Home_Page_Advt
Home_Page_Advt
Home_Page_Advt

ಸವಣೂರು ಶೈಲಿ ಟೈಲರ್ ಬಾಲಚಂದ್ರ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್ ಸವಣೂರು ವಲಯಾಧ್ಯಕ್ಷ, ನರಿಮೊಗರು ಗ್ರಾಮದ ಬಜಪ್ಪಳ ನಿವಾಸಿ ಬಾಲಚಂದ್ರ (50)ಎಂಬವರು ಹೃದಯಾಘಾತದಿಂದಾಗಿ ಜೂ. 20ರಂದು ನಿಧನರಾಗಿದ್ದಾರೆ.

ಸವಣೂರಿನಲ್ಲಿ ಕಳೆದ ೨೦ ವರ್ಷಗಳಿಂದ ಶೈಲಿ ಟೈಲರ್ಸ್ ಎಂಬ ಸ್ವಂತ ಅಂಗಡಿಯಲ್ಲಿ ಅವರು ಟೈಲರಿಂಗ ವೃತ್ತಿಯನ್ನು ನಡೆಸುತ್ತಿದ್ದರು. ಎಂದಿನಂತೆ ಜೂ. ೨೦ರಂದು ಬೆಳಿಗ್ಗೆ ಅವರು ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಅಂಗಡಿಗೆ ಬಾಗಿಲು ಹಾಕಿ ಊಟಕ್ಕೆಂದು ಮನೆಗೆ ಬಂದಿದ್ದರು. ಊಟ ಮುಗಿಸಿದ ಬಳಿಕ ಮನೆಯಲ್ಲಿ ಕೆಲಸದವರ ಜೊತೆ ತೋಟದ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಅಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆನ್ನೆಲಾಗಿದೆ.
ಮೃತರು ತಾಯಿ ಚಂದಮ್ಮ, ಪತ್ನಿ ನರಿಮೊಗರು ಸಾಂದೀಪನಿ ಶಾಲೆಯ ಸಹ ಶಿಕ್ಷಕಿ ಪ್ರಮೀಳಾ, ಪುತ್ರರಾದ ಪ್ರೀತಂ ಹಾಗೂ ನಿಖಿಲ್, ಸಹೋದರರಾದ ಭರತ್ ಪ್ರಿಂಟರ್ಸ್ ಮ್ಹಾಲಕ ತಿಮ್ಮಪ್ಪ ಗೌಡ, ರುಕ್ಮಯ ಗೌಡ, ದಿವಾಕರ ಗೌಡ, ಸಹೋದರಿಯರಾದ ಪದ್ಮಾವತಿ ಹಾಗೂ ವಿನಯರವರನ್ನು ಅಗಲಿದ್ದಾರೆ.
ಸವಣೂರು ವರ್ತಕರ ಸಂಘದ ವತಿಯಿಂದ ಬಾಲಚಂದ್ರ ಗೌಡ ರವರ ವಿಧಾನಕ್ಕೆ ಎಲ್ಲಾ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಶೋಕ ವ್ಯಕ್ತಡಿಸಿದರು ಎಂದು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಎ. ಹಾಗೂ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.