ಪುತ್ತೂರು: ಕೊವೀಡ್ ೧೯ ಸುರಕ್ಷತೆಯ ನಿಟ್ಟಿನಲ್ಲಿ ಸರಕಾರ ಲಾಕ್ಡೌನ್ ಮಾಡಿದ್ದ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ಮಾಡಲು ತೊಂದರೆಯಾಗಿತ್ತು. ಬಹುತೇಕ ವ್ಯಾಪಾರಸ್ಥರು ತಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿದ್ದರು.ಅಂಗಡಿ ಮಾಲಕರಿಗೆ ವ್ಯಾಪಾರವಿಲ್ಲದೆ ಬಾಡಿಗೆ ಕೊಡಲು ಕಷ್ಟವಿರುವುದನ್ನು ಗಮನಿಸಿದ ಗ್ರಾಮೀಣ ಪ್ರದೇಶದ ಬಹುತೇಕ ಕಾಂಪ್ಲೆಕ್ಸ್ ಮಾಲಕರು ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಕಾವುನಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ ಮಾಲಕ, ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಕಾರ್ಯದರ್ಶಿ ಪಾವನರಾಮರವರು ತಮ್ಮ ಕಾಂಪ್ಲೆಕ್ಸ್ನಲ್ಲಿರುವ ಎಲ್ಲಾ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾವು ಅಕ್ಷಯ ಕಾಂಪ್ಲೆಕ್ಸ್
ಕಾವು ಪೇಟೆಯಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ ೫ ಬಾಡಿಗೆ ರೂಮ್ಗಳಿದ್ದು ನಾಲ್ಕು ರೂಮ್ಗಳಲ್ಲಿ ಬಾಡಿಗೆದಾರರಿದ್ದಾರೆ. ೨,೫೦೦ ರಿಂದ ೧೨ ಸಾವಿರದ ತನಕ ಬಾಡಿಗೆ ಇದೆ. ಒಂದು ತಿಂಗಳ ಸಂಪೂರ್ಣ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ.
ಸುಳ್ಯದ ಕಾಂಪ್ಲೆಕ್ಸ್ನಲ್ಲೂ ಬಾಡಿಗೆ ಮನ್ನಾ
ಲಕ್ಷ್ಮೀ ಮಾಧವ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಪಾವನರಾಮರು ಸುಳ್ಯದಲ್ಲೂ ಕಾಂಪ್ಲೆಕ್ಸ್ ಹೊಂದಿದ್ದು, ತನ್ನ ಮಾಲಕತ್ವದ ಅಶ್ವಿನಿ ಕಾಂಪ್ಲೆಕ್ಸ್ನಲ್ಲಿರುವ ೧೪ ರೂಮ್ಗಳ ಬಾಡಿಗೆದಾರರಿಗೂ ಎಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಒಟ್ಟಿನಲ್ಲಿ ಕೊರೋನ ಸಂಕಷ್ಟದ ಸಮಯದಲ್ಲಿ ಬಾಡಿಗೆ ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೋವಿಡ್೧೯ ವೈರಸ್ ಹರಡುವುದನ್ನು ತಪ್ಪಿಸುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಲಾಕ್ಡೌನ್ ಜಾರಿಗೆ ತಂದಿತ್ತು. ಈ ಸಮಯದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾನವೀಯ ದೃಷ್ಟಿಯಲ್ಲಿ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಕೊರೋನ ಮಹಾಮಾರಿ ಶೀಘ್ರದಲ್ಲೇ ದೂರವಾಗಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ – ಪಾವನರಾಮ ಬೋಲುಬೈಲ್, ಕಾರ್ಯದರ್ಶಿ ಲಯನ್ಸ್ ಕ್ಲಬ್ ಪುತ್ತೂರು ಕಾವು