HomePage_Banner
HomePage_Banner
HomePage_Banner

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಮೂಲಸ್ಥಾನದಲ್ಲಿ ಶುಕ್ರವಾರದ ಪೂಜೆ | ಭಕ್ತರು ನೀಡಿದ ಬೆಳ್ಳಿಯ ಆರತಿಯಲ್ಲಿ ಪೂಜೆ ಸ್ವೀಕರಿಸಿದ ಶ್ರೀ ಉಳ್ಳಾಲ್ತಿಯಮ್ಮ

Puttur_Advt_NewsUnder_1
Puttur_Advt_NewsUnder_1
  • ಕೊರೊನಾ ಮಹಾಮಾರಿ ತೊಲಗಲು ಅಮ್ಮನಲ್ಲಿ ವಿಶೇಷ ಪ್ರಾರ್ಥನೆ
  • ಭಕ್ತಾದಿಗಳಿಂದ ಬೆಳ್ಳಿಯ ಆರತಿ ಸಮರ್ಪಣೆ
  • ಪ್ರತಿ ಶುಕ್ರವಾರ ಮಧ್ಯಾಹ್ನ ವಿಶೇಷ ಪೂಜೆ

@ ಶರತ್ ಆಳ್ವ ಚನಿಲ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಕಾರಣಿಕದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಂತರ ಪ್ರತೀ ಶುಕ್ರವಾರವೂ ವಿಶೇಷ ಪೂಜೆ ಆರಂಭವಾಯಿತು. ಆದರೆ ಈ ವಾರ ಭಕ್ತರಿಂದ ಬೆಳ್ಳಿಯ ಆರತಿ ಪಡೆದು ಪೂಜೆ ಸ್ವೀಕರಿಸಿಕೊಂಡದ್ದು ವಿಶೇಷವಾದ ಸಂಗತಿಯಾಗಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಮಾಯೆ ಉಳ್ಳಾಲ್ತಿಯಮ್ಮ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ.


ಬಯಸಿದ್ದನ್ನು ಪಡೆಯುವ ಕಾರಣಿಕದ ಮಾಯೆ..
ಕೈ ಮುಗಿದು ನಿಂತ ಭಕ್ತರನ್ನು ಹರಸುವ, ತಾನು ಇಚ್ಚಿಸಿದ್ದನ್ನು ಪಡೆಯುವ ಉಳ್ಳಾಲ್ತಿಯಮ್ಮ ತಾನು ಯಾವುದನ್ನು ಇಚ್ಚಿಸಿದ್ದೇನೋ ಅದನ್ನು ಖಂಡಿತ ಪಡೆದೇ ಪಡೆಯುತ್ತಾಳೆ. ಅಂತಹ ಕಾರಣಿಕ ಶಕ್ತಿ ಬಲ್ನಾಡಿನ ಶ್ರೀ ಉಳ್ಳಾಳ್ತಿಯಮ್ಮ. ಬೆಳ್ಳಿಯ ಪಲ್ಲಕ್ಕಿಯನ್ನು ಭಕ್ತರಿಂದ ಪಡೆದು ಅದರಲ್ಲಿ ಅಲಂಕಾರಗೊಂಡು, ಭಕ್ತನಿಂದ ಬೆಳ್ಳಿಯ ತಟ್ಟೆಯನ್ನು ಇಚ್ಚಿಸಿ, ಇದೀಗ ಪೂಜೆಗೆಂದು ಬೆಳ್ಳಿಯ ಆರತಿಯನ್ನು ಭಕ್ತರಿಂದ ಪಡೆದಿದ್ದಾಳೆ.
ಬಲ್ನಾಡ್‌ದ ಅಪ್ಪೆಗ್ ಬೊಳ್ಳಿದ ಆರತಿ:
ಭಕ್ತರೆಲ್ಲರು ಸೇರಿಕೊಂಡು ಉಳ್ಳಾಲ್ತಿಯಮ್ಮನಿಗೆ ಪೂಜೆಗೆ ಬೆಳ್ಳಿಯ ಆರತಿ ತಟ್ಟೆಯನ್ನು ನೀಡಬೇಕೆಂದು ಸಂಕಲ್ಪಿಸಿ ಇದೀಗ ಅದನ್ನು ಶುಕ್ರವಾರ ಪೂಜೆಯ ದಿನ ಸಮರ್ಪಣೆ ಮಾಡಿ ಕೃತಾರ್ಥರಾಗಿದ್ದಾರೆ. ಈ ಬೆಳ್ಳಿಯ ಆರತಿಯನ್ನು ದೈವಸ್ಥಾನಕ್ಕೆ ಸಮರ್ಪಣೆ ಮಾಡಿದ್ದು ಅದೇ ತಟ್ಟೆಯಲ್ಲೇ ಉಳ್ಳಾಲ್ತಿಯಮ್ಮ ಪೂಜೆ ಪಡೆದು ಧನ್ಯಲಾಗಿದ್ದಾಳೆ.
ಪ್ರತಿ ಶುಕ್ರವಾರ ಮಧ್ಯಾಹ್ನ ವಿಶೇಷ ಪೂಜೆ:
ಮೂಲಸ್ಥಾನದಲ್ಲಿ ಪ್ರತಿ ಶುಕ್ರವಾರ ಗಂಟೆ 10.30ಕ್ಕೆ ಪ್ರಾರ್ಥನೆ, 12ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುತ್ತದೆ.

ವಿಶೇಷ ದಿನದಂದು ಭಕ್ತರ ಧನಸಹಾಯ ಮತ್ತು ದೇವಿಯ ಸಂಕಲ್ಪ, ಸಹಕಾರ, ಪ್ರೇರಣೆಯೊಂದಿಗೆ ಬೆಳ್ಳಿಯ ಆರತಿ ದೈವಸ್ಥಾನಕ್ಕೆ ಸಮರ್ಪಣೆಯಾಗಿದೆ. ಸೇವೆಯಲ್ಲಿ ತೊಡಗಿಸಿಕೊಂಡ ಭಕ್ತರೆಲ್ಲರಿಗೂ ದೇವಿಯು ಸನ್ಮಂಗಲವನ್ನುಂಟುಮಾಡಲಿ. ಕಾರಣಿಕದ ತಾಯಿಯು ದೇಶದೆಲ್ಲೆಡೆ ವಕ್ಕರಿಸಿದ ಕೊರೊನಾ ವೈರಸ್‌ನ್ನು ನಿಯಂತ್ರಣಕ್ಕೆ ತಂದು ಸುಭೀಕ್ಷೆಯನ್ನು ನೀಡಲಿ. -ರವಿಚಂದ್ತ ನೆಲ್ಲಿತ್ತಾಯ, ಅರ್ಚಕರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ

ವೀಡಿಯೋಗಾಗಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.