HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ‘ಮಾಸ್ಕ್ ದಿನ’ – ಪಾದಯಾತ್ರೆ ಮೂಲಕ ಜನ ಜಾಗೃತಿ

Puttur_Advt_NewsUnder_1
Puttur_Advt_NewsUnder_1
  • ಮಾಸ್ಕ್ ಸರಿಯಾದ ರೀತಿಯಲ್ಲಿ ಧರಿಸಿ-ಡಾ. ಯತೀಶ್ ಉಳ್ಳಾಲ್
  • ಪ್ರತಿ ಮನೆ ಮನೆಗೂ ಜಾಗೃತಿ ಆಗಬೇಕು – ರಾಧಾಕೃಷ್ಣ ಬೋರ್ಕರ್
  • ನಗರಸಭೆಯಿಂದ ಮೈಕ್ ಜಾಗೃತಿ – ರೂಪಾ ಶೆಟ್ಟಿ

ಪುತ್ತೂರು: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜೂ. 18ರಂದು ರಾಜ್ಯದಾದ್ಯಂತ ಪಾದಯಾತ್ರೆ ಕೈಗೊಂಡು ‘ಮಾಸ್ಕ್ ದಿನ’ ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸುವಂತೆ ರಾಜ್ಯ ಸರಕಾರ ನೀಡಿದ ಆದೇಶದಂತೆ ಪುತ್ತೂರಿನಲ್ಲೂ ಪಾದಯಾತ್ರೆಯ ಮೂಲಕ ಜನ ಜಾಗೃತಿ ನಡೆಯಿತು. ಬೆಳಿಗ್ಗೆ ಪುತ್ತೂರು ದರ್ಬೆ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಕಂದಾಯ ಹಾಗೂ ನಗರಸಭೆ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಅವರು ಚಾಲನೆ ನೀಡಿದರು.

 


ಮಾಸ್ಕ್ ಸರಿಯಾದ ರೀತಿಯಲ್ಲಿ ಧರಿಸಿ:
ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ರಾಜ್ಯದಾದ್ಯಂತ ನಡೆಯುವ ೨೬ ಜಯಂತಿಗಳ ಸಾಲಿಗೆ ಹೊಸದಾಗಿ ಹೊಸ ಜಯಂತಿಯೊಂದು ಸೇರ್ಪಡೆಗೊಂಡಿರುವುದು ನಮ್ಮ ಸುರಕ್ಷತೆಯ ಅಗತ್ಯವಾದ ಮಾಸ್ಕ್ ದಿನ. ಮಾಸ್ಕ್ ನಮ್ಮ ಆರೋಗ್ಯ ರಕ್ಷಣೆಯ ಅತ್ಯಂತ ಮುಖ್ಯ ಸುರಕ್ಷತಾ ಮಾರ್ಗ. ನಮಗೆ ಬೇರೆಯನ್ನು ನಿಯಂತ್ರಿಸಲು ಆಗುವುದಿಲ್ಲ. ನಮ್ಮ ರಕ್ಷಣೆ ನಾವೆ ಮಾಡಿಕೊಳ್ಳಬೇಕು. ಕಳೆದ ೩ ತಿಂಗಳನ್ನು ಸುರಕ್ಷತೆಯಿಂದ ಕಳೆದಿದ್ದೇವೆ. ಹಾಗಾಗಿ ಮುಂದೆಯೂ ಸುರಕ್ಷಾ ದೃಷ್ಟಿಯಿಂದ ಮಾಸ್ಕ್ ಧರಿಸಿ. ಸರಿಯಾದ ರೀತಿಯಲ್ಲಿ ಧರಿಸಿ ಎಂದು ಹೇಳಿದರು.


ಪ್ರತಿ ಮನೆ ಮನೆಗೂ ಜಾಗೃತಿ ಆಗಬೇಕು:
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧ ನಡೆದ ಸಂಘರ್ಷದ ವೇಳೆ ಹುತಾತ್ಮರಾದ ೨೦ ಭಾರತೀಯ ಯೋಧರನ್ನು ನೆನಪಿಸಿದ ಅವರು ನಮ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಬೇಕಾದರೆ ನಾವೆಲ್ಲ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕಂದು ವಿನಂತಿಸಿದರು. ಜೊತೆಗೆ ಕೋವಿಡ್ -೧೯ ಮಹಾಮಾರಿಯಿಂದ ಬಚಾವಾಗಲು ಮಾಸ್ಕ್ ಒಂದು ದಿನಕ್ಕೆ ಸೀಮಿತವಾಗದೆ ದಿತ್ಯ ಆರೋಗ್ಯದ ರಕ್ಷಣೆಯ ಕಾಳಜಿ ಇರಲಿ. ಈ ಕುರಿತು ಪ್ರತಿ ಮನೆ ಮನೆಗೂ ಜಾಗೃತಿ ಆಗಬೇಕು. ಆಗ ಅರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ ಎಂದರು.

 


ನಗರಸಭೆಯಿಂದ ಮೈಕ್ ಜಾಗೃತಿ:
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಸರಕಾರ ನೀಡಿದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಬಳಸುವುದು ಮತ್ತು ಅಂತರ ಕಾಯ್ದು ಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆ, ಸೋಪಿನಿಂದ ಕೈ ತೊಳೆಯುವುದರ ಕುರಿತು ಜಾಗೃತಿ ಕಾರ್ಯಕ್ರಮ ನಗರಸಭೆ ಪ್ರತಿವಾರ್ಡ್‌ನಲ್ಲಿ ನಗರಸಭೆ ಸ್ವಚ್ಛತಾ ವಾಹನ ಮೈಕ್ ಅನೌನ್ಸ್‌ಮೆಂಟ್ ಮಾಡಲಾಗುತ್ತದೆ. ಸ್ವಚ್ಛತಾ ವಾಹನ ಪ್ರತಿ ವಾರ್ಡ್‌ನಲ್ಲಿ ಮನೆಗಳಿಗೆ ತೆರಳುವ ವೇಳೆ ತ್ಯಾಜ್ಯ ವಿಲೇವಾರಿ ಜಾಗೃತಿಯನ್ನು ಈ ಹಿಂದೆ ಮೂಡಿಸಲಾಗುತ್ತಿತ್ತು. ಇದೀಗ ಹೊಸದಾಗಿ ಕೊರೋನಾ ಮುನ್ನೆಚ್ಚರಿಕೆ ಕ್ರಮದ ಕುರಿತು ಜಾಗೃತಿ ಸಂದೇಶ ನೀಡಲಾಗುವುದು ಎಂದು ಹೇಳಿದರು. ದರ್ಬೆಯಲ್ಲಿ ಸಾಂಕೇತಿಕವಾಗಿ ಪಾದಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ವಿದ್ಯಾ ಆರ್ ಗೌಡಿ, ಶೀನಪ್ಪ ನಾಯ್ಕ್, ಪದ್ಮನಾಭ ನಾಕ್, ಮಮತಾರಂಜನ್, ಯೂಸೂಫ್, ಶಶಿಕಲಾ ಸಿ.ಎಚ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಪುತ್ತೂರು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಉಪತಹಸೀಲ್ದಾರ್ ರಾಮಣ್ಣ ನಾಯ್ಕ್, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.