HomePage_Banner
HomePage_Banner
HomePage_Banner

ಜೂ.21ರಿಂದ ರೇಡಿಯೋ ಪಾಂಚಜನ್ಯದಲ್ಲಿ ಯೋಗ ಶಿಕ್ಷಣ ಸರಣಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ಯೋಗ ದಿನಾಚರಣೆಯನ್ನು ಕೋವಿಡ್ 19ರ ಬಿಕ್ಕಟ್ಟಿನಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಲು ಭಾರತ ಸರಕಾರ ರೂಪಿಸಿದ ಯೋಜನೆಗಳಂತೆ ’ಮನೆಯೊಂದಿಗೆ ಯೋಗ ಕುಟುಂಬದೊಂದಿಗೆ ಯೋಗ’ ಈ ವರ್ಷದ ಧ್ಯೇಯವಾಗಿರುವ ಯೋಗ ದಿನಾಚರಣೆಯನ್ನು ರೇಡಿಯೋ ಪಾಂಚಜನ್ಯ 90.8 ಎಫ್.ಎಂ.ನಲ್ಲಿ ವಿಶಿಷ್ಟ ಯೋಗ ಸರಣಿ ಕಾರ್ಯಕ್ರಮದೊಂದಿಗೆ ಆಚರಿಸಲು ಸಿದ್ಧತೆ ನಡೆಸಿದೆ.


ಜೂ. 21ರಂದು ಯೋಗದಿನಾಚರಣೆಯ ಅಂಗವಾಗಿ ಓಂಕಾರ ಯೋಗ ಚಿಕಿತ್ಸಕರು ಹಾಗೂ ಅಖಿಲ ಭಾರತೀಯ ಯೋಗ ಶಿಕ್ಷಣ ವಿಷಯ ಪ್ರಮುಖರಾದ ಕರುಣಾಕರ ಉಪಾಧ್ಯಾಯ ಅವರೊಂದಿಗೆ ವಿಶ್ವ ಯೋಗದ ದಿನದ ಮಹತ್ವದ ಕುರಿತು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ನಾಕ್ ಅವರಿಂದ ಸಂದರ್ಶನ ನಡೆಯಲಿದೆ. ರ್ಯಕ್ರಮವು ಬೆಳಗ್ಗೆ ೭ ರಿಂದ ೯ರವರೆಗೆ ಮರುಪ್ರಸಾರ ಸಂಜೆ ೬ ರಿಂದ ೮ರವರೆಗೆ ಪ್ರಸಾರಗೊಳ್ಳಲಿದೆ.

ಸರಣಿ ೧: ಜೂ. ೨೨ರಂದು ಓಂಕಾರ ಯೋಗ ಚಿಕಿತ್ಸಕರು ಹಾಗೂ ಅಖಿಲ ಭಾರತೀಯ ಯೋಗ ಶಿಕ್ಷಣ ವಿಷಯ ಪ್ರಮುಖರಾದ ಕರುಣಾಕರ ಉಪಾಧ್ಯಾಯ ಅವರಿಂದ ಯಮ ಮತ್ತು ನಿಯಮ ಈ ವಿಷಯವಾಗಿ ಸಂವಾದ, ಸರಣಿ ೨: ಜೂ. ೨೩ರಂದು ಯೋಗ ಚಿಕಿತ್ಸಕರು ಮತ್ತು ಸಲಹೆಗಾರರಾದ ಡಾ. ಮಹಾಬಲ ಅವರಿಂದ ಆಸನ ಈ ವಿಷಯವಾಗಿ ಸಂವಾದ, ಸರಣಿ ೨: ಜೂ. ೨೪ ಮತ್ತು ೨೫ರಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ಯೋಗ ಶಿಕ್ಷಕರಾದ ಸಂಜಯ್ ಸಿ.ವಿ. ಅವರಿಂದ ಪ್ರಾಣಾಯಾಮ ಮತ್ತು ಪ್ರತ್ಯಾಹಾರ ಈ ವಿಷಯವಾಗಿ ಸಂವಾದ, ಸರಣಿ ೩: ಜೂ. ೨೬ರಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗಶಿಕ್ಷಕರಾದ ಶರಾವತಿ ರವಿನಾರಾಯಣ ಅವರಿಂದ ಧಾರಣಾ ಈ ವಿಷಯವಾಗಿ ಸಂವಾದ, ಸರಣಿ ೪: ಜೂ. ೨೭ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ವೀಣಾ ಸರಸ್ವತಿ ಅವರಿಂದ ಧ್ಯಾನ ಈ ವಿಷಯವಾಗಿ ಸಂವಾದ, ಸರಣಿ ೫: ಜೂ. ೨೮ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿರುವ ಯೋಗ ಚಿಕಿತ್ಸಕರಾದ ಡಾ. ಚೇತನಾ ಮುದ್ರಜೆ ಅವರಿಂದ ಯೋಗಮುದ್ರೆಗಳು ಈ ವಿಚಾರವಾಗಿ ಸಂವಾದ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.