HomePage_Banner
HomePage_Banner
HomePage_Banner

ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪೋಷಕರ ಸಭೆ

Puttur_Advt_NewsUnder_1
Puttur_Advt_NewsUnder_1

 ಚಿತ್ರ: ಐಶ್ವರ್ಯ ಡಿಜಿಟಲ್ ಮೀಡಿಯಾ

ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪೋಷಕರ ಸಭೆಯು ಜೂ. 17 ರಂದು ಸವಣೂರು ಗ್ರಾಮ ಪಂಚಾಯತ್ ನ ಕುಮಾರ ಧಾರ ಸಭಾಂಗಣದಲ್ಲಿ ಜರಗಿತು. ಕರೋನಾ ಹತೋಟಿಗೆ ಬಂದ ಬಳಿಕ ಶಾಲೆಯನ್ನು ಆರಂಭಿಸುವಂತೆ ಪೋಷಕರು ಒಮ್ಮತದಿಂದ ತೀರ್ಮಾನ ಕೈಗೊಂಡರು.

ಸಭೆಯ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ವಹಿಸಿ. ಮಾತನಾಡಿ ಕರೋನಾ ಖಾಯಿಲೆ ಸಂಪೂರ್ಣವಾಗಿ ತೊಲಗಬೇಕು. ಇದಕ್ಕೆ ವಿಜ್ಞಾನಿಗಳು ಔಷಧಿ ಕಂಡು ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಕರೋನಾ ನಿಯಂತ್ರಣ ಬಂದ ಬಳಿಕ ನಾವು ಶಾಲೆ ಆರಂಭಿಸೋಣ ಎಂದು ಹೇಳಿದರು. ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಮಾತನಾಡಿ ನಮ್ಮ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ಕರೋನಾ ನಿಯಂತ್ರಣಕ್ಕೆ ಬಂದ ಬಳಿಕ ಪ್ರಾರಂಭಿಸುವ ನಿರ್ಧಾರ ಶ್ಲಾಘನೀಯ. ನಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮ ಪೋಷಕರ ಅದ್ಯ ಕರ್ತವ್ಯ ಎಂದು ಹೇಳಿದರು. ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ . ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ.ಎಂ.ಸಿ. ಅಧ್ಯಕ್ಷೆ ಪುಷ್ಪಾವತಿ ಕೇಕುಡೆ. ಉಪಾಧ್ಯಕ್ಷ ಮಹಮ್ಮದ್ ಹನೀಫ್ ಸವಣೂರು. ಮಾಜಿ ಅಧ್ಯಕ್ಷ ಚಂದ್ರಶೇಖರ ಮೆದು ಮತ್ತು ಸದಸ್ಯರುಗಳು. ಶಾಲಾ ಶಿಕ್ಷಕಿಯರಾದ ತುಳಸಿ. ಮೇಬಲ್ ರೋಡ್ರಿಗಸ್. ಅಶಾಲತಾ ಅಂಬುಲ. ಆಶಾ ಎಂ. ಮಲ್ಲಿಕಾ. ಅಂಗನವಾಡಿ ಶಿಕ್ಷಕಿ ಮಮತಾ ಜಿ.ಬಡೆಕಿಲ್ಲಾಯ, ಸವಣೂರು ಗ್ರಾ.ಪಂ. ಪಿಡಿಒ ನಾರಾಯಣ ಬಟ್ಟೋಡಿ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಸದಸ್ಯರುಗಳಾದ ನರಸಿಂಹ ಉಪಾಧ್ಯಾಯ, ಆಶ್ರಫ್ ಜನತಾ, ಚಂದ್ರ ಗೌಡ ತೆಕ್ಕಿತಡಿರವರುಗಳು ಸಲಹೆ ನೀಡಿದರು. ಶಾಲಾ ಮುಖ್ಯ ಗುರು ಕುಶಾಲಪ್ಪ ಗೌಡ ಸ್ವಾಗತಿಸಿ. ಶಿಕ್ಷಕರಾದ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ. ಛತ್ರ ಕುಮಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.