HomePage_Banner
HomePage_Banner
HomePage_Banner

ಬಾಳೆ, ಅನಾನಸು, ಪಪ್ಪಾಯ ಬೆಳೆಗಾರರಿಗೆ ಸರಕಾರದಿಂದ ಪರಿಹಾರಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಲಾಕ್ ಡೌನ್ ಕಾರಣಕ್ಕಾಗಿ ಸೂಕ್ತ ಸಮಯದಲ್ಲಿ ಫಸಲು ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿರುವ ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆಗಾರರಿಗೆ ಸರಕಾರ ಪರಿಹಾರಧನ ಪ್ರಕಟಿಸಿದೆ. ಪುತ್ತೂರು ತಾಲೂಕಿನಲ್ಲಿ ಬಾಳೆ, ಅನಾನಸು ಹಾಗೂ ಪಪ್ಪಾಯ ಬೆಳೆ ಬೆಳೆದ ರೈತರು ಲಾಕ್‌ಡೌನ್‌ನಿಂದಾಗಿ ಮಾ. 24 ರಿಂದ ಮೇ. 31 ರವರೆಗೆ ಕಟಾವಿಗೆ ಬಂದಿರುವ ಫಸಲುಗಳನ್ನು ಮಾರಾಟ ಮಾಡಲು ಆಗದೆ ಸಂಕಷ್ಟಕ್ಕೀಡಾಗಿರುತ್ತಾರೆ ಹಾಗೂ ಮಾರಾಟ ಮಾಡಿದ ಫಸಲಿಗೂ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿರುತ್ತಾರೆ. ಆದ ಕಾರಣ ರಾಜ್ಯ ಸರ್ಕಾರವು ಸದರಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಹೆಕ್ಟೇರಿಗೆ ಗರಿಷ್ಠ ರೂ.15000 ಗಳಂತೆ (ಪ್ರತೀ ಸೆಂಟ್‌ಸ್‌‌ಗೆ ರೂ.60/-ರಂತೆ) ಗರಿಷ್ಟ ಒಂದು ಹೆಕ್ಟೇರ್‌ವರೆಗೆ ಪರಿಹಾರ ನೀಡುವ ಕಾರ್ಯಕ್ರಮ ಜಾರಿಗೆ ತಂದಿರುತ್ತದೆ.


ಯಾರು ಅರ್ಜಿ ಸಲ್ಲಿಸಬಹುದು: ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರು, ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ದಿನಾಂಕ 24-03-2020 ರಿಂದ 31-05-2020ರಲ್ಲಿ ಕಟಾವು ಮಾಡಿರುವ ರೈತರು ಹಾಗೂ ಸದರಿ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪುತ್ತೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದು. ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ರೈತರಿಗೆ ಪರಿಹಾರಧನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ರೈತರು ಅರ್ಜಿಯೊಂದಿಗೆ ಆಧಾರ್‌ಲಿಂಕ್ ಹಾಗೂ ಘೆಇಐ ಸೀಡಿಂಗ್ ಆಗಿರುವ ಬ್ಯಾಂಕ್‌ ಖಾತೆಯ ವಿವರಗಳನ್ನು ಆಧಾರ್ ಪ್ರತಿಯೊಂದಿಗೆ ಮತ್ತು ನಿಗದಿತ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-06-2020 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ದೂರವಾಣಿ ಸಂಖ್ಯೆ 08251-230905, ಸಹಾಯಕ ತೋಟಗಾರಿಕೆ ಅಧಿಕಾರಿ, ಪುತ್ತೂರು 9164309540, ಸಹಾಯಕ ತೋಟಗಾರಿಕೆ ಅಧಿಕಾರಿ, ಉಪ್ಪಿನಂಗಡಿ ಹಾಗೂ ಕಡಬ: 9740219640 ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.