HomePage_Banner
HomePage_Banner
HomePage_Banner

ಕೊರೋನಾ ಅಟ್ಟಹಾಸದ ನಡುವೆ ಡೆಂಗ್ಯೂ ಬಾಧೆ |ಪುತ್ತೂರಿನ ಆಸ್ಪತ್ರೆಗಳಲ್ಲಿ ಬರೊಬ್ಬರಿ 143 ಮಂದಿ ಒಳರೋಗಿಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮಹಾಮಾರಿ ಕೊರೋನಾದ ಅಟ್ಟಹಾಸದ ನಡುವೆ ಪುತ್ತೂರು ತಾಲೂಕಿನಲ್ಲಿ ಡೆಂಗ್ಯೂ ಜ್ವರ ಬಾಧಿತರ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದ್ದು ಜನತೆ ಆತಂಕಿತರಾಗಿದ್ದಾರೆ.ಗ್ರಾ.ಪಂ.ಸದಸ್ಯರೋರ್ವರ ಸಹಿತ ಶಂಕಿತ ಡೆಂಗ್ಯೂ ಬಾಧಿತ ಸುಮಾರು ೧೪೩ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಡೆಂಗ್ಯೂ ಜ್ವರ ಕೊರೋನಾದಿಂದಲೂ ಅಪಾಯಕಾರಿಯಾಗಿದ್ದು, ತಾಲೂಕಿನಲ್ಲಿ ಇಲಾಖಾ ವರದಿಯ ಪ್ರಕಾರ ಮೂರು ಕೇಸ್ ಮಾತ್ರ ಡೆಂಗ್ಯೂ ಆಗಿದ್ದು, ಉಳಿದಂತೆ ಎಲ್ಲವೂ ಶಂಕಿತ ಪ್ರಕರಣ ಎಂದು ಹೇಳಲಾಗುತ್ತಿದೆ.ಆದರೆ ಖಾಸಗಿ ಆಸ್ಪತ್ರೆಗಳ ಮಾಹಿತಿ ಪ್ರಕಾರ ಡೆಂಗ್ಯೂ ಪ್ರಕರಣ ಬಹಳಷ್ಟಿದೆ.ಡೆಂಗ್ಯೂ ಪರೀಕ್ಷೆಯ ವರದಿಗಾಗಿ ಎರಡು ಮೂರು ದಿನ ಕಾಯುತ್ತಿದ್ದರೆ ರೋಗಿ ಮೃತಪಡುವ ಸಾಧ್ಯತೆ ಹೆಚ್ಚು.ಈ ನಿಟ್ಟಿನಲ್ಲಿ ತಕ್ಷಣ ರೋಗಿಯ ಆರೈಕೆ ಮಾಡಬೇಕೆನ್ನುತ್ತಾರೆ.ಕಳೆದೊಂದು ವಾರದ ಅವಧಿಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಈ ಪೈಕಿ ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇನ್ನೂ ಕೆಲವು ಮಂದಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.ಇದೀಗ ಧಾರಾಕಾರ ಮಳೆಯೂ ಸುರಿಯಲಾರಂಭಿಸಿದ್ದು ಡೆಂಗ್ಯೂ ಜೊತೆಯಲ್ಲೇ ವೈರಲ್ ಜ್ವರವೂ ಕಾಣಿಸಿಕೊಂಡಿದ್ದು, ನೂರಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಿಂದ ಔಷಧಿ ಪಡೆದು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ವಿವಿಧ ಆಸ್ಪತ್ರೆಗಳಲ್ಲಿ ಡೆಂಗ್ಯೂ ವಿವರ….
ಪುತ್ತೂರಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಬರೋಬ್ಬರಿ ೧೨೦ಕ್ಕೂ ಅಧಿಕ ಮಂದಿ ಡೆಂಗ್ಯೂ ರೋಗಿಗಳು ಒಳರೋಗಿಗಳಾಗಿ ದಾಖಲಾಗಿದ್ದಾರೆ.ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ೬೦ ಮಂದಿ, ಮಹಾವೀರ ಆಸ್ಪತ್ರೆಯಲ್ಲಿ ೨೬ ಮಂದಿ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೧೦ ಮಂದಿ, ಧನ್ವಂತರಿ ಆಸ್ಪತ್ರೆಯಲ್ಲಿ ೧೩ ಮಂದಿ ಚೇತನಾ ಆಸ್ಪತ್ರೆಯಲ್ಲಿ ೨೨ ಮಂದಿ, ಹಿತಾ ಆಸ್ಪತ್ರೆಯಲ್ಲಿ ೨ ಮಂದಿ, ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ೫ ಮಂದಿ ಮತ್ತು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆದಂಬಾಡಿ ಗ್ರಾ.ಪಂ.ಸದಸ್ಯ ಚಂದ್ರಹಾಸ ರೈ ಬೋಳೋಡಿ ಸೇರಿದಂತೆ ೧೦ ಮಂದಿ ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ ಸರಕಾರಿ ಆಸ್ಪತ್ರೆಯವರ ಪ್ರಕಾರ ಶಂಕಿತ ಡೆಂಗ್ಯೂ ಪ್ರಕರಣ ಹೆಚ್ಚಿದೆ.ಜತೆಗೆ ಉಪ್ಪಿನಂಗಡಿ, ಕಡಬದಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ಹೇಳಲಾಗುತ್ತಿದೆ.

ದೃಢ ಪ್ರಕರಣ ೩ ಮಾತ್ರ: ಟಿಎಚ್‌ಒ
ತಾಲೂಕಿನಲ್ಲಿ ಡೆಂಗ್ಯೂ ಶಂಕಿತ ಪ್ರಕರಣಗಳು ಹೆಚ್ಚಿದ್ದು ಈಗಾಗಲೇ ದೃಢಪಟ್ಟಿರುವುದು ಮೂರು ಪ್ರಕರಣ ಮಾತ್ರ.ಉಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಿದೆ.ಡೆಂಗ್ಯೂ ದೃಢ ಪಟ್ಟ ಮೂರು ಪ್ರಕರಣಗಳಲ್ಲಿಯೂ ಇಲಾಖೆಯಿಂದ ಬೆಡ್‌ನೆಟ್ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈ ಹೇಳಿದ್ದಾರೆ.

ಡೆಂಗ್ಯೂ ಸಂಬಂಧ ಮುಂಜಾಗ್ರತಾ ಕ್ರಮಗಳ ಕುರಿತು ಜನಜಾಗೃತಿ ಮೂಡಿಸುವ ಕೆಲಸ ನಿರಂತರ ನಡೆಯುತ್ತಿದೆ.ಎಲ್ಲಾ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಸೊಳ್ಳೆ ಲಾರ್ವ ಪರೀಕ್ಷೆ ನಡೆಸಿ ಮಾಹಿತಿ ನೀಡುತ್ತಿದ್ದಾರೆ.ಜೊತೆಗೆ ತಾಲೂಕಿನ ಎಲ್ಲಾ ಎಎನ್‌ಎಂಗಳ ಮೂಲಕ ಎರಡೆರಡು ಬಾರಿ ಮಾಸ್ಟರ್ ಸರ್ವೆ ನಡೆಸಲಾಗಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಮೂಲಕ ಜಾಗೃತಿ ಕಾರ್ಯ ನಡೆಯುತ್ತಿದೆ.ಪ್ರಕರಣಗಳು ಕಂಡು ಬಂದಿರುವ ಕಡೆಗಳಲ್ಲಿ ಈಗಾಗಲೇ ಇಲಾಖೆಯಿಂದ ಫಾಗಿಂಗ್ ನಡೆಸಲಾಗಿದೆ.ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಮೂಲಕ ಕರಪತ್ರ ವಿತರಣೆ ಇತ್ಯಾದಿ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದ್ದು ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದ್ದು ಜನತೆ ಆತಂಕಗೊಳ್ಳಬೇಕಾಗಿಲ್ಲ ಎಂದು ಡಾ.ಅಶೋಕ್ ರೈ ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.