HomePage_Banner
HomePage_Banner
HomePage_Banner

ಡಿಸೈನ್ ಹೌಸ್ ಸಿವಿಲ್ ಕನ್ಸಲ್ಟೆಂಟ್ಸ್ ಸ್ಥಳಾಂತರಗೊಂಡು ಕಲ್ಲಾರೆಯಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಸಂಸ್ಥೆಯ ಸೇವೆಗಳು…
-ಆರ್ಕಿಟೆಕ್ಚರಲ್ ಪ್ಲಾನಿಂಗ್
-ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಮತ್ತು ಕನ್ಸಲ್ಟಿಂಗ್
-ಎಸ್ಟಿಮೇಟ್
-ಅಲ್ಯೂಮಿನಿಯಮ್ ಪಾರ್ಟಿಷನ್ ವರ್ಕ್
-ಸ್ಟೀಲ್ ರೈಲಿಂಗ್ ವರ್ಕ್

 

ಪುತ್ತೂರು: ಕಳೆದ ಐದು ವರ್ಷಗಳಿಂದ ದರ್ಬೆ ಮೊಯ್ದೀನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಡಿಸೈನ್ ಹೌಸ್ ಸಿವಿಲ್ ಕನ್ಸಲ್ಟೆಂಟ್ಸ್ ಜೂ.೧೫ ರಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಕಲ್ಲಾರೆ ಶ್ರೀನಿವಾಸ್ ಪ್ಲಾಜಾದ ಪ್ರಥಮ ಮಹಡಿಯಲ್ಲಿ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.


ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಹು ಶೈಖುನಾ ಅಬ್ದುಲ್ ಕಾದರ್ ಅಲ್ ಖಾಸಿಮಿ ಬಂಬ್ರಾಣರವರು ಸಂಸ್ಥೆಯ ಕಛೇರಿ ಉದ್ಘಾಟಿಸಿ ದುಆ ನೆರವೇರಿಸಿ ಮಾತನಾಡಿ, ಪುತ್ತೂರಿನ ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿವಿಲ್ ಇಂಜಿನಿಯರ್ ಉಮ್ಮರ್ ಶಾಫಿ ಪಾಪೆತ್ತಡ್ಕರವರ ಕಟ್ಟಡದ ವಿನ್ಯಾಸಕ್ಕೆ ಸಂಬಂಧಪಟ್ಟ ಡಿಸೈನ್ ಹೌಸ್ ಸಿವಿಲ್ ಕನ್ಸಲ್ಟೆಂಟ್ಸ್ ಪ್ರಸ್ತುತ ಕಲ್ಲಾರೆಗೆ ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳುತ್ತಿರುವುದು ಬೆಳವಣಿಗೆ ಆಧಾರದಲ್ಲಿ ಉತ್ತಮವಾದ ವಿಚಾರವಾಗಿದೆ. ಉಮ್ಮರ್ ಶಾಫಿರವರು ಈಗಾಗಲೇ ಹಲವಾರು ಮಸೀದಿಗಳಿಗೆ ಎಲ್ಲರ ಮನಗೊಪ್ಪುವ ರೀತಿಯಲ್ಲಿ ಆಕರ್ಷಕವಾಗಿ ಕಟ್ಟಡದ ವಿನ್ಯಾಸವನ್ನು ಮಾಡಿಕೊಟ್ಟು ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಿ ಶುಭಹಾರೈಸಿದರು.


ಎಂಡಿ ಕ್ಯಾಬಿನ್ ಅನ್ನು ಬಹು ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ಉದ್ಘಾಟಿಸಿ ಮಾತನಾಡಿ, ತನ್ನಲ್ಲಿಗೆ ಬರುವಂತಹ ಗ್ರಾಹಕರಿಗೆ ಗ್ರಾಹಕರ ಮನಸ್ಸಿನಲ್ಲಿ ಹುದುಗಿರುವ ಕನಸಿನ ಮನೆಯ ಯೋಜನೆಯನ್ನು ತಮ್ಮ ಕೈಚಳಕದ ಮೂಲಕ ಮನೆಯ ಅಥವಾ ಕಾಂಪ್ಲೆಕ್ಸ್‌ನ ನೀಲ ನಕ್ಷೆಯನ್ನು ತಯಾರಿಸಿಕೊಡುವುದರಲ್ಲಿ ಉಮ್ಮರ್ ಶಾಫಿರವರು ಸಾಕಷ್ಟು ಪರಿಪಕ್ವರೆನಿಸಿದ್ದಾರೆ. ಗ್ರಾಹಕರು ಈ ಸಂಸ್ಥೆಯನ್ನು ಆಶೀರ್ವದಿಸಬೇಕಾಗಿದೆ ಎಂದು ಹೇಳಿ ಶುಭಹಾರೈಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರುರವರು ಮಾತನಾಡಿ, ಸಿವಿಲ್ ಇಂಜಿನಿಯರ್ ಕ್ಷೇತ್ರಕ್ಕೆ ಹೊಸ ಭಾಷ್ಯವನ್ನು ಬರೆದಿದ್ದಾರೆ ಉಮ್ಮರ್ ಶಾಫಿಯವರು. ಭವಿಷ್ಯದಲ್ಲಿ ಉಮ್ಮರ್ ಶಾಫಿಯವರ ಸಂಸ್ಥೆಗಳು ಮತ್ತಷ್ಟು ಆರಂಭಗೊಂಡು ಜನರ ಸೇವೆಗೈಯಲಿ ಎಂದು ಹೇಳಿ ಶುಭಹಾರೈಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಉಮ್ಮರ್ ಶಾಫಿ ಪಾಪೆತ್ತಡ್ಕರವರಲ್ಲಿನ ವಿನಯತೆ ಮತ್ತು ಕರ್ತವ್ಯ ಬದ್ಧತೆಯನ್ನು ನಾವು ಸದಾ ಸ್ಮರಿಸಿಕೊಳ್ಳಬೇಕಾಗಿದೆ. ಕರ್ತವ್ಯವೇ ನನ್ನ ದೇವರು ಎಂಬಂತೆ ಕಳೆದ ಹಲವು ವರ್ಷಗಳಿಂದ ದರ್ಬೆಯಲ್ಲಿ ಸಿವಿಲ್ ಇಂಜಿನಿಯರ್‌ಗೆ ಸಂಬಂಧಪಟ್ಟ ಕಟ್ಟಡದ ಕನ್‌ಸ್ಟ್ರಕ್ಷನ್‌ನ ನೀಲನಕ್ಷೆಯನ್ನು ವಾಸ್ತುಪ್ರಕಾರವಾಗಿ ತನ್ನ ಅಮೂಲ್ಯ ಜ್ಞಾನದಿಂದ ತಯಾರಿಸಿಕೊಡುವ ಮೂಲಕ ಎಲ್ಲರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದು ಹೇಳಿ ಶುಭಹಾರೈಸಿದರು.
ಪಾಪೆತಡ್ಕ ಜಮಾ ಮಸೀದಿಯ ಖತೀಬ್ ಅಬ್ದುಲ್ ಜಲೀಲ್ ಫೈಝಿ ಮೌಲೂದ್ ಪಾರಾಯಣಗೈದರು. ಈ ಸಂದರ್ಭದಲ್ಲಿ ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಬ್ಬಾಸ್ ಪಾಪೆತಡ್ಕ, ಅಬ್ದುಲ್ ರಹಿಮಾನ್ ಮುಂಡೋಳೆ, ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಜುಬೈರ್ ಮುಸ್ಲಿಯಾರ್ ಪಾಪೆತಡ್ಕ, ಮಹಮ್ಮದ್ ಅಲಿ ಉಸ್ತಾದ್ ಜಿಡೆಕಲ್ಲು, ಅಬೂಬಕ್ಕರ್ ಮುಲಾರ್, ಸೈಯ್ಯದ್ ಅಫ್ಹಾಮ್ ತಂಙಳ್, ನಯೀಮ್ ಫೈಝಿ, ಆರ್ಕಿಟೆಕ್ಟ್ ಸಚ್ಚಿದಾನಂದ, ಅಬ್ದುಲ್ಲಾ ಇಂಜಿನಿಯರ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಇಸ್ಮಾಯಿಲ್ ಯಮಾನಿ ಜಾಬಿರ್ ಫೈಝಿ ಬನಾರಿ, ನಜೀರ್ ಅರ್ಷದಿ, ಅರ್ಷದ್ ದರ್ಬೆ, ಅಬ್ದುಲ್ಲಾ ನಿಂತಿಕಲ್, ಜಮಾಲ್ ಬೆಳ್ಳಾರೆ, ಅಡ್ವೊಕೇಟ್ ಸಿದ್ದೀಕ್, ಕೆಎಂಎಚ್ ಝುಹ್ರಿ, ಇಬ್ರಾಹಿಂ ಪಾಪೆತಡ್ಕ, ನಗರಸಭಾ ಸದಸ್ಯ ರಿಯಾಝ್ ಒಳತಡ್ಕ, ಉಮರ್ ಯಮಾನಿ, ಸಿದ್ದಿಕ್ ಸುಲ್ತಾನ್, ಸಂಶುದ್ದೀನ್ ಹನೀಪಿ, ಸಂದೇಶ ನಾಯಕ್, ಅಬ್ದುಲ್ ರಹಿಮಾನ್ ಹಾಜಿ ಕಬಕ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ರಿಯಾಝ್ ಹಾಜಿ ಭೂಮಿ, ಶ್ರೀಕಾಂತ್ ಶೆಣೈ ಪುತ್ತೂರು, ಇಸ್ಮಾಯಿಲ್ ಹಾಜಿ ಕೈಮಾರ್, ಮಜೀದ್ ಕಬಕ, ಹಮೀದ್ ಸೂರ್ಯ, ಎಸ್ಪಿ ಬಶೀರ್ ಶೇಖಮಲೆ, ಶಮೀರ್ ಸ್ಕೇಲ್, ಬಶೀರ್ ಮೀನಾವು, ಸಿರಾಜ್ ಮನಿಲಾ, ಅಶ್ರಫ್ ಮುಕ್ವೆ, ಅಶ್ರಫ್ ಅಮ್ಜದಿ, ಇಬ್ರಾಹಿಂ ಹಾಜಿ ಕಟ್ಟತ್ತಾರ್, ಉಮ್ಮರ್ ಕೆರೆಮೂಲೆ, ಇಂಜಿನಿಯರ್‌ಗಳಾದ ಆರೀಫ್ ಸಾಲ್ಮರ, ಇಜಾಝ್ ಸಾಲ್ಮರ, ನವಾಜ್ ನಿಂತಿಕಲ್, ಲತೀಫ್ ಕೊಡಾಜೆ ಹಾಗೂ ಶಕೀಲ್ ಬೇರಿಕೆ, ರೆಹಮಾನ್ ಸಂಪ್ಯ, ಕೆ.ಪಿ ಅಶೋಕ್ ಶೆಟ್ಟಿ, ಜಗದೀಶ್, ಲತೀಫ್ ದರ್ಬೆ, ಬಶೀರ್ ದರ್ಬೆ, ರಹೀಮ್ ನೆಟ್ಟಾರ್, ಆಸಿಫ್ ಕುರಿಯ, ಮುಝಮ್ಮಿಲ್, ಸೈಫ್ ನೆಟ್ಟಾರು, ರಶೀದ್ ತ್ಯಾಗರಾಜ, ಬಾತೀಶ್ ಬಲ್ನಾಡು, ಸಿರಾಜ್ ಫಿದಾಸ್, ಹಮೀದ್ ಪಾಪೆತಡ್ಕ, ಯಾಕೂಬ್ ಪಾಪೆತಡ್ಕ, ಉಸ್ಮಾನ್ ನೆಕ್ಕಿಲು ಮೊದಲಾದವರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಮುಖ್ಯಸ್ಥ ಇಂಜಿನಿಯರ್ ಉಮ್ಮರ್ ಶಾಫಿ ಪಾಪೆತಡ್ಕ ಸ್ವಾಗತಿಸಿ, ಸಿಬ್ಬಂದಿಗಳಾದ ಮುನವ್ವರ್ ನೆಟ್ಟಾರ್, ಝುಬೈರ್ ಪಳ್ಳತ್ತೂರು ವಂದಿಸಿದರು.

ಡಿಸೈನ್ ಹೌಸ್ ಸಂಸ್ಥೆಯ ಮುಖ್ಯಸ್ಥ ಉಮ್ಮರ್ ಶಾಫಿ ಪಾಪೆತ್ತಡ್ಕರವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಪುತ್ತೂರಿನ ದರ್ಬೆಯ ಮೊದೀನ್ ಕಾಂಪ್ಲೆಕ್ಸ್‌ನಲ್ಲಿ ಡಿಸೈನ್ ಹೌಸ್ ಸಿವಿಲ್ ಕನ್ಸಲ್ಟೆಂಟ್ ಹೆಸರಿನಲ್ಲಿ ವ್ಯವಹರಿಸುತ್ತಿರುವ ಸಂದರ್ಭದಲ್ಲಿ ಗ್ರಾಹಕರು ನಮ್ಮನ್ನು ಹರಸಿ, ಪ್ರೋತ್ಸಾಹಿಸಿದ್ದಾರೆ. ಇದೀಗ ದರ್ಬೆಯಲ್ಲಿದ್ದ ಶಾಖೆಯನ್ನು ಕಲ್ಲಾರೆ ಶ್ರೀನಿವಾಸ ಫ್ಲಾಜಾಕ್ಕೆ ಸ್ಥಳಾಂತರಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲೂ ಸಹೃದಯಿ ಗ್ರಾಹಕರ ಪ್ರೋತ್ಸಾಹ ಮತ್ತು ಆಶೀರ್ವಾದ ನಿರಂತರ ನಮ್ಮ ಸಂಸ್ಥೆಗೆ ಬೇಕಾಗಿದೆ ಎಂದು ಹೇಳಿ ಸಹಕಾರ ಕೋರಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.