Home_Page_Advt
Home_Page_Advt
Home_Page_Advt

ರಾಜಕೀಯ ಗುರು ಜನಾರ್ದನ ಪೂಜಾರಿರವರನ್ನು ಭೇಟಿಯಾಗಿ ಆರ್ಶೀವಾದ ಪಡೆದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಾಲನ ಸೇವಾ ಟ್ರಸ್ಟ್ ಅಧ್ಯಕ್ಷ, ಬಿಲ್ಲವ ಸಮಾಜದ ಮುಖಂಡ, ಬಿಜೆಪಿ ಮುಂದಾಳು ಹರಿಕೃಷ್ಣ ಬಂಟ್ವಾಳ ರವರು ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ರಾಜಕೀಯ ಗುರು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು. ಜೂ.೧೫ರಂದು ಅಧಿಕಾರ ಸ್ವೀಕರಿಸಿದ ಬಳಿಕ ಜೂ.೧೭ರಂದು ತವರೂರಿಗೆ ಅಗಮಿಸಿರುವ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ರವರು ಮೊದಲಿಗೆ ಬಿ.ಸಿ.ರೋಡು ಸಮೀಪದ ಬಸ್ತಿಪಡ್ಪುವಿನಲ್ಲಿರುವ ಹಿರಿಯ ನೇತಾರರು, ಕೇಂದ್ರ ಸರಕಾರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಕಾಲಿಗೆ ಪ್ರಣಾಮ ಸಲ್ಲಿಸಿ ಆರ್ಶೀವಾದ ಪಡೆದರು.

ತಮ್ಮ ಶಿಷ್ಯ ಹರಿಕೃಷ್ಣ ಬಂಟ್ವಾಳರನ್ನು ಆರ್ಶೀವದಿಸಿದ ಜನಾರ್ದನ ಪೂಜಾರಿಯವರು ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಹುದ್ದೆ ದೊರಕಲಿ ಎಂದು ಹಾರೈಸಿದರು. ಬಹು ಸಮಯದ ಬಳಿಕ ಮುಖಾಮುಖಿಯಾದ ಗುರು-ಶಿಷ್ಯರು ಕೆಲಹೊತ್ತು ಕುಶಲೋಪಚರಿಯನ್ನು ನಡೆಸಿದರು. ಪೂಜಾರಿಯವರು ಸಂಸ್ಥೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡು ಜಿಲ್ಲೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.

ಹರಿಕೃಷ್ಣ ಬಂಟ್ವಾಳ ಅವರು ಸುಮಾರು ೩೫ ವರ್ಷಗಳ ಕಾಲ ಜನಾರ್ದನ ಪೂಜಾರಿಯವರ ಒಡನಾಡಿಯಾಗಿದ್ದುಕೊಂಡು ರಾಜಕೀಯ ಗರಡಿಯಲ್ಲಿ ಪಳಗಿದವರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅವರು ಮರಳಿ ತಮ್ಮ ತವರು ಪಕ್ಷ ಬಿಜೆಪಿಗೆ ಬಂದಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.