Home_Page_Advt
Home_Page_Advt
Home_Page_Advt

ಬಲ್ನಾಡು-ಕಲ್ಲಾಜೆ-ನೆಕ್ಕರೆ ರಸ್ತೆಯಲ್ಲಿ ಕಾದಿದೆ ದೊಡ್ಡ ಅನಾಹುತ | ಕೆಸರುಮಯಗೊಂಡ ರಸ್ತೆಯನ್ನು ತುರ್ತು ದುರಸ್ತಿ ಮಾಡಿಸಿ ಅಪಾಯ ತಪ್ಪಿಸಿ

Puttur_Advt_NewsUnder_1
Puttur_Advt_NewsUnder_1
  • ರಸ್ತೆ ಅಗಲೀಕರಣ ಮಾಡಿದ್ದಾರೆ, ಚರಂಡಿ ವ್ಯವಸ್ಥೆ ಮಾಡಲಿಲ್ಲ -ಸ್ಥಳೀಯರ ಆಕ್ರೋಶ

 

@ಶರತ್ ಆಳ್ವ ಚನಿಲ

ಪುತ್ತೂರು: ಅಭಿವೃದ್ದಿ ಕಾರ್ಯಗಳು ಎಷ್ಟೇ ನಡೆದರೂ ಕೂಡ ಕೆಲವು ಕಡೆ ರಸ್ತೆಗಳ ಸಂಪರ್ಕ, ಅಸಮರ್ಪಕ ರಸ್ತೆಗಳ ದುರಸ್ತಿ, ರಸ್ತೆ ಅಗಲೀಕರಣಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಬಲ್ನಾಡು-ಕಲ್ಲಾಜೆ-ನೆಕ್ಕರೆ ರಸ್ತೆ.

ತಾಲೂಕಿನಿಂದ ಬಪ್ಪಳಿಗೆ, ಬಲ್ನಾಡು, ಕಲ್ಲಾಜೆ, ನೆಕ್ಕರೆ, ಚನಿಲಕ್ಕೆ ಸಂಪರ್ಕಿಸುವ ಜಿ.ಪಂ ರಸ್ತೆ ಮಳೆಯಿಂದ ಹದೆಗೆಟ್ಟಿದ್ದು ಕೆಸರಿನಿಂದ ವಾಹನ ಸಂಚಾರ ಅಸಾಧ್ಯವಾಗಿದೆ. ಈ ರಸ್ತೆಯ ಕಲ್ಲಾಜೆ ಎಂಬಲ್ಲಿ 4 ತಿಂಗಳ ಹಿಂದೆ ರಸ್ತೆ ಅಗಲೀಕರಣ ಮಾಡಲಾಗಿದ್ದು ಅದು ಅರ್ಧದಲ್ಲೇ ಬಾಕಿಯಾಗಿದ್ದು ಒಳಚರಂಡಿ ವ್ಯವಸ್ಥೆ ಇಲ್ಲದೇ ಮಣ್ಣೆಲ್ಲ ರಸ್ತೆಯಲ್ಲೇ ಸೇರಿ ಕೆಸರಾಗಿ ಬದಲಾವಣೆಯಾಗಿದೆ. ಇಲ್ಲಿ ಸಂಚರಿಸುವ ವಾಹನಗಳು ಮುಂದಕ್ಕೆ ಸಂಚರಿಸಲಾಗದೆ ಹಿಂದಿರುಗಿದ ಘಟನೆ ನಡೆದಿದೆ.

ಗದ್ದೆಯಾಗಿ ಮಾರ್ಪಟ್ಟಿದೆ ಈ ರಸ್ತೆ…!

ಎಡೆಬಿಡೆದ ಮಳೆಯಿಂದಾಗಿ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡಗಳಲ್ಲಿ ನೀರು ತುಂಬಿದ್ದು ಗದ್ದೆಯಾಗಿ ಮಾರ್ಪಟಾಗಿದೆ. ಭತ್ತ ಬಿತ್ತನೆ ಮಾಡಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಪರಿಸ್ಥಿತಿ ತೀರಾ ಹದೆಗೆಟ್ಟಿದೆಯಾದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಲಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಕಳಪೆ ಕಾಮಾಗಾರಿ ನಡೆದಿದೆ:
ಕೆಲವು ತಿಂಗಳ ಹಿಂದೆಯಷ್ಟೇ ಸೃಷ್ಟಿಯಾಗಿದ್ದ ಹೊಂಡಗಳನ್ನು ತೇಪೆ ಹಾಕಿ ಮುಚ್ಚಲಾಗಿತ್ತು ಆದರೆ ಕಳಪೆ ಕಾಮಗಾರಿ ಮಾಡಿದ್ದ ಕಾರಣದಿಂದಲೇ ರಸ್ತೆಯಲ್ಲಿ ಪುನಃ ಹೊಂಡಗಳು ಸೃಷ್ಟಿಯಾಗಿದೆ. ನೆಕ್ಕರೆಯ ಬಳಿ ರಸ್ತೆ ಅಗಲೀಕರಣ ಆಗಲಿಲ್ಲ, ಹೊಂಡವೂ ಇರುವುದರಿಂದ ಅಲ್ಲಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ. 


………………………………………………………………
ಲಾಕ್ ಡೌನ್ ನಿಂದಾಗಿ ರಸ್ತೆ ದುರಸ್ತಿ ಮಾಡಲಾಗಲಿಲ್ಲ. ರಸ್ತೆಯ ಅವ್ಯವಸ್ಥೆಯನ್ನು ನೋಡಿದ್ದೇವೆ. ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು ಕೂಡಲೇ ತುರ್ತು ದುರಸ್ಥಿ ಮಾಡಲು ಎಂಜಿನಿಯರಿಗೆ ತಿಳಿಸಿದ್ದೇನೆ.ಶಯನಾ ಜಯಾನಂದ, ಜಿಲ್ಲಾ ಪಂಚಾಯತ್ ಸದಸ್ಯರು
……………………………………………………………….
ರಸ್ತೆಯನ್ನು ಆದಷ್ಟು ಬೇಗನೆ ಸರಿಪಡಿಸಿ. ರಸ್ತೆ ಮಧ್ಯೆ ಕೆಸರು ತುಂಬಿ ಹೋಗಿದ್ದು ವಾಹನ ಸಂಚಾರಕ್ಕೆ, ನಡೆದು ಹೋಗುವವರಿಗೂ ಸಮಸ್ಯೆ ಆಗಿದೆ. ರಸ್ತೆ ಅಗಲೀಕರಣ ಮಾಡಿದ್ದಾರೆ. ಆದರೆ ಒಳಚರಂಡಿ ವ್ಯವಸ್ಥೆ ಮಾಡಿಲ್ಲದ ಕಾರಣ ಮಣ್ಣು ರಸ್ತೆಯಲ್ಲಿ ರಾಶಿ ಬಿದ್ದು ಕೆಸರುಮಂiiವಾಗಿದೆ. ಬೈಕ್ ಸವಾರರೊಬ್ಬರೂ ರಸ್ತೆಯಲ್ಲಿ ಜಾರಿ ಬಿದ್ದ ಪ್ರಸಂಗವೂ ಇದೆ. ಕಳಪೆ ಕಾಮಾಗಾರಿ ನಡೆದು ಕೆಲವು ಕಡೆ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು ಅಲ್ಲಿಯೂ ಮಳೆನೀರು ನಿಂತಿದೆ. ಕುಕ್ಕಪ್ಪ ಗೌಡ ಕಲ್ಲಾಜೆ, ಸ್ಥಳೀಯ ನಿವಾಸಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.