HomePage_Banner
HomePage_Banner
HomePage_Banner

ವಕೀಲರಿಗೆ ಪರಿಹಾರ ಸಿಗದ ಹಿನ್ನಲೆ | ಜೂ.22ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಪುತ್ತೂರಿನಲ್ಲಿ ಬೆಂಬಲ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನಿರಂತರವಾಗಿ ಮನವಿ ಸಲ್ಲಸಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಪರಿಹಾರ ಕಲ್ಪಿಸಲು ಯವುದೇ ಪ್ಯಾಕೇಜ್ ಘೋಷಿಸದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಜೂ. 22ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಪುತ್ತೂರು ವಕೀಲರ ಸಂಘ ಇದಕ್ಕೆ ಬೆಂಬಲ ನೀಡಿದೆ.
ಕರ್ನಾಟಕ ವಕೀಲರ ಪರಿಷತ್ ವಕೀಲರ ಕಲ್ಯಾಣ ನಿಧಿಯ ಕಲಂ 16ಕ್ಕೆ ತಿದ್ದುಪಡಿ ಮಾಡಿ ಅದನ್ನು ಆಧರಿಸಿ ಸರಕಾರ ಸುಗ್ರೀವಾಜ್ಞೆ ಮೂಲಕ ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸಬೇಕು. ತುರ್ತಾಗಿ ರೂ. 50 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿತ್ತು. ಆದರೆ ಸರಕಾರ ಈ ಕುರಿತು ಪ್ಯಾಕೇಜ್ ಘೋಷಣೆ ಮಾಡಿಲ್ಲ ಎಂದು ವಕೀಲರು ಪ್ರತಿಭಟನೆ ನಡೆಸಲಿದ್ದಾರೆ. ಅಂದು ಪುತ್ತೂರು ವಕೀಲರ ಸಂಘದಿಂದ ಬೆಳಿಗ್ಗೆ ಸಹಾಯಕ ಕಮೀಷನರ್ ಮತ್ತು ತಹಶೀಲ್ದಾರ್‌ಗೆ ಮನವಿ ನೀಡಲಾಗುವುದು ಎಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.