HomePage_Banner
HomePage_Banner
HomePage_Banner

ದ.ಕ.ಜಿಲ್ಲಾ ಇಲಾಖಾ ಸಮಸ್ಯೆಗಳ ಚರ್ಚೆಯಲ್ಲಿ ಶಾಸಕ ಮಠಂದೂರು | ಒಂದು ತಿಂಗಳೊಳಗೆ ನಗರಸಭೆ ಸಮಸ್ಯೆಗಳ ಇತ್ಯರ್ಥ -ಸಚಿವರ ಭರವಸೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಾಭಿವೃಧ್ಧಿ ಮತ್ತು ಪೌರಾಡಳಿತ ಇಲಾಖೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃಧ್ಧಿ ಶುಲ್ಕ ಪಾವತಿ, ಕಟ್ಟಡ ಪರವಾನಿಗೆ,ತಂತ್ರಜ್ಞಾನ, ಕಟ್ಟಡ ಪರವಾನಿಗೆ ಮತ್ತು ಖಾತೆ ನೀಡಲು ಇರುವ ಸಮಸ್ಯೆಗಳ ಕುರಿತು ನಗರಾಭಿವೃಧ್ಧಿ ಸಚಿವ ಬಿ ಎ ಬಸವರಾಜರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದ.ಕ.ಜಿಲ್ಲೆಯ ಕುರಿತು ಸಮಗ್ರ ಚರ್ಚೆಯಲ್ಲಿ ಒಂದು ತಿಂಗಳೊಳಗೆ ಖಾತಾ ಮತ್ತು ನಗರಸಭೆ ಸಮಸ್ಯೆಗಳ ಕುರಿತು ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಸಂಜೀವ ಮಠಂದೂರು ಅವರು ದಕ್ಷಿಣಕನ್ನಡ ಜಿಲ್ಲೆಯ ಇಲಾಖೆಯ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಈ ಸಂದರ್ಭ ಸಚಿವರು ಮಾತನಾಡಿ ಒಂದು ತಿಂಗಳೊಳಗೆ ಖಾತಾ, ನಗರಸಭೆ ಸಮಸ್ಯೆಗಳ ಕುರಿತು ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಪೌರಾಡಳಿತ ಸಚಿವ ಕೆ.ಸಿ.ನಾರಾಯಣ ಗೌಡ, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಮುಜರಾಯಿ ಮತ್ತು ದ.ಕ.ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್ ಅಂಗಾರ ಸೇರಿದಂತೆ ದ.ಕ ಜಿಲ್ಲೆಯ ಶಾಸಕರುಗಳು ಪುತ್ತೂರು ಅಸೋಸಿಯೇಶನ್ ಆಫ್ ಇಂಜಿನಿಯರ್‍ಸ್‌ನ ಪದಾಧಿಕಾರಿಗಳು, ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.