ಪುತ್ತೂರು ಹೃದಯ ಭಾಗದ ರಿಕ್ಷಾ ಪಾರ್ಕ್‌ನಲ್ಲಿ ಗಿಡಗಂಟಿಗಳ ಪೊದೆ | ಕೊರೋನಾ ನಡುವೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ರಿಕ್ಷಾ ಚಾಲಕರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾದಿಂದಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೂ ಹಸಿವೆಯ ದಾಹ ತೀರಿಸಲು ಬಾಡಿಗೆಗಾಗಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿಯಲ್ಲಿರುವ ಆಟೋ ರಿಕ್ಷಾ ಚಾಲಕರಿಗೆ ರಿಕ್ಷಾ ಪಾರ್ಕ್ ಸ್ಥಳದಲ್ಲಿ ತುಂಬಿದ ಗಿಡಗಂಟಿಗಳ ಪೊದೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಪುತ್ತೂರಿನ ಹೃದಯ ಭಾಗದಲ್ಲೇ ಬೆಳಕಿಗೆ ಬಂದಿದೆ.
ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಸ್ನೇಹಸಂಗಮ ರಿಕ್ಷಾ ಪಾರ್ಕ್ ಗಿಡಗಂಟಿಗಳ ಪೊದೆ ತುಂಬಿ ಹೋಗಿದೆ. ಸೊಳ್ಳೆಗಳ ಕಾಟ ಹೇಳತೀರದು. ಪ್ರತಿ ನಿತ್ಯ ನಿಮಿಷಕ್ಕೊಮ್ಮೆ ರಿಕ್ಷಾಗಳ ಓಡಾಟ ಕಾಣುತ್ತಿರುವ ಬಸ್ ನಿಲ್ದಾಣ ಇತ್ತೀಚೆಗೆ ವಿರಳಗೊಂಡಿದೆ. ಕಾರಣ ಬಸ್‌ನಲ್ಲಿ ಬರುವ ಪ್ರಯಾಣಿಕರು ಕಡಿಮೆ. ಅವರು ಹಾಗಾಗಿ ರಿಕ್ಷಾಗಳಿಗೂ ಬಾಡಿಕೆ ಕಡಿಮೆ ಆಗಿದೆ. ಮತ್ತೊಂದೆಡೆ ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರು, ಪ್ರಯಾಣಿಕರ ಓಡಾಟ, ವ್ಯವಹಾರಕ್ಕೆ ಅವಕಾಶವಿದ್ದರೂ ಬಹುತೇಕ ಮಂದಿ ಕೊರೋನಾ ಭಯದಿಂದ ಇನ್ನೂ ಕೂಡಾ ಮನೆಯಿಂದ ಹೊರಗೆ ಬಂದಿಲ್ಲ.

ಇದರಿಂದಾಗಿ ಪುತ್ತೂರು ಪೇಟೆಯಲ್ಲಿ ಆಟೋ ರಿಕ್ಷಾದಲ್ಲಿ ಹೋಗುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಹೀಗಿರುವಾಗ ರಿಕ್ಷಾ ತಂಗುದಾಣದಲ್ಲಿ ಇರುವ ಆಟೋ ರಿಕ್ಷಾಗಳು ಒಂದೊಂದು ಬಾಡಿಗೆಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಆದರೆ ಗಂಟೆಗಟ್ಟಲೆ ಚಾಲಕರು ರಿಕ್ಷಾದಲ್ಲಿ ಕೂತು ಪ್ರಯಾಣಿಕರ ಬರುವಿಕೆಗಾಗಿ ಕಾಯುವ ಸಂದರ್ಭದಲ್ಲಿ ಸೊಳ್ಳೆಗಳ ಕಾಟದಿಂದ ಎಲ್ಲಿ ಸಾಂಕ್ರಾಮಿಕ ರೋಗಕ್ಕೆ ತಾನು ಬಲಿಯಾಗುವೆನೋ ಎಂಬ ಭಯ ಉಂಟಾಗಿದೆ. ಯಾಕೆಂದರೆ ಸ್ನೇಹಸಂಗಮ ರಿಕ್ಷಾ ಪಾರ್ಕ್ ಉದ್ದಕ್ಕೂ ಗಿಡಗಂಟಿಗಳು ಪೊದೆಗಳಿಂದ ತುಂಬಿ ಕೊಂಡಿದೆ. ಪೊದೆಗಳಿಂದ ಸೊಳ್ಳೆಗಳ ಕಾಟ. ನಡುವೆ ವಿಷಜಂತುಗಳು ಇಲ್ಲಿ ಸೇರಿಕೊಂಡಿವೆ. ಈ ಕುರಿತು ನಗರಸಭೆಗೆ ಹಲವು ಭಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಇಲ್ಲಿನ ಆಟೋ ರಿಕ್ಷಾ ಚಾಲಕರ ಆರೋಪ.

ಸಾಂಕ್ರಾಮಿಕ ರೋಗದ ಭಯದ ವಾತಾವರಣದಲ್ಲಿ ನಮ್ಮ ಜೀವನ
ಕೊರೋನಾ ಬಳಿಕ ಇದೀಗ ನಮಗೆ ಬಾಡಿಗೆಯೂ ಇಲ್ಲ. ಈ ನಡುವೆ ಪಾರ್ಕ್‌ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಡುವೆ ವಿಷ ಜಂತುಗಳೂ ಸೇರಿಕೊಂಡಿದೆ. ಪೊದೆಗಳನ್ನು ತೆರವು ಮಾಡಲು ಹಲವು ಬಾರಿ ನಗರಸಭೆಗೆ ಮನವಿ ಮಾಡಿದ್ದೇವೆ. ಯಾವುದೇ ಸ್ಪಂಧನೆ ಇಲ್ಲ. ಕಳೆದ ಬಾರಿಯೂ ಹಲವು ಇದೇ ರೀತಿ ಸಮಸ್ಯೆ ಉಂಟಾಗಿತ್ತು. ಮೊದಲೇ ಬಾಡಿಗೆ ಇಲ್ಲ. ಮುಂದೆ ಸಾಂಕ್ರಾಮಿಕ ರೋಗ ಎಲ್ಲಿ ನಮ್ಮನ್ನು ಕಾಡುತ್ತದೆಯೋ ಎಂಬ ಭಯದ ವಾತಾವರಣದಲ್ಲಿ ನಾವು ಜೀವನ ನಡೆಸುತ್ತಿದ್ದೇವೆ – ಸಿಲ್ವರ್ ಸ್ಟಾರ್, ಡಿಸೋಜ ಅಧ್ಯಕ್ಷರು  ಸ್ನೆಹಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಪುತ್ತೂರು

ತಕ್ಷಣ ಪೊದೆ ತೆರವಿಗೆ ಸೂಚನೆ
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಿಯೂ ತ್ಯಾಜ್ಯ, ಕಸಗಳು, ಪೊದೆಗಳು ಇಲ್ಲದಂತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಸ್‌ನಿಲ್ದಾಣದ ಬಳಿ ರಿಕ್ಷಾ ಪಾರ್ಕ್‌ನಲ್ಲಿ ಗಿಡಗಂಟಿಗಳ ಪೊದೆ ಕುರಿತು ತಕ್ಷಣ ಪೊದೆ ತೆರವಿಗೆ ಸ್ವಚ್ಛತಾ ಸಿಬಂದಿಗಳಿಗೆ ಸೂಚನೆ ನೀಡುತ್ತೇನೆ – ರೂಪಾ ಶೆಟ್ಟಿ, ಪೌರಾಯುಕ್ತರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.