HomePage_Banner
HomePage_Banner
HomePage_Banner

ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ | ಭಾರತ್ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
  • ಭಾರತ್ ಸ್ಕೌಟ್ಸ್, ಗೈಡ್ಸ್‌ನಿಂದ ದೊಡ್ಡ ಶಕ್ತಿ ಲಭಿಸಿದೆ – ಬಿ.ಇ.ಒ ಲೋಕೇಶ್ ಸಿ
  • ಕೋವಿಡ್‌ನಿಂದ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ – ರೇ ವಿಜಯ ಹಾರ್ವೀನ್
  • ಪರೀಕ್ಷಾ ಕೇಂದ್ರದಲ್ಲಿ ಮೊದಲು ನಾವಿರಬೇಕು – ಅಬ್ರಹಂ ವರ್ಗೀಸ್
  • ಶಾಲೆ ಆರಂಭ ಆಗುವ ತನಕ ನಿರಂತರ ಸೇವೆ – ವಿದ್ಯಾ ಆರ್ ಗೌರಿ

ಪುತ್ತೂರು: ಜೂ.೨೫ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಣೆ ಕಾರ್ಯವು ರಾಜ್ಯಾದ್ಯಂತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ವತಿಯಿಂದ ನಡೆಯುತ್ತಿದ್ದು, ಜೂ. 19ರಂದು ಪುತ್ತೂರು ಸ್ಥಳೀಯ ಸಂಸ್ಥೆಯಿಂದ ಪುತ್ತೂರಿನ ವಿದ್ಯಾರ್ಥಿಗಳಿಗಾಗಿ ೫೨೦೦ ಮಾಸ್ಕ್‌ಗಳನ್ನು ಇಲ್ಲಿನ ಸಂತ ವಿಕ್ಟರ್ ಬಾಲಿಕ ಪ್ರೌಢಶಾಲಾ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಸ್ತಾಂತರಿಸಲಾಯಿತು.

ಭಾರತ್ ಸ್ಕೌಟ್ಸ್, ಗೈಡ್ಸ್‌ನಿಂದ ದೊಡ್ಡ ಶಕ್ತಿ ಲಭಿಸಿದೆ:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಅವರು ಮಾತನಾಡಿ ಕೊವೀಡ್ -೧೯ ನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಭಯವಿದೆ. ಆದರೆ ಆ ಭಯವನ್ನು ನಿವಾರಿಸಲು ಮತ್ತು ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ದೊಡ್ಡ ಶಕ್ತಿ ನಮಗೆ ಲಭಿಸಿದೆ. ಇದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ ಅವರು ಈಗಾಗಲೇ ಪಿಯುಸಿ ಪರೀಕ್ಷೆ ನಡೆದಿರುವುದು ನಮಗೆ ಒಂದು ರೀತಿಯಲ್ಲಿ ಪಾಠ ಮಾಡಿದಂತೆ. ಅಲ್ಲಿ ಏನೆನೂ ನೆಗೆಟಿವ್ ಕಂಡುಕೊಂಡಿದ್ದೇವೋ ಅದನ್ನು ನಾವು ಸರಿ ಮಾಡಬೇಕು. ನಿಮ್ಮ ಸ್ವಯಂ ಸೇವಕರೊಂದಿಗೆ ನಮ್ಮಲ್ಲಿನ ಸಿಬಂದಿಗಳು ಕೂಡಾ ಸಹಕಾರ ನೀಡಲಿದ್ದಾರೆ. ಹಾಗಾಗಿ ಸ್ವಯಂ ಸೇವಕರಾಗಿ ಭಾಗವಹಿಸುವವರ ಆರೋಗ್ಯ ಉತ್ತಮವಾಗಿರಬೇಕು, ಮೊದಲು ನಿಮಗೆ ಥರ್ಮಲ್ ಸ್ಕ್ಯಾನ್ ಮಾಡಬೇಕು. ಪರೀಕ್ಷೆ ಮುಗಿದ ಬಳಿಕ ಸಂಖ್ಯೆ ಪ್ರಕಾರ ವಿದ್ಯಾರ್ಥಿಗಳು ಹೊರಗೆ ಹೋಗಲು ಅವಕಾಶ ಮಾಡಬೇಕು. ಅನಗತ್ಯವಾಗಿ ಪರೀಕ್ಷಾ ಕೊಠಡಿಗೆ ಹೋಗುವು ಅಗತ್ಯವಿಲ್ಲ, ಮೊಬೈಲ್ ಪೋನ್ ಬಳಸುವಂತಿಲ್ಲ, ಮೊಬೈಲ್ ಸ್ವಾಧಿನಾದಿಕರಿಗಳಿಗೆ ಮೊಬೈಲ್ ಹ್ಯಾಂಡೋವರ್ ಮಾಡಬೇಕು ಒಟ್ಟಿನಲ್ಲಿ ಶೇಕಡ ನೂರು ಲೋಪದೋಷ ಇಲ್ಲದೆ ಪರೀಕ್ಷೆ ನಡೆಯಬೇಕು. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.

ಕೋವಿಡ್‌ನಿಂದ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಪುತ್ತೂರು ಇದರ ಅಧ್ಯಕ್ಷ ರೇ ವಿಜಯ ಹಾರ್ವಿನ್ ಅವರು ಮಾತನಾಡಿ ಪರೀಕ್ಷಾ ಕೇಂದ್ರಗಳಿಗೆ ಸ್ವಯಂ ಸೇವಕರಾಗಿ ಭಾಗವಹಿಸುವ ಸೌಭಾಗ್ಯ ನಮಗೆ ಸಿಕ್ಕಿದೆ. ಆದರೆ ಇಲ್ಲಿ ಮಕ್ಕಳನ್ನು ಕೋವಿಡ್ ರಾಕ್ಷಸನಿಂದ ರಕ್ಷಿಸುವ ದೊಡ್ಡ ಜವಾಬ್ದಾರಿ ಎಂದು ತಿಳಿದು ಕೊಂಡು ಉತ್ತಮ ಕೆಲಸ ನಿರ್ವಹಿಸಬೇಕೆಂದು ಹೇಳಿದ ಅವರು ನಾವು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಯ ಶಸ್ತ್ರಸಜ್ಜಿತರಾಗಿರಬೇಕು. ಯಾವುದೇ ಭಯ ಇಲ್ಲದೆ ಸಿದ್ದತೆಯಿಂದ ಶಶಕ್ತನಾಗಿ ಕೋವಿಡ್‌ನೊಂದಿಗೆ ಹೋರಾಟ ಮಾಡೋಣಾ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಮೊದಲು ನಾವಿರಬೇಕು:
ಸ್ಕೌಟ್ಸ್ ಮತ್ತುಗೈಡ್ಸ್‌ನ ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಅಬ್ರಹಂ ವರ್ಗೀಸ್ ಅವರು ಮಾತನಾಡಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರುವ ಮುಂದೆ ನಮ್ಮ ಉಪಸ್ಥಿತಿ ಮುಖ್ಯ. ಭಯವಿಲ್ಲದೆ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂದರು.

ಶಾಲೆ ಆರಂಭ ಆಗುವ ತನಕ ನಿರಂತರ ಸೇವೆ:
ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ ಅವರು ಸ್ವಾಗತಿಸಿ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಮಾಸ್ಕ್ ವಿತರಣ ಮಾಡಲಾಗುತ್ತಿದೆ. ಪುತ್ತೂರು ಮತ್ತು ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯಿಂದ ಜಂಟಿಯಾಗಿ ಪುತ್ತೂರಿನ ೧೨ ಸೆಂಟರ್‌ಗಳಲ್ಲಿ ಹಾಜಾರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಪರೀಕ್ಷಾ ಸಂದರ್ಭ ೧೨ ಕೇಂದ್ರಗಳಲ್ಲೂ ಪುತ್ತೂರಿನಿಂದ ೧೨೫ ಮಂದಿ ಸ್ವಯಂ ಸೇವಕರು ಸೇವಾ ಕಾರ್ಯ ನೀಡಲಿದ್ದಾರೆ. ಶಾಲೆ ಆರಂಭ ಆಗುವ ತನಕ ನಮ್ಮ ಸೇವೆ ನಿರಂತರ ನಡೆಯಲಿದೆ ಎಂದರು. ಈಗಾಗಲೇ ಕೋವಿಡ್ ಸಮಯದಲ್ಲೂ ಸಾಕಷ್ಟು ಮಕ್ಕಳು ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೋವರ್ ಮತ್ತು ರೇಂಜರ್‍ಸ್‌ಗಳು ಸರಕಾರಿ ಆನ್‌ಲೈನ್ ಮೂಲಕ ತರಬೇತಿ ಪಡೆದಿದ್ದಾರೆ. ಕಬ್ಸ್ ಮತ್ತು ಬುಲ್‌ಬುಲ್ ಸುಮಾರು ೨೫೦ ಮಕ್ಕಳು ಪ್ರಾಜೆಕ್ಟ್ ಪೂರ್ಣಗೊಳಿಸಿದ್ದಾರೆ ಎಂದರು.

ಕೋವಿಡ್ ವಾರಿಯರ್ಸ್ ಆಗಿ ಸೇವೆ:
ಸ್ಕೌಟ್ ಮತ್ತು ಗೈಡ್ಸ್‌ನ ಜಿಲ್ಲಾ ಕೋ ಆರ್ಡಿನೇಟರ್ ಭರತ್‌ರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಪುತ್ತೂರಿನಲ್ಲಿ ನಮ್ಮ ಸಂಸ್ಥೆಯಿಂದ ೩ ಮಂದಿ ನೋಡೆಲ್ ಅಧಿಕಾರಿಗಳು ಮತ್ತು ಪ್ರತಿ ಸೆಂಟರ್ ನಲ್ಲಿ ೧೨ ನಾಯಕರು ಕಾರ್ಯನಿರ್ವಹಿಸಲಿದ್ದಾರೆ. ಪುತ್ತೂರು ತಾಲೂಕಿನಲ್ಲೇ ಅತೀ ಹೆಚ್ಚು ಮಂದಿ ಸ್ವಯಂ ಸೇವಕರಾಗಿದ್ದು, ಒಂದು ರೀತಿಯಲ್ಲಿ ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುವ ಸೌಭಾಗ್ಯ ಲಭವಿಸಿದೆ ಎಂದರು. ಕೋವಿಡ್ -೧೯ ನೋಡೆಲ್ ತ್ಯಾಗಮ್ ಮರೆಕಳ, ಜಿಲ್ಲಾ ವಿಭಾಗದ ಆಯೋಗ ತರಬೇತಿ ಆಯುಕ್ತ ಪ್ರತೀಮ್ ಕುಮಾರ್ ಅವರು ಮಾತನಾಡಿ ಸ್ವಯಂ ಸೇವಕರು ಪರೀಕ್ಷಾ ಕೇಂದ್ರದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕೆಂದು ವಿವರಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷ ಅಶ್ವಿನ್ ರೈ, ಉಮಾ ಡಿ ಪ್ರಸನ್ನ, ಉಪ್ಪಿನಂಗಡಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ವೃಂದ, ಸ್ಥಳೀಯ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ನೇಮಕಗೊಂಡ ತಾಲೂಕು ನೋಡೆಲ್‌ಗಳಾದ ದೀಪಿಕಾ, ದಿವ್ಯ, ಪ್ರೇಮ, ಸೈಂಟ್ ವಿಕ್ಟರ್ ಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋ ಉಪಸ್ಥಿತರಿದ್ದರು. ಜಿಲ್ಲಾ ತರಬೇತುದಾರ ಶಿಕ್ಷಕಿ ಸುನಿತ ವಂದಿಸಿದರು. ಗೈಡ್ ಕ್ಯಾಪ್ಟನ್ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.