮರದಲ್ಲಿ ವ್ಯಕ್ತಿಯೋರ್ವರು ತಾನು ಧರಿಸಿದ್ದ ಪ್ಯಾಂಟಿನಿಂದಲೇ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಸ್ಥಳಕ್ಕೆ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತಾದರೂ ಮೃತನ ಹೆಸರು ಹಾಗೂ ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಘಟನೆಗೆ ಸಂಬಂದಿಸಿದಂತೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಪಳಿಕೆ ದಿ.ಮೊಹಮ್ಮದ್ ರವರ ಪುತ್ರ ಮಹಮ್ಮದ್ ಇಸ್ಮಾಯಿಲ್ ಸಲೀಂರವರು ನೀಡಿದ ಮಾಹಿತಿಯಂತೆ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ, ಆತ್ಮಹತ್ಯೆ ಗೈದಿರುವ ವ್ಯಕ್ತಿಯ ಗುರುತು ಪತ್ತೆಗಾಗಿ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದರು. ಇದೀಗ ದಿನಗಳ ಬಳಿಕ ವಿಟ್ಲ ಠಾಣಾ ಪೊಲೀಸರು ಮೃತವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದ್ದ ಮೃತದೇಹದ ಗುರುತು ಪತ್ತೆ ಮಾಡಿರುವ ಮೃತ ವ್ಯಕ್ತಿಯ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ಕ್ಲೂ ನೀಡಿದ್ದ ಮೊಬೈಲ್ ನಂಬರ್: ಮಾಣಿ ಸಮೀಪ ಪಳಿಕೆ ಎಂಬಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗುತ್ತಿದ್ದಂತೆ ಮಾಹಿತಿ ತಿಳಿದ ವಿಟ್ಲ ಠಾಣಾ ಪೊಲೀಸರು ಕೆಲವೊಂದು ಮಾಹಿತಿಯನ್ನು ಪ್ರಾಥಮಿಕ ಹಂತದಲ್ಲಿ ಕಲೆಹಾಕಿಕೊಂಡಿದ್ದರು. ಆದರೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಇದೊಂದು ಸವಾಲಾಗಿತ್ತು. ಈ ಮಧ್ಯೆ ವ್ಯಕ್ತಿಯೋರ್ವರು ನೀಡಿದ ಮಾಹಿತಿ ಹಾಗೂ ದೂರವಾಣಿ ಸಂಖ್ಯೆಯ ಜಾಡುಹಿಡಿದ ಪೊಲೀಸರಿಗೆ ಮೃತ ವ್ಯಕ್ತಿ ಬೆಂಗಳೂರು ನಿವಾಸಿ ಎಂಬುದು ತಿಳಿಯಿತು. ಬಳಿಕ ಆ ದಿಶೆಯಲ್ಲಿ ತನಿಖೆ ಆರಂಭಿಸಿದ ವಿಟ್ಲ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಅಲ್ಲಿನ ಪೊಲೀಸರ ಸಹಕಾರದೊಂದಿಗೆ, ಯಲಹಂಕದಲ್ಲಿ ಮೃತ ವ್ಯಕ್ತಿಯ ಸಂಬಂಧಿಕರಿರುವ ಬಗ್ಗೆ ತಿಳಿದು ಅಲ್ಲಿ ಹುಡುಕಾಟ ನಡೆಸಿ ಕೊನೆಗೂ ಮೃತ ವ್ಯಕ್ತಿಯ ಸಂಬಂಧಿಕರನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಅಪರಿಚಿತ ವ್ಯಕ್ತಿಯದ್ದು ಕೊಲೆಯೆಂದು ವದಂತಿ ಹಬ್ಬಿತ್ತು: ಮಾಣಿ ಸಮೀಪ ಪಳಿಕೆ ಎಂಬಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗುತ್ತಿದ್ದಂತೆ, ಮೃತದೇಹದ ಭಾವಚಿತ್ರದ ಜೊತೆಗೆ ಮಾಣಿ ಸಮೀಪದ ಪಳಿಕೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ… ಕೊಲೆ ಶಂಕೆ… ಎಂಬ ಒಕ್ಕಣೆಯನ್ನು ನೀಡಿದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾತ್ರ ಇದೊಂದು ಆತ್ಮಹತ್ಯೆಯಾಗಿದೆ ಎನ್ನುವುದನ್ನು ತಮ್ಮ ಪ್ರಾಥಮಿಕ ತನಿಖೆಯಲ್ಲೇ ದೃಢಪಡಿಸಿದ್ದರು.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಆತ್ಮಹತ್ಯೆ ಮಾಡಿಕೊಂಡ ದೃಶ್ಯ: ಜೂ.೧೩ರಂದು ಮುಂಜಾನೆ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಪಳಿಕೆ ನಿವಾಸಿ ಮಹಮ್ಮದ್ ಇಸ್ಮಾಯಿಲ್ ಸಲೀಂರವರು ಅವರ ಮನೆಯ ಮುಂಭಾಗದಲ್ಲಿರುವ ಸರ್ವೀಸ್ ಸ್ಟೇಷನ್ ನ ಪಕ್ಕದ ಮಾವಿನ ಮರದ ಕೆಳಗೆ ಸುಮಾರು ೩೫ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಕಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ಮಹಮ್ಮದ್ ಇಸ್ಮಾಯಿಲ್ ಸಲೀಂರವರು ತನ್ನ ಮನೆಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿ ನಡೆದುಕೊಂಡು ಬಂದು ತಾನು ದರಿಸಿದ್ದ ಪ್ಯಾಂಟನ್ನು ತೆಗೆದು ಮರದ ರೆಂಬೆಗೆ ಅದೇ ಪ್ಯಾಂಟನ್ನು ಕಟ್ಟಿ ಆತ್ಮಹತ್ಯೆ ಮಾಡುತ್ತಿರುವುದು ಹಾಗೂ ತಾಸುಗಳ ಬಳಿಕ ಆ ವ್ಯಕ್ತಿಯ ಮೃತದೇಹ ಮರದಿಂದ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಕಂಡು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.