ಕೊರೋನಾಘಾತ: ದ.ಕ. ಜಿಲ್ಲೆಯಲ್ಲಿ ಒಂದೇ ದಿನ 79 ಮಂದಿಗೆ ಸೋಂಕು ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾರಕ ಕೊರೋನಾ ವೈರಸ್ ಅಕ್ಷರಶ: ಜಿಲ್ಲೆಗೆ ಆಘಾತ ನೀಡಿದ್ದು ಜೂ.16ರಂದು ಒಂದೇ ದಿನ ದ.ಕ. ಜಿಲ್ಲೆಯಲ್ಲಿ 79 ಮಂದಿಗೆ ಸೋಂಕು ಪತ್ತೆಯಾಗಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ಈ ಪೈಕಿ ಹಿರೇಬಂಡಾಡಿಯ ಓರ್ವ ಯುವಕನೂ ಸೇರಿದ್ದು ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 378ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಸೋಂಕಿತರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಪೈಕಿ 11 ಮಂದಿ ಗುಣಮುಖರಾಗಿ ಜೂ.16ರಂದು ಬಿಡುಗಡೆಗೊಂಡಿದ್ದು ಈ ತನಕ ಒಟ್ಟು 169 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 201 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೌದಿ ಕಂಟಕ:
ಜೂ.16ರಂದು ಸೋಂಕು ಪತ್ತೆಯಾದವರ ಪೈಕಿ 77 ಮಂದಿ ಸೌದಿಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರಾಗಿದ್ದು ಓರ್ವ ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರು. ಇನ್ನೋರ್ವ ಅನಾರೋಗ್ಯದಿಂದಿದ್ದು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದ ವೇಳೆ ಸೋಂಕು ಪತ್ತೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.