ಯಶಸ್ಸಿನ ಹಾದಿಗೆ ಪೂರ್ಣ ಸಹಕಾರ -ಶಶಿಕುಮಾರ್ ರೈ ಬಾಳ್ಯೊಟ್ಟು
ಪುತ್ತೂರು: ಸಂಘ ಸಂಸ್ಥೆ ಅಭಿವೃದ್ಧಿಯತ್ತ ಸಾಗಲು ಸೇವಾ ಮನೋಭಾವನೆ ಮತ್ತು ವಿಶ್ವಾಸ ಮುಖ್ಯ. ಈ ನಿಟ್ಟಿನಲ್ಲಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮರ್ ರೈ ಬಾಳ್ಯೊಟ್ಟು ಅವರು ಹೇಳಿದರು.
ಎಪಿಎಂಸಿ ರಸ್ತೆಯಲ್ಲಿನ ಮಾಣಾಯಾರ್ಚ್ ಸಂಕೀರ್ಣದಲ್ಲಿ ಸ್ವಂತ ಕಟ್ಟಡಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ ಮತ್ತು ಪುತ್ತೂರು ಶಾಖೆಯಲ್ಲಿ ಜೂ. ೧೯ರಂದು ಸ್ವಂತ ಕಟ್ಟಡದಲ್ಲಿ ನಡೆದ ಪ್ರಥಮ ಆಡಳಿತ ಮಂಡಳಿ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಚಿದಾನಂದ ಬೈಲಾಡಿ ಅವರ ತಂದೆ ದಿ.ಬಾಬು ಗೌಡ ಅವರು ನನಗೆ ಸಹಕಾರಿ ಕ್ಷೇತ್ರಕ್ಕೆ ಕಾಲಿಡುವ ನಿಟ್ಟಿನಲ್ಲಿ ನನಗೆ ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗದರ್ಶನದಿಂದ ಮುಂದಿನ ದಿನಗಳಲ್ಲಿ ಉತ್ತಮ ಸಹಕಾರಿ ರಂಗದಲ್ಲಿ ಉತ್ತಮ ಸೇವೆ ಮಾಡಲು ಅವಕಾಶ ಲಭಿಸಿದೆ. ಪ್ರಸ್ತುತ ದಿನದಲ್ಲಿ ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸ್ವಂತ ಕಟ್ಟಡಕ್ಕೆ ಬರುವಾಗ ಎಲ್ಲಿಯೋ ಐಟಿಬೀಟಿಗೆ ಕಾಲಿಟ್ಟ ಹಾಗೆ ಆಗುತ್ತಿದೆ. ಇಂತಹ ಉತ್ತಮ ವ್ಯವಸ್ಥೆಯ ಅಡಿಯಲ್ಲಿ ಸಂಸ್ಥೆ ಬೆಳೆದಿರುವುದು ಸಂತೋಷದ ವಿಚಾರ. ಹಾಗಾಗಿ ಸಂಸ್ಥೆಗೂ ನಮ್ಮ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಆರ್ಥಿಕ ಕೊಡುಗೆಯೊಂದನ್ನು ನೀಡುವ ಕುರಿತು ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ವಂದಿಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶಿವರಾಮ ಇಡ್ಯಪೆ, ನಾಗೇಶ್ ನಳಿಯಾರು, ವೆಂಕಟ್ರಮಣ ಗೌಡ ಕರೆಂಕಿ, ಶಾಂತಪ್ಪ ಗೌಡ ಪಿಜಕ್ಕಳ, ಜಿನ್ನಪ್ಪ ಗೌಡ ಮಳುವೇಲು, ನೇತ್ರಾವತಿ ಕೆ.ಪಿ ಗೌಡ, ರೇಖಾ ರಾಘವ ಗೌಡ, ರಾಮಕೃಷ್ಣ ಗೌಡ ಕರ್ಮಲ, ಮಂಜುನಾಥ ಎನ್.ಎಸ್, ಸಲಹಾ ಸಮಿತಿಸದಸ್ಯರಾದ ರವಿ ಮುಂಗ್ಲಿಮನೆ, ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿ, ಪ್ರವೀಣ್ ಕುಂಟ್ಯಾನ, ಗೌರಿ ಬನ್ನೂರು, ಬಬು ಗೌಡ ಬಂಡಾರದ ಮನೆ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು. ಶಾಖಾ ಮೆನೇಜರ್ ತೇಜಸ್ವಿನಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.