HomePage_Banner
HomePage_Banner
HomePage_Banner
Breaking News

‘ಚೀನಾ ವಸ್ತು ಬಹಿಷ್ಕರಿಸಿ ದೇಶದೊಳಗಿನ ಯೋಧರಾಗೋಣ’ -ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆಯಲ್ಲಿ ರವಿರಾಜ್ ಶೆಟ್ಟಿ ಕಡಬ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ ದೇಶದ ವೀರ ಸೈನಿಕರು ಸಾಯುವುದಿಲ್ಲ.ದೇಶದ ಗಡಿ ಭಾಗದಲ್ಲಿ ದೇಶಕ್ಕಾಗಿ ಹೋರಾಟ ಮಾಡುತ್ತಾರೆ.ಚೀನಾ ಪಡೆ ವಿರುದ್ಧ ನಡೆದ ಘರ್ಷಣೆಯಲ್ಲಿ ನಮ್ಮ ಸೈನಿಕರು ಬಲಿದಾನ ಆಗಿದ್ದಾರೆ.ಈ ನಿಟ್ಟಿನಲ್ಲಿ ನಾವು ಕೂಡಾ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶದ ಒಳಗಿನ ಯೋಧರಾಗಿ ಹೋರಾಟ ಮಾಡೋಣ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಅವರು ಹೇಳಿದರು.
ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧ ನಡೆದ ಸಂಘರ್ಷದ ವೇಳೆ ಹುತಾತ್ಮರಾದ 20 ಭಾರತೀಯ ಯೋಧರಿಗೆ ಇಲ್ಲಿನ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ ಜೂ.17ರಂದು ಸಂಜೆ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಹಣತೆ ಬೆಳಗಿಸಿ ನಡೆದ ಗೌರವ ಸಮರ್ಪಣೆಯಲ್ಲಿ ಅವರು ಮಾತನಾಡಿದರು. ಚೀನಾದ ಕುತಂತ್ರ ಬುದ್ದಿ ಹೊಸತಲ್ಲ.ಆದರೆ ಇವತ್ತು ಚೀನಾದ ಪರವಾಗಿ ಯಾರೂ ಇಲ್ಲ. ದೇಶದ ಪ್ರಧಾನಿ ಮೋದಿಯವರು ಕೂಡಾ ನಮ್ಮ ಹುತಾತ್ಮ ಯೋಧರ ಬಲಿದಾನ ವ್ಯರ್ಥ ಆಗುವುದಿಲ್ಲ ಎಂದು ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಪ್ರಧಾನಿಯವರಿಗೆ ಸಾಥ್ ನೀಡಬೇಕಾಗಿದೆ ಎಂದ ಅವರು, ಗಡಿ ಭಾಗದಲ್ಲಿ ಸೈನಿಕರು ಕಾಯುತ್ತಿದ್ದರೆ ನಾವು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಚೀನಾದ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸಬೇಕೆಂದರು.
ಚೀನಾ ಟಿಕ್‌ಟಾಕ್ ವಿರುದ್ಧ ಅಭಿಯಾನ:
ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಅವರು ಮಾತನಾಡಿ ಕೊರೋನಾ ಮಹಾಮಾರಿಯ ಸಂಕಷ್ಟದ ಬದುಕಿನ ನಡುವೆ ಇವತ್ತು ಬೇಸರದ ದಿನ ನಮ್ಮ ಮುಂದಿದೆ. ಚಪ್ಪಟೆ ಮೂಗಿನ ಕುತಂತ್ರಿ ಚೀನಾ ವಿಶ್ವಕ್ಕೆ ಕೊರೋನಾ ಹಬ್ಬಿಸುವ ಕೆಲಸವನ್ನು ಆರಂಭದಲ್ಲಿ ಮಾಡಿತ್ತು. ಆದರೆ ದೈವಿಕ ಶಕ್ತಿಯ ಮೂಲಕ ಭಾರತ ಕೊರೋನಾದಿಂದ ಗೆಲುವು ಸಾಧಿಸಿದೆ ಎಂದಾಗ ಇದೀಗ ಚೀನಾ ತನ್ನ ಕುತಂತ್ರ ಬುದ್ದಿ ತೋರಿಸಿದೆ. ಚೀನಾದ ಕುತಂತ್ರ ಬುದ್ದಿಯಿಂದ ಹುತಾತ್ಮರಾದ ನಮ್ಮ ಒಬ್ಬೊಬ್ಬ ಸೈನಿಕ ಕೂಡಾ ನಮಗೆ ದೇವರಿಗೆ ಸಮಾನ. ಇಂತಹ ಸಂದರ್ಭದಲ್ಲಿ ಚೀನಾದ ಸಂಪರ್ಕವನ್ನು ನಾವು ಬಿಟ್ಟು ಬಿಡಬೇಕು. ಅದಕ್ಕಾಗಿ ಚೀನಾ ವಸ್ತುಗಳು, ಟಿಕ್‌ಟಾಕ್‌ಗಳ ವಿರುದ್ಧ ಅಭಿಯಾನ ಮಾಡಬೇಕು ಎಂದರು.ಹೃದಯಘಾತದಿಂದ ಉತ್ತರಪ್ರದೇಶದ ಮಥುರಾದಲ್ಲಿ ನಿಧನರಾದ ಯೋಧ ಬಾರ್ಯದ ಸಂದೇಶ್ ಶೆಟ್ಟಿ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ವೆಂಕಟ್ ಕಡಬ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ಪ್ರಧಾನ ಕಾರ್ಯದರ್ಶಿ ಅವಿನಾಶ್, ಉಪಾಧ್ಯಕ್ಷ ಶಶಿಕಾಂತ್ ಕೋರ್ಟ್‌ರೋಡ್, ಪುತ್ತೂರು ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಸೇರಿದಂತೆ ಹಲವಾರು ಮಂದಿ ಗೌರವ ನಮನ ಸಲ್ಲಿಸಿದರು.ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಚಿನ್ಮಯ್ ರೈ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.