ಸವಣೂರು ಸ.ಪ.ಪೂ. ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

ಚಿತ್ರ, ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜೂ.20 ರಂದು ಬೆಳಿಗ್ಗೆ ಜರಗಿತು.

ಲೋಕೋಪಯೋಗಿ ಇಲಾಖೆಯಿಂದ ಸುಮಾರು 55 ಲಕ್ಷ ರೂ.ಅಂದಾಜಿನಲ್ಲಿ ನಿರ್ಮಾಣವಾಗಲಿರುವ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮದ ಪೂಜಾ ವಿಧಿವಿಧಾನವನ್ನು ಹರೀಶ್ ಭಟ್ ನಾರಾವಿರವರು ನೇರವೇರಿಸಿದರು. ಕಾಲೇಜ್ ಕಟ್ಟಡ ಸಮಿತಿ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಶ್ಯ. ಕಾಲೇಜ್ ಅಭಿವೃದ್ಧಿ ಸಮಿತಿಯ ಕಾರ್ಯ ಅಧ್ಯಕ್ಷ ಗಿರಿಶಂಕರ್ ಸುಲಾಯ. ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ. ಸುಳ್ಯ ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ. ಕಾಲೇಜ್ ಪ್ರಾಶಂಪಾಲೆ ಪದ್ಮಾವತಿ ಎನ್.ಪಿ. ಉಪನ್ಯಾಸಕರಾದ ರಾಜಶೇಖರ್ ಮಮತಾ ಕೆ. ಕಾಲೇಜ್ ಕ್ಲಾಕ್ ಚಿತ್ರಾ ಶೆಟ್ಟಿ. ಬೇಬಿ ಮಾನ್ವಿ ಜಿ.ಎಸ್ ದೇವಶ್ಯ. ಮಾಸ್ಟರ್ ಧರಣ್ ದೇವಶ್ಯರವರುಗಳು ಉಪಸ್ಥಿತರಿದ್ದರು. ಕಟ್ಟಡದ ಗುತ್ತಿಗೆದಾರರಾದ ರಾಜೇಶ್ ಟಿ.ಆರ್.ಕದ್ರಿ ಸ್ವಾಗತಿಸಿದರು. ಕಟ್ಟಡದ ಮೇಲ್ವಿಚಾರಕ ಕರುಣಾಕರವರುಕಾರ್ಯಕ್ರಮದಲ್ಲಿ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.