HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಕಸರತ್ತು

Puttur_Advt_NewsUnder_1
Puttur_Advt_NewsUnder_1
  • ಮುಳಿಯ ಕೇಶವ ಪ್ರಸಾದ್, ಬೆಟ್ಟ ಕೃಷ್ಣಪ್ರಸಾದ್, ರಾಮದಾಸ್ ಗೌಡ, ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ವೀಣಾಕ್ಷಿ ಬನ್ನೂರು, ರಾಧಾಕೃಷ್ಣ ರೈ ಕುರಿಯ ಆಯ್ಕೆ ಬಹುತೇಕ ಖಚಿತ
  • ಅಸಮಾಧಾನಿತ ಅಭಿಮಾನಿಗಳನ್ನು ಸಮಾಧಾನ ಪಡಿಸಿದ ಡಾ.ಎಂ.ಕೆ.ಪ್ರಸಾದ್
  • ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ಸಭೆ
  • ಶಾಸಕರ ನೇತೃತ್ವದಲ್ಲಿ ಇನ್ನೊಂದು ಸಭೆ

ಪುತ್ತೂರು: ದೇಶ ವಿದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನವಾಗಿ ಸದಸ್ಯರಾಗಿ ಯಾರೆಲ್ಲಾ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಇದೀಗ ಗರಿಗೆದರಿದೆ.
ಹತ್ತೂರು ಕೊಟ್ಟರೂ ಪುತ್ತೂರು ಬಿಡೆ ಎಂಬ ಮಾತಿದೆ. ಮಹಾಲಿಂಗೇಶ್ವರ ದೇವರಿಗೆ ಪುತ್ತೂರ ಒಡೆಯ ಎಂಬ ಕೀರ್ತಿ ಇದೆ. ಹೀಗಾಗಿ ನಂಬಿದವರಿಗೆ ಇಂಬು ಕೊಡುವ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವುದೆಂದರೆ ಅದು ಭಕ್ತಿಯ ವಿಷಯವೂ ಹೌದು, ಪ್ರತಿಷ್ಠೆಯ ವಿಚಾರವೂ ಹೌದು. ಪುತ್ತೂರಿನ ಸೀಮೆ ದೇವರಾದ ಆರಾಧ್ಯ ಮೂರ್ತಿ ಮಹಾಲಿಂಗೇಶ್ವರ ದೇವರ ಆರಾಧನೆಯ ಮುಂದಾಳತ್ವ ವಹಿಸಿಕೊಳ್ಳುವ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗುವವರು ಯಾರು, ಅಧ್ಯಕ್ಷರಾಗಿ ಆಯ್ಕೆಯಾಗುವವರು ಯಾರೆಂಬ ವಿಚಾರ ಈಗಿನ ಚರ್ಚೆಯ ವಿಷಯವಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಈಗಾಗಲೇ ೪೬ ಅರ್ಜಿಗಳು ಸಲ್ಲಿಕೆಯಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಧಾರ್ಮಿಕ ಪರಿಷತ್ ಮೂಲಕ ನಡೆಸಲಾಗುತ್ತದೆ. ದೇವಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ಇರುವುದಿಲ್ಲ ನಿಜ. ಆದರೆ, ಯಾವ ಸರಕಾರ ಇದೆ, ಯಾವ ಪಕ್ಷದ ಶಾಸಕರು ಇರುತ್ತಾರೆ ಎಂಬ ಹಿನ್ನೆಲೆಯಲ್ಲಿಯೇ ಈ ಆಯ್ಕೆಗಳು ನಡೆಯುತ್ತದೆ. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿ ಬೆಂಬಲಿತರೇ ಬಹುತೇಕವಾಗಿ ಆಯ್ಕೆಯಾಗುತ್ತಾರೆ. ಆದ್ದರಿಂದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖರು ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯಾರೆಲ್ಲ ಅರ್ಜಿ ಸಲ್ಲಿಸಬೇಕು, ಯಾರ ಹೆಸರು ಪುರಸ್ಕರಿಸಬೇಕು, ಯಾರನ್ನು ತಿರಸ್ಕರಿಸಬೇಕು ಎಂಬುದರ ಕುರಿತು ಈಗಾಗಲೇ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖರ ನಡುವೆ ಚರ್ಚೆ ನಡೆದಿದೆ. ಪ್ರತಿಷ್ಠಿತ ಮುಳಿಯ ಜುವೆಲ್ಲರ್ಸ್ ನ ಛೇರ್ಮೆನ್ ಕೇಶವ ಪ್ರಸಾದ್, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ದೇವಿ ಬೆಟ್ಟದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಬೆಟ್ಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಐತ್ತಪ್ಪ ನಾಯ್ಕ, ನಿವೃತ್ತ ಅಧಿಕಾರಿ ರಾಮದಾಸ ಗೌಡ ನೆಲ್ಲಿಕಟ್ಟೆ, ದರ್ಬೆ ನಿವಾಸಿ ರಾಮಚಂದ್ರ ಕಾಮತ್, ವೀಣಾಕ್ಷಿ ಬನ್ನೂರು, ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ಹೆಸರು ಬಹುತೇಕ ಅಂತಿಮಗೊಂಡಿದೆ ಎಂದು ಹೇಳಲಾಗಿದೆ. ಶೇಖರ ನಾರಾವಿ, ರಾಜೇಶ್ ಬನ್ನೂರು, ಹರೀಶ್ ಪೈಯವರ ಹೆಸರು ಕೇಳಿ ಬರುತ್ತಿದೆ. ದೇವಸ್ಥಾನದ ಅರ್ಚಕರಲ್ಲಿ ಓರ್ವರು ಸಹಜವಾಗಿ ಸಮಿತಿಯಲ್ಲಿ ಅವಕಾಶ ಪಡೆಯುತ್ತಾರೆ. ಜೂನ್ 30ರೊಳಗೆ ಈ ಎಲ್ಲಾ ಪ್ರಕ್ರಿಯೆಗಳು ಅಂತಿಮಗೊಳ್ಳಲಿದೆ.

ಪಟ್ಟಿಯಲ್ಲಿ ಡಾ.ಎಂ.ಕೆ. ಪ್ರಸಾದ್ ಹೆಸರಿಲ್ಲ…! ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಹೋರಾಟದ ಎಚ್ಚರಿಕೆ | ಡಾ. ಪ್ರಸಾದ್‌ರ ಸ್ಪಷ್ಟನೆಯಿಂದ ತಣ್ಣಗಾದ ಆಕ್ರೋಶ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಹೆಸರು ಅಂತಿಮಗೊಳಿಸಿ ಈ ಹಿಂದೆ ಮಾಡಿರುವ ಪಟ್ಟಿಯಲ್ಲಿ ಡಾ.ಎಂ.ಕೆ.ಪ್ರಸಾದ್‌ರವರ ಹೆಸರಿಲ್ಲ ಎಂಬುದು ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಪುತ್ತೂರಿನ ಹಿಂದೂ ಹೃದಯ ಸಾಮ್ರಾಟ್ ಆಗಿರುವ ಡಾ.ಪ್ರಸಾದ್‌ರವರನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ(ಟ್ರಸ್ಟ್) ಪಟ್ಟಿಯಿಂದ ರಿಜೆಕ್ಟ್ ಮಾಡಿ ಅದೆಷ್ಟೋ ಯುವಕರಲ್ಲಿ ನಿರಾಶೆಯನ್ನುಂಟು ಮಾಡಿದ್ದಾರೆ ಎಂದು ಧನ್ಯಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಚಿನ್ಮಯ್ ಈಶ್ವರಮಂಗಲ, ಸಂತೋಷ್ ಕುಮಾರ್ ಕೈಕಾರ, ಅಕ್ಷಯ್ ರೈ, ರವೀಂದ್ರ ಬನ್ನೂರು, ಚೌಕಿದಾರ್ ಗಣೇಶ್ ಗೌಡ, ಹರೀಶ್ ವಾಣಿಯನ್ ಹರಿ, ಎಸ್. ವಿ. ರಮೇಶ್ ರಾವ್, ಅಶೋಕ್ ಜಾಗರಣ, ಸುಖೇಶ್ ನಾಯಕ್, ಸಹನ್ ರೈ ಮುನ್ನ, ಕುಂತಿಪುತ್ರ ಕರ್ಣ, ಶ್ರೀಧರ ಎಂ. ಶ್ರೀಭ್ರಾಮರಿ, ದಿನೇಶ್ ಮುರುವ, ಪುನೀತ್ ರೈ ಸಿ. ಎಚ್, ಶ್ಯಾಮ್ ಪ್ರಸಾದ್ ಶ್ಯಾಮ್ ಪ್ರಸಾದ್, ಪಡ್ಡು ವಶಿಷ್ಠ, ಗಣೇಶ್ ರಾಜ್, ಉಮೇಶ್ ಮುಳುವೇಳು, ಕೃಷ್ಣ ಕುಮಾರ್, ಸುಂದರ ಶೆಟ್ಟಿ, ಶಿವಪ್ರಸಾದ್ ಶಿವು, ಗಣೇಶ್ ಬದಿನಾರು, ಹರೀಶ್ ಗೌಡ ಕಾಣಿಯೂರು, ಕೇಶವ ಗೌಡ, ಸುಪ್ರೀತ್ ರೈ, ಉಷಾಕಿರಣ್ ಉಷಾಕಿರಣ್, ಸುಧೀರ್ ನಾಯಕ್ ಪುತ್ತೂರು, ಆರ್.ಕೆ. ಅಡಿಗ, ಚಂದ್ರ ಕಡೋಡಿ, ಶರತ್ ಆಳ್ವ, ಸದಾಶಿವ ಭಂಡಾರಿ, ವೇಣುಗೋಪಾಲ ಕೆಮತ್ತಡ್ಕ, ಜನಾರ್ದನ ಪೂಜಾರಿ ಜೆ. ಪಿ., ಮಾಧವ ರೈ, ಶಿವರಾಮ ಆಳ್ವ, ರವೀಂದ್ರ ಬೆಳ್ಳಾರೆ, ಜಗನ್ನಾಥ ರೈಯವರು ಸೇರಿದಂತೆ ಹಲವು ಮಂದಿ ಡಾ.ಎಂ.ಕೆ.ಪ್ರಸಾದ್‌ರವರ ಪರ ಕಮೆಂಟ್ ಮಾಡಿದ್ದಾರೆ. ಸಂಬಂಧಪಟ್ಟವರು ತಕ್ಷಣ ವ್ಯವಸ್ಥಾಪನಾ ಸಮಿತಿಗೆ ಪ್ರಸಾದ್ ಭಂಡಾರಿಯವರನ್ನು ಆಯ್ಕೆ ಮಾಡಲೇಬೇಕು ಒಂದು ವೇಳೆ ಸಂಬಂಧಪಟ್ಟವರು ಮೌನ ವಹಿಸಿದರೆ ಹೋರಾಟ ಎಂದು ನವೀನ್ ಕುಮಾರ್ ರೈ ಪನಡ್ಕ ಕೈಕಾರ ಪುತ್ತೂರು ಕುವೈಟ್‌ರವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ಹಾಗೂ ತನ್ನ ಹೆಸರು ಕೈಬಿಟ್ಟು ಹೋಗಿರುವ ಈ ವಿಚಾರವನ್ನು ವಿವಾದವನ್ನಾಗಿಸುವುದು ಬೇಡ, ಇಲ್ಲಿಗೇ ಬಿಟ್ಟು ಬಿಡೋಣ, ಹಿಂದುತ್ವಕ್ಕಾಗಿ ಒಗ್ಗಟ್ಟಾಗಿಯೇ ಇರೋಣ ಎಂದು ಹೇಳಿ ತನ್ನ ಬೆಂಬಲಿಗರನ್ನು ಡಾ. ಎಂ.ಕೆ. ಪ್ರಸಾದ್‌ರವರು ಸಮಾಧಾನ ಪಡಿಸಿದ್ದಾರೆ.

ಸಮಾಧಾನ ಪಡಿಸಿದ ಡಾ.ಎಂ.ಕೆ.ಪ್ರಸಾದ್:
ವ್ಯವಸ್ಥಾಪನಾ ಸಮಿತಿಯ ಸದಸ್ಯರ ಆಯ್ಕೆ ಮಾಡುವ ವೇಳೆ ಡಾ.ಎಂ.ಕೆ.ಪ್ರಸಾದ್ ರವರ ಹೆಸರು ಕೈ ಬಿಡಲಾಗಿದೆ ಎಂದು ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನಕ್ಕೆ ಆಯ್ಕೆ ಮಾಡಲು ಇಂತಿಂತವರು ಅರ್ಜಿ ಸಲ್ಲಿಸಬೇಕು ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರ ನಡುವೆ ಚರ್ಚೆ ನಡೆದಾಗ ಡಾ. ಎಂ.ಕೆ.ಪ್ರಸಾದರವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವವರನ್ನು ಸ್ವತಃ ಡಾ. ಪ್ರಸಾದ್ ರವರೇ ಸಮಾಧಾನ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದುತ್ವಕ್ಕಾಗಿ ತ್ಯಾಗ ಮಾಡಿರುವ, ಹಿಂದೂ ಸಂಘಟನೆಗಳನ್ನು ಬೆಳೆಸಲು ತನು ಮನ ಧನದ ಸಹಕಾರ ನೀಡಿರುವ ಫೈರ್ ಬ್ರಾಂಡ್ ಡಾ. ಎಂ.ಕೆ.ಪ್ರಸಾದ್ ರವರನ್ನು ಬಿಜೆಪಿ ಮತ್ತು ಆರ್.ಎಸ್.ಎಸ್. ಕಡೆಗಣಿಸಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದ ವೇಳೆ ಕಮೆಂಟ್ ಹಾಕಿರುವ ಸಂತೋಷ್ ರೈ ಕೈಕಾರ ಸಹಿತ ಹಲವರನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆಗಿರುವ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ನಡೆದ ಸಂಘ ಪರಿವಾರದ ಬೈಠಕ್ ನಲ್ಲಿ ಮನವೊಲಿಸಲಾಗಿದೆ. ಖುದ್ದಾಗಿ ಡಾ. ಪ್ರಸಾದ್ ರವರೂ ಈ ಬಗ್ಗೆ ಯಾವುದೇ ಭಿನ್ನ ಅಭಿಪ್ರಾಯ, ಚರ್ಚೆ ಬೇಡ ಎಂದು ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ. ಡಾ. ಪ್ರಸಾದ್ ರವರ ಹಿರಿತನಕ್ಕೆ ಬೆಲೆ ಕೊಟ್ಟಿದ್ದೇವೆ, ಅವರ ಮಾರ್ಗದರ್ಶನ ಪಡೆದಿದ್ದೇವೆ, ದೇವಸ್ಥಾನದ ಸಮಿತಿಯಲ್ಲಿ ಇರಬೇಕೆಂದು ಕೇಳಿಕೊಂಡಿದ್ದೇವೆ, ಅವರಾಗಿಯೇ ಬೇಡ ಎಂದು ಹೇಳಿದ ಕಾರಣ ಅವರ ಹೆಸರು ಕೈ ಬಿಡಲಾಗಿದೆ ಹೊರತು ಡಾಕ್ಟರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆಗಿರುವ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕರವರು ಸೇರಿದಂತೆ ಸಂಘ ಪರಿವಾರದ ಪ್ರಮುಖರು ಸಂಘಟನೆಯ ಕಾರ್ಯಕರ್ತರ ಮನವೊಲಿಸುತ್ತಿದ್ದಾರೆ. ಆದರೆ, ಡಾ.ಪ್ರಸಾದರವರು ನನ್ನನ್ನು ಯಾರೂ ಸಂಪರ್ಕಿಸಿಲ್ಲ, ದೇವಳದ ಸಮಿತಿಗೆ ಆಯ್ಕೆ ಮಾಡುವುದಾಗಿ ಹೇಳಿಲ್ಲ, ಆದರೆ, ಈ ವಿಚಾರವನ್ನು ವಿವಾದವನ್ನಾಗಿಸುವುದು ಬೇಡ, ಇಲ್ಲಿಗೇ ಬಿಟ್ಟು ಬಿಡೋಣ, ಹಿಂದುತ್ವಕ್ಕಾಗಿ ಒಗ್ಗಟ್ಟಾಗಿಯೇ ಇರೋಣ ಎಂದು ಅರುಣ್ ಕುಮಾರ್ ಪುತ್ತಿಲ, ಸಂತೋಷ್ ರೈ ಕೈಕಾರ, ಚಿನ್ಮಯ ರೈ, ಧನ್ಯಕುಮಾರ್ ಬೆಳಂದೂರು ಮುಂತಾದವರನ್ನು ಸಮಾಧಾನಿಸಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಯ ಬಿರುಸು ಕಡಿಮೆಯಾಗಿದೆ.

ಮುರಳಿಕೃಷ್ಣ ಹಸಂತಡ್ಕ ಸಭೆ
ದೇವಸ್ಥಾನಕ್ಕೆ ಸದಸ್ಯರ ಆಯ್ಕೆಗೆ ಸಂಬಂಧಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಡಾ. ಪ್ರಸಾದ್ ರವರ ವಿಚಾರವೂ ಚರ್ಚೆಗೆ ಬಂದಿದೆ. ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುವವರನ್ನು ಸಮಾಧಾನ ಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ವಿಧಾನಸಭೆಯ ಚುನಾವಣೆಯ ವೇಳೆ ಅಭ್ಯರ್ಥಿಯ ಆಯ್ಕೆಯಾಗುವ ವೇಳೆ ಅಸಮಾಧಾನಿತರಾಗುವವರನ್ನು ಸಮಾಧಾನ ಪಡಿಸಲು ಪಕ್ಷದಿಂದ ನಿಯೋಜಿಸಲ್ಪಟ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದ ಮುರಳಿಕೃಷ್ಣ ಹಸಂತಡ್ಕರವರನ್ನು ಬೆಂಗಳೂರಿನಿಂದ ದೂರವಾಣಿ ಮೂಲಕ ಸಂಪರ್ಕಿಸಿರುವ ಶಾಸಕ ಸಂಜೀವ ಮಠಂದೂರುರವರು ನಾನು ಬಂದು ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ನೇತೃತ್ವದಲ್ಲಿ ಸಭೆ ನಡೆದು ಪಟ್ಟಿ ಅಂತಿಮವಾಗಲಿದೆ. ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಗ್ರಾಮಾಂತರ ಮಂಡಲ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರ ಹೆಸರು ಈ ಸಂದರ್ಭದಲ್ಲಿ ಪರಿಗಣಿಸಲ್ಪಡುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.