HomePage_Banner
HomePage_Banner
HomePage_Banner
HomePage_Banner

ಜೂ.21: ಖಂಡ ಗ್ರಾಸ ಸೂರ್ಯಗ್ರಹಣ

Puttur_Advt_NewsUnder_1
Puttur_Advt_NewsUnder_1

ಯೋ ಸೌ ವಜ್ರಧರ ದೇವಃ ಆದಿತ್ಯಾನಾಂಪ್ರಭು ಮತಃ |
ಸಹಸ್ರ ನಯನಃ ಶಕ್ರೋ ಗ್ರಹ ಪೀಡಾಂ ವ್ಯಪೋಹತು||

 
21-06-2020ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10-06 ರಿಂದ ಮಧ್ಯಾಹ್ನ ಗಂ 1.23 ನಿಮಿಷದ ತನಕ ಸೂರ್ಯನಿಗೆ ರಾಹು ಗ್ರಹಣ ಸಂಭವಿಸುವುದು. ಮೃಗಶಿರ ನಕ್ಷತ್ರ, ಆರ್ಧ್ರಾ ನಕ್ಷತ್ರ, ಮಿಥುನ ರಾಶಿಯಲ್ಲಿ ಗ್ರಹಣವಾಗುವುದು. ಮಿಥುನ, ಕರ್ಕಟಕ, ವೃಶ್ಚಿಕ, ಮಕರ ರಾಶಿಯವರಿಗೆ ಅರಿಷ್ಟವಿದೆ. ಅಂದರೆ ಮೃಗಶಿರ, ಆರ್ಧ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ವಿಶಾಖ, ಅನುರಾದ, ಜ್ಯೇಷ್ಠ, ಉತ್ತರಾಷಾಢ, ಶ್ರವಣ, ಧನಿಷ್ಠ ನಕ್ಷತ್ರದವರಿಗೆ ಅರಿಷ್ಟವಿದೆ. ಯಥಾ ಶಕ್ತಿ ಆದಿತ್ಯ ಜಪ, ರಾಹು ಜಪ, ಶಾಂತಿಹೋಮ ಮಾಡಿ ಪರಿಹಾರ ಮಾಡಿಕೊಳ್ಳತಕ್ಕದು. ಗ್ರಹಣ ಕಾಲ ಪುಣ್ಯಕಾಲ. 3 ಗಂ, 17 ನಿಮಿಷ ಇದೆ. ಸಿದ್ಧಿ ಮಂತ್ರಗಳ ಜಪ ಮಾಡಬೇಕು. ಎಳ್ಳೆಣ್ಣೆ ದೇವಸ್ಥಾನಕ್ಕೆ ಕೊಡಬೇಕು. ಈ ವರ್ಷ ವಿಶ್ವಕ್ಕೆ ಬಂದಿರುವ ಮಹಾಮಾರಿ ಕೊರೋನಾದಂತಹ ಎಲ್ಲಾ ಖಾಯಿಲೆಗಳು ದೂರವಾಗಿ ಆರೋಗ್ಯಪ್ರಾಪ್ತಿಗೆ ವಿಶೇಷ ಪ್ರಾರ್ಥನೆಯನ್ನು ಮಾಡಿ ರುದ್ರಾಭಿಷೇಕ ಸಂಕಲ್ಪ ಮಾಡಿ ರೂ. 51 ಕಾಣಿಕೆಯನ್ನು ಗ್ರಹಣದ ಮರುದಿನ ಮಹಾಲಿಂಗೇಶ್ವರ ದೇವರ ದಿವ್ಯ ಭಂಡಾರಕ್ಕೆ ಆರ್ಪಿಸಿದಲ್ಲಿ ಗ್ರಹಣ ದೋಷ ಪರಿಹಾರದೊಂದಿಗೆ ಇಡೀ ದೇಶಕ್ಕೆ ಜನರಿಗೆ ಮತ್ತು ಪ್ರಾಣಿ ಸಂಕುಲಕ್ಕೆ ಬಂದಿರುವ ಗಂಡಾಂತರ ದೂರವಾಗಲು ಮಹಾಲಿಂಗೇಶ್ವರನ ಅನುಗ್ರಹ ಪ್ರಾಪ್ತಿಯಾಗಲಿದೆ.

ಗ್ರಹಣದ ಆಚರಣೆ: ಗ್ರಹಣದ ಸ್ಪರ್ಶದ ಮೊದಲು ಸ್ನಾನ, ಮಂತ್ರ ಜಪ, ಹೋಮ, ದಾನ ಪುನಃ ಸ್ನಾನ, ಸ್ತ್ರೀಯರು ಕಂಠದವರೆಗೆ ಸ್ನಾನ. ಗ್ರಹಣದ ಮೋಕ್ಷಾ ನಂತರ ತಲೆಗೆ ಸ್ನಾನ, ನಂತರ ಆಹಾರ ಸೇವನೆ ಮಾಡಬೇಕು. ಎಣ್ಣೆಯಲ್ಲಿ ಕಾಯಿಸಿದ, ಬೇಯಿಸಿದ ಪದಾರ್ಥಗಳು, ಅನ್ನ ಇತ್ಯಾದಿಗಳು ಅಶುದ್ಧ. ಮೊಸರು, ತುಪ್ಪ, ಹಾಲು ಇತ್ಯಾದಿ ಪದಾರ್ಥಗಳಿಗೆ ತುಳಸಿ, ದರ್ಬೆ ಹಾಕಿ ಇಡಬೇಕು.

ಜಪ ಮಂತ್ರಗಳು: ಗಾಯತ್ರಿ ಮಂತ್ರ, ಸಿದ್ಧಿ ಮಂತ್ರಗಳು, ‘ರಾಹುವೇ ನಮಃ ಮತ್ತು ಆದಿತ್ಯಾಯ ನಮ:’ ವನ್ನು 1008 ಬಾರಿ ಪಠಿಸಬೇಕು. ವಿಶ್ವಕ್ಕೆ ಬಂದಿರುವ ಮಹಾಮಾರಿ ಕೊರೋನಾ, ಹಂದಿಜ್ವರ, ಡೆಂಗ್ಯು ಜ್ವರ ಇತ್ಯಾದಿ ಅರಿಷ್ಟಗಳು ಪರಿಹಾರ ಆಗುವುದಕ್ಕೆ ಲಯ ಕರ್ತ ಶಿವನ ಪರಮಾನುಗ್ರಹಕ್ಕೆ ಓಂ ನಮಃ ಶಿವಾಯ ಎಂದು 1008 ಸಲ ಜಪಿಸಬೇಕು.

ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಈ ಬಾರಿ ಶಾಂತಿಹೋಮ ಇಲ್ಲದಿರುವುದರಿಂದ ಮನೆಯಲ್ಲಿಯೇ ದೇವರ ಮುಂದೆ ದೀಪ ಬೆಳಗಿಸಿ ಜಪ ಮಾಡಿ ಮರುದಿನ ಸೋಮವಾರ ದೇವಾಲಯಕ್ಕೆ ರುದ್ರಾಭಿಷೇಕ ಸೇವೆಯ ಕಾಣಿಕೆ ಸಹಿತ ಕಾಣಿಕೆ ಡಬ್ಬಿಗೆ ಅರ್ಪಿಸಬೇಕು. ಬೆಳಿಗ್ಗೆ ಗಂಟೆ 7.30ಕ್ಕೆ ಪ್ರಾತಃ ಕಾಲ ಪೂಜೆ, ನಂತರ ಗಂಟೆ 9.15ಕ್ಕೆ ಮದ್ಯಾಹ್ನ ಪೂಜೆ ನಡೆಯಲಿದ್ದು, ಬಳಿಕ ಬಾಗಿಲು ಹಾಕಲಾವುದು. ಸಂಜೆ ಗಂಟೆ 4 ರಿಂದ ಗಂಟೆ 7.30ರ ರಾತ್ರಿ ಪೂಜೆ ನಡೆಯಲಿದೆ.
ಲೋಕಾಃ ಸಮಸ್ತಾ ಸುಖಿನೋ ಭವಂತು

ಎ.ವಸಂತ ಕೆದಿಲಾಯ, ಪ್ರಧಾನ ಅರ್ಚಕರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.