Home_Page_Advt
Home_Page_Advt
Home_Page_Advt

ನೆಲ್ಯಾಡಿ: ಮಾಸ್ಕ್ ದಿನಾಚರಣೆ, ಉಚಿತ ಮಾಸ್ಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಗ್ರಾಮ ಪಂಚಾಯಿತಿ ನೆಲ್ಯಾಡಿ, ಗ್ರಾಮ ಪಂಚಾಯಿತಿ ಕೌಕ್ರಾಡಿ, ಪೊಲೀಸ್ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಬೆಥನಿ ವಿದ್ಯಾ ಸಂಸ್ಥೆ, ವರ್ತಕ ಸಂಘ ನೆಲ್ಯಾಡಿ ಹಾಗೂ ಜೇಸಿಐ ನೆಲ್ಯಾಡಿ ಇದರ ಸಹಕಾರದೊಂದಿಗೆ ಮಾಸ್ಕ್ ದಿನಾಚರಣೆ, ಉಚಿತ ಮಾಸ್ಕ್ ವಿತರಣೆ ಹಾಗೂ ಕೋವಿಡ್ ೧೯ ಜನಜಾಗೃತಿ ಅಭಿಯಾನ ಜೂ.೧೮ರಂದು ನಡೆಯಿತು.

ನೆಲ್ಯಾಡಿ ಗ್ರಾ.ಪಂ.ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವ ಮಾಸ್ಕ್ ದಿನಾಚರಣೆಯೊಂದಿಗೆ ಉಚಿತ ಮಾಸ್ಕ್ ವಿತರಣೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸಾ ಚರ್ಚ್ ಮುಂದಾಗಿರುವುದು ಶ್ಲಾಘನೀಯ. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಇದೊಂದು ತಾಲೂಕು, ಜಿಲ್ಲೆಗೆ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ. ಆದರ್ಶ್ ಜೋಸೆಫ್‌ರವರು ಮಾತನಾಡಿ, ಕೋವಿಡ್ ೧೯ ತಡೆಯುವ ನಿಟ್ಟಿನಲ್ಲಿ ಅರೋಗ್ಯ ಇಲಾಖೆ ನೀಡುವ ನಿರ್ದೇಶನಗಳನ್ನು ಶಿಸ್ತು ಬದ್ಧವಾಗಿ ಪಾಲಿಸಬೇಕು. ಮುಂದಿನ ಕೆಲ ತಿಂಗಳುಗಳ ಕಾಲ ಕೋವಿಡ್ ೧೯ ಜೊತೆಗೆ ಹೋರಾಟ ಮಾಡಿ ಬದುಕಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಸ್ವಯಂ ಜಾಗೃತರಾಗಿರುವ ಮೂಲಕ ಕೋವಿಡ್ ೧೯ ಬರದಂತೆ ಜಾಗೃತೆ ವಹಿಸೋಣ ಎಂದರು. ರೆ.ಫಾ ಸನಿಷ್ ಜೋಸೆಫ್, ರೆ.ಫಾ. ಮಾಥ್ಯು ಪ್ರಫುಲ್, ಜೋಸ್ ಕೆ.ಜೆ, ಟಾಮ್ ಎಂ.ಸ್., ಜಯೇಶ್ ವಿ.ಜೆ., ಜೋಸೆಫ್ ವಿ.ಜೆ., ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಸದಸ್ಯರುಗಳಾದ ಜಯಾನಂದ ಬಂಟ್ರಿಯಾಲ್, ಅಬ್ದುಲ್ ರಹಿಮಾನ್, ಮೋಹಿನಿ, ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ, ಸಹಶಿಕ್ಷಕರಾದ ವಿಮಲ್‌ಕುಮಾರ್, ಮೇರಿಜಾನ್, ಉಮಾವತಿ, ಶ್ರೀಮತಿ ಪ್ರವೀಣ, ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಶ್ರೀಮತಿ ಸೂಸನ್ ಮತ್ತಿತರರು ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ.ಕಾರ್ಯದರ್ಶಿ ದೇವರಾಜ್‌ರವರು ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

೬೫೦೦ಕ್ಕೂ ಹೆಚ್ಚು ಮಾಸ್ಕ್ ವಿತರಣೆ:
ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಇಲ್ಲಿಯ ತನಕ ಒಟ್ಟು ೬೫೦೦ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಪೊಲೀಸ್ ಇಲಾಖೆಗಾಗಿ ಡಿವೈಎಸ್‌ಪಿ ದಿನಕರ ಶೆಟ್ಟಿಯವರ ಮೂಲಕ ೩ ಸಾವಿರ ಮಾ1ಸ್ಕ್, ನೆಲ್ಯಾಡಿಯ ವರ್ತಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆಗೂ ಮಾಸ್ಕ್ ವಿತರಿಸಲಾಯಿತು. ಇಚ್ಲಂಪಾಡಿ, ಆರ್ಲ, ನೆಲ್ಯಾಡಿ ವ್ಯಾಪ್ತಿಯಲ್ಲಿ ಚರ್ಚ್‌ನ ಸದಸ್ಯರಿಗೆ ಮನೆ ಮನೆಗೆ ಮಾಸ್ಕ್ ವಿತರಿಸಲಾಗಿದೆ. ಒಟ್ಟು ೬೩೦೦ ಮಾಸ್ಕ್ ತಯಾರಿಸಲಾಗಿದ್ದು ಎಲ್ಲವೂ ವಿತರಣೆ ಮಾಡಲಾಗಿದೆ ಎಂದು ಜೋಸ್ ಕೆ.ಜೆ.,ರವರು ತಿಳಿಸಿದ್ದಾರೆ.

೧೩೦೦ ಮಾಸ್ಕ್ ವಿತರಣೆ:
ಮಾಸ್ಕ್ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ನೆಲ್ಯಾಡಿ ಪೇಟೆಯಲ್ಲಿ ಸುಮಾರು ೧೩೦೦ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ನೆಲ್ಯಾಡಿ ಗ್ರಾ.ಪಂ.ಆವರಣದಿಂದ ಆರಂಭಗೊಂಡ ಜನಜಾಗೃತಿ ಅಭಿಯಾನ ನೆಲ್ಯಾಡಿ ಪೇಟೆ ಮೂಲಕ ಕೌಕ್ರಾಡಿ ಗ್ರಾ.ಪಂ.ಕಚೇರಿಯ ತನಕ ತೆರಳಿ ಅಲ್ಲಿಂದ ಪೇಟೆಯ ಮೂಲಕ ಹಿಂತಿರುಗಿ ಬಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಬಳಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ವರ್ತಕರಿಗೆ, ಸಾರ್ವಜನಿಕರಿಗೆ, ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುತ್ತಿದ್ದ ವಾಹನ ಚಾಲಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಕೋವಿಡ್ ೧೯ ಕುರಿತ ಕರಪತ್ರವೂ ಹಂಚಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.