Home_Page_Advt
Home_Page_Advt
Home_Page_Advt

ಸವಣೂರಿನಲ್ಲಿ ಸುಳ್ಯ ಮಂಡಲ ಬಿಜೆಪಿ ಸಮಿತಿ ಹಾಗೂ ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಮಾಸ್ಕ್ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯ ಸರಕಾರದ ಆದೇಶದಂತೆ ಜೂ.18 ರಂದು ಸವಣೂರು ಯುವ ಸಭಾಭವನದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಹಾಗೂ ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ತದ ವತಿಯಿಂದ ಮಾಸ್ಕ್ ದಿನಾಚರಣೆ ನಡೆಯಿತು. ಸುಳ್ಯ ಮಂಡಲ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ ಮಾಸ್ಕ್ ಧರಿಸುವುದು ನಮ್ಮ ಮುಖ್ಯ ಹವ್ಯಾಸ ಆಗಬೇಕು. ಕೇವಲ ಪೋಲೀಸ್ ರು ದಂಡ ವಿಧಿಸುತ್ತಾರೆ ಎಂಬ ಕಾರಣಕ್ಕೆ ಮಾಸ್ಕ್ ಧಾರಣೆ ಸರಿ ಅಲ್ಲ. ಮಾಸ್ಕ್ ಧರಿಸುವುದರಿಂದ ಅನೇಕ ಸೊಂಕುಗಳಿಂದ ನಾವು ದೂರ ಉಳಿಯ ಬಹುದು. ಮುಂದಿನ ದಿನಗಳಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಮೂಲ ತತ್ವದೊಂದಿಗೆ ನಾವು ಜಾಗೃತರಾಗೋಣ ಎಂದು ಹೇಳಿ.ಮಾಸ್ಕ್ ದಿನಾಚರಣೆಯನ್ನು ನಾವು ಇಲ್ಲಿ ಬಿಜೆಪಿ ಪಕ್ಷದಿಂದ ಮಾಡುತ್ತಿದ್ದೇವೆ.ಇದು ಎಲ್ಲರಿಗೂ ಮಾದರಿಯಾಗಲಿ ಎಂದರು.

ಸಮಾರಂಭದಲ್ಲಿ ದಯಾನಂದ ಮೆದು, ಉದ್ಯಮಿ ಸುರೇಶ್ ರೈ ಸೂಡಿಮುಳ್ಳು. ಗ್ರಾ.ಪಂ.ಸದಸ್ಯೆ ಗಾಯತ್ರಿ ಬರೆಮೇಲು. ನ್ಯಾಯವಾದಿಗಳಾದ ಮಹೇಶ್ ಕೆ.ಸವಣೂರು. ಪ್ರವೀಣ್ ಬಂಬಿಲ. ಸವಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ. ನಿರ್ದೇಶಕರುಗಳಾದ ಪ್ರಜ್ವಲ್ ಕೆ.ಆರ್.ಕೋಡಿಬೈಲು.ಪ್ರೇಮ ಚಂದ್ರ ಮೆದು. ಯುವ ಮುಂದಾಳುಗಳಾದ ಸಚಿನ್ ಸವಣೂರು. ಗಂಗಾಧರ ಪೆರಿಯಡ್ಕ. ಸಂಪತ್ ಕುಮಾರ್ ಇಂದ್ರ ಸೊಂಪಾಡಿ. ಸುಬ್ರಹ್ಮಣ್ಯ ಬರೆಪ್ಪಾಡಿರವರುಗಳು ಉಪಸ್ಥಿತರಿದ್ದರು. ಸುಳ್ಯ ಬಿಜೆಪಿ ಮಂಡಲ ಸಮಿತಿಯ ಕಾರ್ಯದರ್ಶಿ ಇಂದಿರಾ ಬಿ.ಕೆ.ಸ್ವಾಗತಿಸಿ. ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.