ಪಾಣಾಜೆ: ಚರಂಡಿ ಇಲ್ಲದೆ ರಸ್ತೆ ಮೇಲೆ ನೀರು- ವಾಹನ ಸವಾರರು ಸಂಕಷ್ಟದಲ್ಲಿ 

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಿತ್ತಡ್ಕ- ಒಡ್ಯ ರಸ್ತೆಯ ಕಲ್ಲಪದವು ಎಂಬಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮಧ್ಯೆ ನೀರು ನಿಂತು ಕೆಸರು ಗದ್ದೆಯಂತಾಗಿದ್ದು ವಾಹನ ಸವಾರರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ದಿನನಿತ್ಯ ನೂರಾರು ವಾಹನ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಅದರಲ್ಲೂ ಮಹಿಳಾ ಸವಾರರು ಆಯತಪ್ಪಿ ಕೆಸರಲ್ಲಿ ಬಿದ್ದ ಪ್ರಸಂಗಗಳು ಇದೆ. ಆದುದರಿಂದ ಸಂಬಂಧ ಪಟ್ಟ ಇಲಾಖೆ ಇದಕ್ಕೊಂದು ಸೂಕ್ತ ಪರಿಹಾರ ಕಂಡು ಕೊಳ್ಳದ್ದಿದ್ದಲ್ಲಿ ಜನಸಾಮಾನ್ಯರಿಗೆ ಅಪಾಯ ತಪ್ಪಿದ್ದಲ್ಲ. ಆದುದರಿಂದ ಸಂಬಂಧಿಸಿದ ಇಲಾಖೆ ತಕ್ಷಣ ಈ ಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಈ ಭಾಗದ ಜನತೆ ಒತ್ತಾಯಿಸುತ್ತಿದ್ದಾರೆ.
ಚರಂಡಿ ವ್ಯವಸ್ಥೆ ಆಗಬೇಕು: ಮಿತ್ತಡ್ಕದಿಂದ ಒಡ್ಯಕ್ಕಾಗಿ ಕೇರಳ ಸಂಪರ್ಕಿಸುವ ಈ ರಸ್ತೆ ಈ ಭಾಗದ ಜನರಿಗೆ ಬಹಳ ಉಪಯುಕ್ತವಾಗಿದೆ. ರಸ್ತೆ ನಿರ್ಮಾಣವಾದರೂ ರಸ್ತೆಯ ಬದಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಆಗದೆ ರಸ್ತೆ ಹೊಂಡ ಬಿದ್ದು ನೀರು ನಿಂತ ಪರಿಣಾಮ ದ್ವಿಚಕ್ರ  ವಾಹನ ಸವಾರರರು ಆಯ ತಪ್ಪಿ ಬೀಳುತ್ತಿದ್ದು ತಕ್ಷಣ ಚರಂಡಿ ವ್ಯವಸ್ಥೆ ಮಾಡಲಿ. ಸಿದ್ದೀಕ್ ಕಲ್ಲಪದವು, ಸ್ಥಳೀಯ ನಿವಾಸಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.