ಪುತ್ತೂರು: ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾದ ರೂ. 25 ಕೋಟಿಯಲ್ಲಿ ನಗರಸಭೆಗೆ ರೂ. 4 ಕೋಟಿ ಅನುದಾನ ಒದಗಿಸಿದ್ದು, ಈ ಪೈಕಿ ರೂ. 1 ಕೋಟಿಯಲ್ಲಿ ನಗರಸಭೆ ಪ್ರತಿ ವಾಡ್ಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ತಲಾ ರೂ. 5 ಲಕ್ಷ ಹಂಚಿಕೆ ಮಾಡಿದ್ದು, ಈ ಪೈಕಿ ಜೂ. 20ರಂದು 9 ವಾರ್ಡ್ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಜೂ. 9ಕ್ಕೆ 12 ವಾರ್ಡ್ಗಳಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು.
ಶಂಕುಸ್ಥಾಪನೆ ವಿವರ:
ನಗರಸಭೆ ವಾರ್ಡ್ 10ರಲ್ಲಿ ಮುದ್ದೋಡಿ ರಸ್ತೆ ಅಭಿವೃದ್ಧಿ, ವಾರ್ಡ್ ೨೫ರಲ್ಲಿ ಬೆದ್ರಾಳ ಆರ್ಯಮುಗೇರು ರಸ್ತೆ ಅಭಿವೃದ್ಧಿ, ವಾರ್ಡ್ ೨೬ರಲ್ಲಿ ಕೆಮ್ಮಿಂಜೆ ಪಳಿಕೆ ವಿಜಯ ಸೇನರ ಮನೆಯ ಬಳಿಯ ರಸ್ತೆ ಅಭಿವೃದ್ದಿ, ವಾರ್ಡ್ ೨೪ರಲ್ಲಿ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿ ಸಂಪರ್ಕ ರಸ್ತೆ, ವಾರ್ಡ್ ೨೩ರ ಸುಧಾನ ಸ್ಪೋರ್ಟ್ಸ್ ಕ್ಲಬ್ ರಸ್ತೆ, ವಾರ್ಡ್ ೩೧ರ ಬಲ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಉಜ್ರುಪಾದೆ ರಸ್ತೆ, ವಾರ್ಡ್ ೩೦ ಕುಕ್ಕಾಡಿ ರಸ್ತೆ ಅಭಿವೃದ್ಧಿ, ವಾರ್ಡ್ ೩೦ ಕುಕ್ಕಾಡಿ ರಸ್ತೆ ಅಭಿವೃದ್ಧಿ, ವಾರ್ಡ್ ೨೧ರ ಹರೀಶ್ ಆಚಾರ್ಯ ಮನೆಯ ಬಳಿಯ ರಸ್ತೆ ಅಭಿವೃದ್ಧಿ, ವಾರ್ಡ್ ೨೦ರ ಬೊಳ್ಳಾಣ ಭರತ್ರವರ ಮನೆಯ ಬಳಿಯ ರಸ್ತೆ ಅಭಿವೃದ್ಧಿಗೆ ಶಾಸಕ ಸಂಜೀವ ಮಠಂದೂರು ಅವರು ಶಂಕುಸ್ಥಾಪನೆ ನೆರವೇರಿಸಿದರು. ನಗರಸಭಾ ಸದಸ್ಯರಾದ ಪ್ರೇಮ್ಕುಮಾರ್, ಬಿ.ರೋಹಿಣಿ, ಮಮತಾ ರಂಜನ್, ಬಾಲಚಂದ್ರ ಕರಿಯಾಲ, ಮನೋಹರ್ ಕಲ್ಲಾರೆ, ಪೂರ್ಣಿಮ ಕೋಡಿಯಡ್ಕ, ಶೀನಪ್ಪ ನಾಯ್ಕ, ಇಂದಿರಾ ಆಚಾರ್ಯ, ದೀಕ್ಷಾ ಪೈ ಅವರ ವಾರ್ಡ್ಗಳಲ್ಲಿ ಶಿಲಾನ್ಯಾಸ ಕಾಮಗಾರಿ ನಡೆಯಿತು.
ಮೂಲಭೂತ ಸೌಕರ್ಯಕ್ಕೆ ಆದ್ಯತೆ :
೯ ವಾರ್ಡ್ಗಳಲ್ಲೂ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮತದಾರರೇ ನನಗೆ ಪ್ರೇರಣೆ, ಅವರ ಋಣ ತೀರಿಸುವ ಕೆಲಸ ನಾನು ಮಾಡಲಾಗುತ್ತಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮಳೆ, ಪ್ರಾಕೃತಿಕ ವಿಕೋಪದಿಂದ ರಸ್ತೆ ಹಾನಿಯಾಗದಂತೆ ಅದಷ್ಟು ರಸ್ತೆಗಳನ್ನು ಕಾಂಕ್ರೀಟಿಕರಣ ಮತ್ತು ಇಂಟರ್ಲಾಕ್ ವ್ಯವಸ್ಥೆಗೆ ಅದ್ಯತೆ ನೀಡಲಾಗಿದೆ. ಈ ಭಾರಿ ಸುಮಾರು ನೂರಕ್ಕೆ ನೂರರಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ. ಇದರ ಜೊತೆಗೆ ರಸ್ತೆ ಚೆನ್ನಾಗಿ ಉಳಿಯಲು ಚರಂಡಿ ವ್ಯವಸ್ಥೆಗೂ ಆದ್ಯತೆ ಕೊಡಲಾಗಿದೆ. ಒಟ್ಟಿನಲ್ಲಿ ನಗರಸಭೆಯಲ್ಲಿ ೨೪ ಗಂಟೆಗಳು ನೀರು ಮತ್ತು ವಿದ್ಯುತ್ ಮತ್ತು ವರ್ಷದ ೩೬೫ ದಿನವೂ ಓಡಾಡಲು ರಸ್ತೆಗಳು, ಸ್ವಚ್ಛತೆಯ ದೃಷ್ಟಿಯಿಂದ ಮೂಲಭೂತವಾಗಿ ಏನೆನು ಬೇಕೋ ಅದನ್ನು ಮಾಡುವ ಕೆಲಸ ಆಗುತ್ತಿದೆ. ಇದಕ್ಕಾಗಿ ವಾರ್ಡ್ ಸದಸ್ಯರೇ ಮುತುವರ್ಜಿ ವಹಿಸಿ ಕಾಮಗಾಗಿ ನಿರ್ವಹಿಸಬೇಕು. ಇದರಿಂದ ವಾರ್ಡ್ನ ಜನರೊಂದಿಗೆ ಕಮಿಂಟ್ಮೆಂಡ್ ಆಗುತ್ತದೆ ಎಂದರು.
ಪ್ರಧಾನಿಯವರಿಂದ ಹೆಚ್ಚುವರಿ ಅನುದಾನ:
ಪ್ರಧಾನಿ ನರೇಂದ್ರ ಮೋದಿಯವರು ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಹೆಚ್ಚುವರಿ ಅನುದಾನ ಕೊಟ್ಟಿದ್ದಾರೆ. ನಗರಸಭೆಗೂ ಅನುದಾನ ಬರಲಿಕ್ಕಿದೆ. ಹೆಚ್ಚುವರಿ ಆದಾಯವನ್ನು ನಗರಸಭೆಯಿಂದ ಆಗಬೇಕು. ಅರ್ಥಿಕ ಕ್ರೂಡಿಕರಣದಿಂದ ಎಲ್ಲಾ ರಸ್ತೆಗಳು ಮುಂದಿನ ದಿನಗಳಲ್ಲಿ ಕಾಂಕ್ರೀಟ್ ಕಾಣಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪೌರಾಯುಕ್ತೆ ರೂಪಾ ಶೆಟ್ಟಿ, ನಗರಸಭಾ ಸದಸ್ಯರಾದ ವಿದ್ಯಾ ಆರ್ ಗೌರಿ, ಶಿವರಾಮ ಸಪಲ್ಯ, ನಗರಸಭೆ ಅಭಿಯಂತರ ಶ್ರೀಧರ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ನಗರಸಭಾ ಮಾಜಿ ಸದಸ್ಯ ಚಂದ್ರಸಿಂಗ್, ಮಾಜಿ ಪುರಸಭೆ ಸದಸ್ಯ ಹೆಚ್.ಉದಯ, ಬಿಜೆಪಿ ನಗರ ಯುವಮೋರ್ಛಾದ ಸಚಿನ್ ಶೆಣೈ, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಇಂಟಕ್ ಉಪಾಧ್ಯಕ್ಷ ಪ್ರಸನ್ನ ಶೆಟ್ಟಿ, ಜಯಂತ್ ಗೌಡ, ಅರವಿಂದ್, ರಾಕೇಶ್, ತಾ.ಪಂ ಮಾಜಿ ಸದಸ್ಯ ಜೊಹರಾ ನಿಸಾರ್ ಅಹಮ್ಮದ್, ಅಶೋಕ್ ಬಲ್ನಾಡು, ಬಿಎಮ್ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಇಂದು ಶೇಖರ್, ಶಿವ ಭಟ್ ಸೇರಿದಂತೆ ಹಲವಾರು ಮಂದಿ ಆಯಾ ವಾರ್ಡ್ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತಿದ್ದರು.
ತಿಂಗಳೊಳಗೆ ಖಾತಾ ಸಮಸ್ಯೆ ಇತ್ಯರ್ಥ: ನಗರಾಭಿವೃಧ್ಧಿ ಮತ್ತು ಪೌರಾಡಳಿತ ಇಲಾಖೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃಧ್ಧಿ ಶುಲ್ಕ ಪಾವತಿ, ಕಟ್ಟಡ ಪರವಾನಿಗೆ,ತಂತ್ರಜ್ಞಾನ, ಕಟ್ಟಡ ಪರವಾನಿಗೆ ಮತ್ತು ಖಾತೆ ನೀಡಲು ಇರುವ ಸಮಸ್ಯೆಗಳ ಕುರಿತು ದ.ಕ.ಜಿಲ್ಲೆಗೆ ಸಂಬಂಧಿಸಿ ಒಂದು ತಿಂಗಳೊಳಗೆ ಖಾತಾ ಮತ್ತು ನಗರಸಭೆ ಸಮಸ್ಯೆಗಳ ಕುರಿತು ಇತ್ಯರ್ಥ ಮಾಡಲಾಗುವುದು ಎಂದು ನಗರಾಭಿವೃಧ್ಧಿ ಸಚಿವ ಬಿ ಎ ಬಸವರಾಜರವರು ಭರವಸೆ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.