Home_Page_Advt
Home_Page_Advt
Home_Page_Advt

ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ತಯಾರಿ : ವಿವೇಕಾನಂದ ಕಾಲೇಜಿನ ಬಿಸಿಎ ವಿದ್ಯಾರ್ಥಿಯ ಸಾಧನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಲಾಕ್‌ಡೌನ್ ಹಲವು ರೀತಿಯ ಹೊಸ ಅನ್ವೇಷಣೆಗಳಿಗೂ ಕಾರಣವಾಗಿತ್ತು. ವಿದ್ಯಾರ್ಥಿಗಳೇ ಹಲವು ಚಟುವಟಿಕೆ ಮೂಲಕ ಹೊಸ ಅನ್ವೇಷನೆ ಮಾಡಿದ್ದಾರೆಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಪ್ರಸನ್ನ ಕುಮಾರ್ ಅವರು ಆಧುನಿಕ ತಂತ್ರಜ್ಞಾನದ ಮತ್ತು ಅತಿ ಕಡಿಮೆ ವೆಚ್ಚದ ಸ್ಯಾನಿಟೈಸರ್ ಯಂತ್ರವನ್ನು ತಯಾರಿಸಿದ್ದಾರೆ.

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊಸ ಅನ್ವೇಷಣೆಗಳಿಗೆ ಪ್ರೇರೇಪಣೆ ನೀಡುವ ಪ್ರಾಧ್ಯಾಪಕ ಬಳಗದಿಂದ ವಿದ್ಯಾರ್ಥಿಗಳೆಲ್ಲರಿಗೂ ಹೊಸ ಅನ್ವೇಷಣೆಗೆ ಸ್ಪೂರ್ತಿ ಸಿಗುತ್ತಿದೆ. ನೂತನವಾಗಿ ತಯಾರಿಸಿದ ಆಧುನಿಕ ತಂತ್ರಜ್ಞಾನದ ಮತ್ತು ಅತಿ ಕಡಿಮೆ ವೆಚ್ಚದ ಸ್ಯಾನಿಟೈಸರ್ ಯಂತ್ರವನ್ನು ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ. ಅವರು ಜೂ. 17ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಜಿ. ಭಟ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಸ್ಯಾನಿಟೈಸರ್ ರೂಪುಗೊಳಿಸುವಿಕೆಯಲ್ಲಿ ಮಾರ್ಗದರ್ಶನ ನೀಡಿದ ಉಪನ್ಯಾಸಕಿ ಉಷಾ ಮುರಳೀಧರ್ ಹಾಗೂ ವಿಭಾಗದ ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು.

ಸೆನ್ಸಾರ್ ಮೂಲಕ ಕಾರ್ಯನಿರ್ವಹಣೆ:
ವಿದ್ಯಾರ್ಥಿ ಪ್ರಸನ್ನ ರೂಪಿಸಿರುವ ಈ ಸ್ಯಾನಿಟೈಸರ್ ಯಂತ್ರವನ್ನು ಸುಮಾರು ಮೂರು ಸಾವಿರ ರೂಪಾಯಿಯೊಳಗೆ ನಿರ್ಮಿಸಬಹುದಾಗಿದ್ದು, ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ವ್ಯಕ್ತಿಯು ಕೈಚಾಚಿದ ತಕ್ಷಣ ಈ ಸಲಕರಣೆಯ ಸೆನ್ಸಾರ್ ಒಳಗಿರುವ ಪಂಪ್‌ಗೆ ಮಾಹಿತಿ ರವಾನಿಸಿ ಅದು ತನ್ನಿಂತಾನೇ ಚಾಲನೆಗೊಳ್ಳುವಂತೆ ಮಾಡುತ್ತದೆ. ತಕ್ಷಣ ವ್ಯಕ್ತಿಯ ಕೈಗೆ ನಿಗದಿತ ಪ್ರಮಾಣದ ಸ್ಯಾನಿಟೈಸರ್ ದ್ರಾವಣ ಬಿಡುಗಡೆಗೊಳ್ಳುತ್ತದೆ. ಈ ಸ್ಯಾನಿಟೈಸರ್ ಯಂತ್ರವು ಬಹೂಪಯೋಗಿಯಾಗಿದ್ದು ಯಾವುದೇ ಸಂಸ್ಥೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಅಥವಾ ಯಾವುದೇ ಕಡೆಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ. ಇದರಿಂದ ಈಗ ಹೆಚ್ಚು ಪ್ರಚಲಿತದಲ್ಲಿರುವ ಸ್ಯಾನಿಟೈಸರ್ ಯಂತ್ರದಂತೆ ವ್ಯಕ್ತಿಯು ತಾನೇ ಕೈ ಅಥವಾ ಕಾಲಿನಿಂದ ಅದುಮಿ ಸ್ಯಾನಿಟೈಸರ್ ಬಳಸುವ ಅವಶ್ಯಕತೆ ಇರುವುದಿಲ್ಲ. ಕೈಚಾಚಿದರೆ ಸಾಕಾಗುತ್ತದೆ. ವಿದ್ಯಾರ್ಥಿ ಪ್ರಸನ್ನ ಬಾಲ್ಯದಿಂದಲೂ ಅನೇಕ ಪ್ರಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ವಿವಿಧ ಮಾದರಿಗಳನ್ನು ರೂಪಿಸಿದ ಅನುಭವ ಹೊಂದಿದ್ದಾರೆ. ಮೂಲತಃ ಪೆರ್ಲದ ಸ್ವರ್ಗ ನಿವಾಸಿಯಾಗಿರುವ ಇವರು ವಿಭಾಗದ ಉಪನ್ಯಾಸಕಿ ಉಷಾ ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಹಾಗೂ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್, ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಜಿ. ಭಟ್ ಅವರ ಬೆಂಬಲದೊಂದಿಗೆ ಈ ಯಂತ್ರವನ್ನು ರೂಪಿಸಿದ್ದಾರೆ. ಕೇವಲ ಒಂದೇ ದಿನದಲ್ಲಿ ಈ ಯಂತ್ರವನ್ನು ತಯಾರಿಸಿ ಪ್ರಸನ್ನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಇದೊಂದು ಜನೋಪಯೋಗಿ ಯಂತ್ರವಾಗಿದೆ. ಪ್ರಸ್ತುತ ಯಂತ್ರದಲ್ಲಿ ಆರು ನೂರು ಎಂ.ಎಲ್. ನಷ್ಟು ಸ್ಯಾನಿಟೈಸರ್ ಅನ್ನು ಶೇಖರಿಸಿಡಬಹುದು. ಇದಕ್ಕಿಂತ ಹೆಚ್ಚು ಅಗತ್ಯವಿದ್ದಲ್ಲಿ ಯಂತ್ರದ ಗಾತ್ರವನ್ನು ಹೆಚ್ಚಿಸಬಹುದು’  – ಪ್ರಸನ್ನ ಕುಮಾರ್

About The Author

Related posts

1 Comment

  1. ಶ್ರೀನಿವಾಸ ಸ್ವರ್ಗ

    ಗುಡ್. ಅಭಿಮಾನವಿದೆ ಪ್ರಸನ್ನನ ಕುರಿತಾಗಿ. ಅಭಿನಂದನೆಗಳು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.