HomePage_Banner
HomePage_Banner
HomePage_Banner

ದೈಹಿಕ, ಮಾನಸಿಕ ಹಿಂಸೆ ಆರೋಪ:ಪತ್ನಿ ದೂರು -ಟ್ರಾಫಿಕ್ ಪೊಲೀಸ್ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರ ಪತ್ನಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.5 ತಿಂಗಳ ಹಿಂದೆಯಷ್ಟೆ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ನಡೆದಿತ್ತು.
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ(27ವ)ರವರು, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ ದೂರು ನೀಡಿದವರು.ಜೂ.16ರಂದು ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಪ್ರೀತಿಸಿ ನಾವಿಬ್ಬರು ವಿವಾಹ ಆಗಿದ್ದೆವು.ಬಳಿಕದ ಬೆಳವಣಿಗೆಯಲ್ಲಿ ಶಾಂತಕುಮಾರ್ ನನ್ನ ಜೊತೆ ಅನ್ಯೋನ್ಯತೆಯಿಂದ ಇರದೆ ಸಣ್ಣಪುಟ್ಟ ವಿಷಯಳಿಗೆ ಜಗಳವಾಡುತ್ತಿದ್ದರು. ಹಾಗಾಗಿ ನಾನು ಪಡ್ನೂರಿನಲ್ಲಿ ತಾಯಿ ಮನೆಯಲ್ಲೇ ಇದ್ದು ಆಗಾಗೆ ಸಂಪ್ಯದಲ್ಲಿರುವ ಗಂಡನ ವಸತಿ ಗೃಹಕ್ಕೆ ಬಂದು ಹೋಗುತ್ತಿದ್ದೆ. ಇತ್ತೀಚೆಗೆ ನನ್ನ ಗಂಡ ನನ್ನ ಜೊತೆ ಮಾತನಾಡದೆ ನನ್ನ ಮೊಬೈಲ್ ನಂಬರ್‌ನ್ನೂ ಕೂಡಾ ಬ್ಲಾಕ್ ಮಾಡಿದ್ದರು.ಜೂ.16ರಂದು ನಾನು ಮಧ್ಯಾಹ್ನ ಗಂಡನಲ್ಲಿ ಮಾತನಾಡಲೆಂದು ಪೊಲೀಸ್ ವಸತಿ ಗೃಹಕ್ಕೆ ಹೋಗಿದ್ದೆ. ಆ ಸಮಯ ನನ್ನನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ನನ್ನ ಗಂಡ ನನಗೆ ಪದೇ ಪದೇ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು ಮುಂದೆ ನನ್ನ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ.ಸಂಪ್ಯ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 504, 506, 324 ಮತ್ತು 498(ಎ)ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 2019ರ ಡಿ.30ರಂದು ಅಶ್ವಿನಿ ಮತ್ತು ಶಾಂತಕುಮಾರ್ ಅವರ ವಿವಾಹ ನೋಂದಣಿ ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿತ್ತು.ಪ್ರಸ್ತುತ ಅಶ್ವಿನಿಯವರು ಅವರು ಪ್ರಸ್ತುತ ಪಡ್ನೂರು ಗ್ರಾಮದ ಅಜೇಯನಗರದಲ್ಲಿ ತಂದೆ ತಿಮ್ಮಪ್ಪ ಪೂಜಾರಿ, ತಾಯಿ ಯಶೋಧಾ ಅವರ ಜೊತೆಗೆ ವಾಸ್ತವ್ಯವಿದ್ದಾರೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.